ರಾಯಚೂರು

ಡೆಪೋಡಿಲ್ಸ್, ದುದ್ದುಪುಡಿ ಪರವಾನಗಿ ರದ್ದತಿಗೆ ಮನವಿ

Published On :

ಸಿಂಧನೂರು: ನಗರದ ಡೆಫೋಡಿಲ್ಸ್ ಕನ್ನಡ ಮತ್ತು ತೆಲುಗು ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ದುದ್ದುಪುಡಿ ಕನ್ನಡ ಹಾಗೂ ತೆಲುಗು ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಶಿಕ್ಷಣ ಕಾಯ್ದೆಯನ್ನು ಉಲ್ಲಂಘಿಸಿರುವುದರಿಂದ ಅವೆರಡು ಶಾಲೆಗಳನ್ನು ರದ್ದುಪಡಿಸುವಂತೆ ಜೈ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಜಯ ಕರ್ನಾಟಕ ಸಂಘಟನೆಗಳು ಜಂಟಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದವು.
ಭಾನುವಾರ ನಗರಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಬಸವರಾಜ್ ಬಡಿಗೇರ, ಜೈ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಅಮರೇಶ ಗಿರಿಜಾಲಿ ಆರ್.ಟಿ.ಇ. ಕಾಯ್ದೆಯಡಿಯಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳು ಪೂರ್ವಪ್ರಾಥಮಿಕ ಮತ್ತು ಒಂದನೇ ತರಗತಿಯಿಂದ ಶೇಕಡಾ 25 ರಷ್ಟು ಉಚಿತ ಪ್ರವೇಶ ನೀಡಬೇಕೆಂದು ನಿಯಮವಿದ್ದರೂ, ದುದ್ದುಪುಡಿ ಮತ್ತು ಡೆಫೋಡಿಲ್ಸ್ ಆಡಳಿತ ಮಂಡಳಿಗಳು ಸರ್ಕಾರದ ನಿಯಮವನ್ನು ಉಲ್ಲಂಘಿಸಿವೆ. ಈ ಕಾಯ್ದೆಯು ಅಲ್ಪಸಂಖ್ಯಾತರ ಶಾಲೆಗಳಿಗೆ ಅನ್ವಯಿಸುವುದಿಲ್ಲ. ಆದರೆ ಈ ಎರಡು ಶಾಲೆಗಳಿಗೆ ಆರ್ಟಿಇ ಕಾಯ್ದೆ ಅನ್ವಯಿಸುತ್ತದೆ. ಆದಾಗ್ಯೂ ಕಾಯ್ದೆಯನ್ನು ಗಾಳಿಗೆ ತೂರಿ ಶಿಕ್ಷಣಾಧಿಕಾರಿಗಳ ಆದೇಶವನ್ನು ಸಹ ಉಲ್ಲಂಘಿಸಿದ್ದಾರೆಂದು ಸಿಎಂ ಗಮನಕ್ಕೆ ತಂದರು.
ತಮ್ಮ ಶಾಲೆಯನ್ನು ಅಲ್ಪಸಂಖ್ಯಾತರ ಶಾಲೆಯೆಂದು ಹೇಳುತ್ತಿರುವ ಅವರಿಗೆ ಯಾವುದೇ ಕಾನೂನಿನ ಬೆಂಬಲ ಇಲ್ಲ ಎನ್ನುವುದನ್ನು ಮರೆತಿದ್ದಾರೆಂದು ಆಪಾಧಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಕ್ರಮಕ್ಕೆ ಮುಂದಾಗದೆ ಮೌನಕ್ಕೆ ಜಾರಿದ್ದು, ಅವರ ವಿರುದ್ಧ ಸೂಕ್ತಕ್ರಮ ಜರುಗಿಸಬೇಕೆಂದು ಅಮರೇಶ ಗಿರಿಜಾಲಿ, ಮುನ್ನಾ, ನರಸಪ್ಪ, ನಾಗೇಶ ಮರಾಠಿ, ಎಂ.ಎಸ್.ಮುತ್ತು, ಆಲಂಬಾಷಾ ಗೋಮಸರ್, ಕೆ.ಹನುಮಂತ ಮತ್ತಿತರರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.