ಲೇಖಕರಲ್ಲಿ ಮೊದಲು ಕಂಪ್ಯೂಟರ್ ಬಳಸಿದ್ದು ತೇಜಸ್ವಿ
ಕನ್ನಡಪ್ರಭ ವಾರ್ತೆ, ಸಿಂಧನೂರು, ಜೂ.2
ಕಥೆ, ಕಾವ್ಯ, ನಾಟಕ, ಕಾದಂಬರಿ ಹೀಗೆ ಸಾಹಿತ್ಯದ ನಾನಾ ಮಜಲುಗಳಲ್ಲಿ ನಾಲ್ಕು ದಶಕಗಳ ಕಾಲ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅಪಾರ ತಾಳ್ಮೆ ಹೊಂದಿದವರು. ಲೇಖಕರಲ್ಲಿ ಮೊದಲು ಕಂಪ್ಯೂಟರ್ ಬಳಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಸರ್ಕಾರಿ ಪದವಿ ಕಾಲೇಜಿನ ಸಹ ಪ್ರಾಧ್ಯಾಪಕ ನಾಗಣ್ಣ ಕಿಲಾರಿ ತಿಳಿಸಿದರು.
ನಗರದ ಬಡಿಬೇಸ್ ವೃತ್ತದಲ್ಲಿರುವ ಸಾವಯವ ಕೃಷಿಕ ವೈ.ಎಸ್. ರೆಡ್ಡಿ ಅವರ ನಿವಾಸದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತನಿಂದ ಹಮ್ಮಿಕೊಂಡಿದ್ದ ಮಾಸಿಕ ಕಾರ್ಯಕ್ರಮ ಮನೆಯಂಗಳದಲ್ಲಿ ಸಾಹಿತ್ಯ ಸಿಂಚನ ಹಾಗೂ ಕವನ ವಾಚನ ಕಾರ್ಯಕ್ರಮದಲ್ಲಿ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಬದುಕು- ಬರೆಹ ಕುರಿತು ಉಪನ್ಯಾಸ ನೀಡಿದರು.
ಪರಿಸರ ಕುರಿತ ಜ್ಞಾನ ಅಪಾರ: ಪರಿಸರ ಪಕ್ಷಿಗಳ ಬಗ್ಗೆ ಸಲೀಂ ಅಲಿ ಅವರ ನಂತರ ಪೂರ್ಣಚಂದ್ರ ತೇಜಸ್ವಿ ಅವರೇ ಹೆಚ್ಚು ಅರಿತವರಾಗಿದ್ದರು. ವೈಜ್ಞಾನಿಕ ಹಾಗೂ ಪರಿಸರ ಮತ್ತು ಕೃಷಿಯ ಕುರಿತು ಅಮೂಲ್ಯವಾದ ಕೃತಿಗಳನ್ನು ರಚಿಸಿದ್ದು, ಅವರ ಕೃತಿಗಳಲ್ಲಿ ಕಾಡು, ಗಿಡ, ಮರ ಪಕ್ಷಿಗಳ, ಬಗ್ಗೆ ಹಾಗೂ ಅವರು ರಚಿಸಿದ ಪಾತ್ರಗಳ ಬಗ್ಗೆ ವಿಶ್ಲೇಷಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಮಾದೇವಿ ಶಂಭೋಜಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕವಿಗಳು ಕಾವ್ಯದ ಮೂಲಕ ಸಮಾಜದ ಬದಲಾವಣೆಗೆ ಪ್ರಯತ್ನಿಸಬೇಕು ಎಂದು ಹೇಳಿದರು.
ಮಹಿಳಾ ಬಸವ ಕೇಂದ್ರದ ಬಸಮ್ಮ ತಾಳಿಕೋಟಿ, ಸಾವಯವ ಕೃಷಿಕ ವೈ.ಎಸ್. ರೆಡ್ಡಿ, ಷಣ್ಮುಖಗೌಡ್ರು, ಕೆ.ಅಯ್ಯನಗೌಡ ಮಲ್ಲಾಪೂರ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕವಿಗಳಾದ ವಿ.ಸಿ. ಪಾಟೀಲ್, ಬೀರಪ್ಪ ಶಂಭೋಜಿ, ಪಂಪಾರೆಡ್ಡಿ ಅರಳಹಳ್ಳಿ, ಬಸವರಾಜ ಕುಂಬಾರ, ಮಂಜುನಾಥ, ಅಮರೇಶ ಗುರಿಕಾರ, ಕೆ.ಬಾಳಪ್ಪ, ಶಂಕರದೇವರು ಹಿರೇಮಠ, ಶಿವಗೀತಾ, ಬಸಮ್ಮ ತಾಳಿಕೋಟಿ ಮತ್ತಿತರರು ಕವನ ವಾಚನ ಮಾಡಿದರು. ಬಸಮ್ಮ ತಾಳಿಕೋಟಿ ಪ್ರಾರ್ಥಿಸಿದರು. ಕವಿ ಬಸವರಾಜ ಕುಂಬಾರ ಸ್ವಾಗತಿಸಿದರು. ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಶ್ರೀಶೈಲ್ ಕೌದಿ ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

