ಸರ್ಕಾರಿ ಪಪೂ ವಿಜ್ಞಾನ ಕಾಲೇಜಿಗೆ ವಿದ್ಯಾರ್ಥಿಗಳ ಕೊರತೆ
ಸಿಂಧನೂರು: ನಗರದ ಪಿಡಬ್ಲ್ಯೂಡಿ ಕ್ಯಾಂಪ್ನಲ್ಲಿರುವ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳ ಕೊರತೆ ಅನುಭವಿಸುತ್ತಿದೆ. ಸುಸಜ್ಜಿತ ಕಟ್ಟಡ ಮತ್ತು ನುರಿತ ಉಪನ್ಯಾಸಕರನ್ನು ಹೊಂದಿದ್ದರೂ, ಖಾಸಗಿ ಕಾಲೇಜ್ಗಳ ಭರಾಟೆ ನಡುವೆ ಬೆಳಕಿಗೆ ಬರದೇ ಗೌಣವಾಗಿದೆ. ರಸಾಯನ ಶಾಸ್ತ್ರ, ಭೌತಶಾಸ್ತ್ರ, ಗಣಿತ ವಿಷಯ ಬೋಧಕರಿದ್ದು, ಜೀವಶಾಸ್ತ್ರದ ಉಪನ್ಯಾಸಕರೊಬ್ಬರು ಎರವಲು ಸೇವೆಗೆ ಹೋಗಿದ್ದಾರೆ.
ಶುಲ್ಕ ಅತಿ ಕಡಿಮೆ: ಖಾಸಗಿ ಕಾಲೇಜ್ಗಳನ್ನು ಗಮನಿಸಿದರೆ ಪ್ರವೇಶ ಶುಲ್ಕ ಅತಿ ಕಡಿಮೆ ಇದೆ. 2012-13ನೇ ಸಾಲಿನ ಫಲಿತಾಂಶ 2012-13ನೇ ಸಾಲಿನಲ್ಲಿ ಒಟ್ಟು 13 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ ಒಬ್ಬ ವಿದ್ಯಾರ್ಥಿ ಪ್ರಥಮ ದರ್ಜೆ, ಮೂವರು ದ್ವಿತೀಯ ದರ್ಜೆ ಹಾಗೂ ಒಬ್ಬ ವಿದ್ಯಾರ್ಥಿ ತೃತೀಯ ದರ್ಜೆಯಲ್ಲಿ ಉತ್ತೀರ್ಣನಾಗಿದ್ದಾನೆ. ತೃತೀಯ ದರ್ಜೆಯಲ್ಲಿ ಎಸ್ಎಸ್ಎಲ್ಸಿ ಪಾಸಾದ ವಿದ್ಯಾರ್ಥಿಯೊಬ್ಬ ಕಾಲೇಜ್ಗೆ ಸೇರಿಕೊಂಡು ಸತತ ಪರಿಶ್ರಮದೊಂದಿಗೆ ಉತ್ತೀರ್ಣನಾಗಿದ್ದಾನೆ.
ಸರ್ಕಾರಿ ಶಾಲೆ ಇರುವಾಗ ಖಾಸಗಿ ಏಕೆ?: ಸರ್ಕಾರಿ ಶಾಲೆಯಲ್ಲಿ ಉಪನ್ಯಾಸಕರು ಹಾಗೂ ಪ್ರಯೋಗಾಲಯ ವ್ಯವಸ್ಥೆ ಇರುವಾಗ ವಿದ್ಯಾರ್ಥಿಗಳು ಮೀನಮೇಷ ಎಣಿಸದೇ, ಪ್ರವೇಶಾವಕಾಶ ಪಡೆದು ಉತ್ತಮ ಫಲಿತಾಂಶ ಪಡೆದುಕೊಳ್ಳಬೇಕಾಗಿದೆ. ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಕೇಳಿದಷ್ಟು ದುಡ್ಡು ಕೊಡುವುದು ತಪ್ಪುತ್ತದೆ ಎಂದು ಪಾಲಕರೊಬ್ಬರು ಅನಿಸಿಕೆ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

