ರಾಯಚೂರು

ಟಿ.ಆರ್. ರಾವ್ ನಿಧನಕ್ಕೆ ಸಂತಾಪ

Published On :

ರಾಯಚೂರು: ನಗರದ ನಿವೃತ್ತ ಅಧಿಕಾರಿ ಹಾಗೂ ಲೇಖಕ ಟಿ.ಆರ್.ರಾವ್ ನಿಧನಕ್ಕೆ ದಾಸಸಾಹಿತ್ಯ ಅಧ್ಯಯನ ಕೇಂದ್ರ ಸಂತಾಪ ವ್ಯಕ್ತಪಡಿಸಿದೆ. ಈ ಕುರಿತು ಈಚೆಗೆ ಸಭೆ ನಡೆಸಿದ ಅಧ್ಯಯನ ಕೇಂದ್ರದ ಪ್ರಮುಖರು, ಟಿ.ಆರ್. ರಾವ್ ಅವರು ಕೇಂದ್ರದ ಟ್ರಸ್ಟಿ, ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದರು ಎಂದು ಶ್ಲಾಘಿಸಿದರು. ಸಭೆಯಲ್ಲಿ ಎಂ.ನರಸಿಂಗರಾವ್, ಡಾ.ಶೀಲಾದಾಸ್, ಪ್ರಾಣೇಶ್ ಮುತಾಲಿಕ್, ಡಾ.ಜಯಲಕ್ಷ್ಮಿ ಮಂಗಳಮೂರ್ತಿ, ರಾಜಶ್ರೀ ಕಲ್ಲೂರಕರ್, ವಸಂತರಾವ್ ಬಾಗಲವಾಡ ಸೇರಿದಂತೆ ಅನೇಕರಿದ್ದರು.
ಶೋಕ: ನಿವೃತ್ತ ಅಧಿಕಾರಿ ಟಿ.ಆರ್.ರಾವ್ ಅವರ ನಿಧನಕ್ಕೆ ಎಐಡಿಎಸ್‌ಒ ಸೇರಿದಂತೆ ವಿವಿಧ ಸಂಘಟನೆಗಳು ಶೋಕ ವ್ಯಕ್ತಪಡಿಸಿವೆ. ರಾಯಚೂರು ಸ್ವಚ್ಛಗೊಳಿಸಿ ಹೋರಾಟ ಸಮಿತಿ, ಎಐಡಿಎಸ್ ಒ, ಎಐಎಂಎಸ್ ಎಸ್ ಸೇರಿ ವಿವಿಧ ಸಂಘಟನೆಯ ಪ್ರಮುಖರಾದ ಅಪರ್ಣಾ ಬಿ.ಆರ್., ಮಹೇಶ್ ಚೀಕಲಪರ್ವಿ, ಶರಣಪ್ಪ ಉದ್ಬಾಳ್, ಚೇತನಾ ಬನಾರೆ ಮತ್ತಿತರರು ಸಂಘಟನೆಗಳು ಆಯೋಜಿಸಿದ್ದ ವಿವಿಧ ಸಮ್ಮೇಳನಗಳಿಗೆ ಶ್ರಮಿಸಿದ್ದ ಟಿ.ಆರ್.ರಾವ್ ಅವರ ಕೊಡುಗೆ ಅಪಾರ. ಅದೇ ರೀತಿ ರಾಯಚೂರು ಸ್ವಚ್ಛಗೊಳಿಸಿ ಹೋರಾಟ ಸಮಿತಿ ಆಯೋಜಿಸಿದ್ದ ನಾಗರಿಕರ ಹೋರಾಟದಲ್ಲಿಯೂ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು ಎಂದು  ತಿಳಿಸಿದ್ದಾರೆ.
ಸಂತಾಪ: ಹಿರಿಯ ನಿವೃತ್ತ ಅಧಿಕಾರಿ ಟಿ.ಆರ್.ರಾವ್ ನಿಧನಕ್ಕೆ ನಗರದ ವಿ.ಎಸ್.ಕಾಂತನವರ್ ಪ್ರತಿಷ್ಠಾನದ ವಿ.ಎಸ್. ಕಾಂತನವರ್, ಸತ್ಯನಾರಾಯಣ ಮುಜುಂದಾರ್, ಡಾ.ಅರುಣಾ ಹಿರೇಮಠ, ಶಶಿಧರ್ ಸೇರಿದಂತೆ ಅನೇಕರು ಶೋಕ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.