ರಾಯಚೂರು

'ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ'

Published On :

ಮಸ್ಕಿ: ಪರಿಶ್ರಮವೇ ಸಾಧನೆಗೆ ಕಾರಣವೆಂದು ರಾಯಚೂರು ನಗರ ಕ್ಷೇತ್ರದ ಶಾಸಕ ಡಾ. ಶಿವರಾಜ ಪಾಟೀಲ್ ಹೇಳಿದರು.
ಭಾನುವಾರ ಸ್ವಗ್ರಾಮ ಸಾನಬಾಳದಲ್ಲಿ ಆಯೋಜಿಸಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿ, ಗ್ರಾಮದಲ್ಲಿ ಕಳೆದ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿ ಶಿಕ್ಷಣಕ್ಕೆ ಮಹತ್ವ ನೀಡಿದ್ದೇ ತಾವು ಉನ್ನತ ಹುದ್ದೆಗೇರಲು ದಾರಿ ಮಾಡಿತು ಎಂದು ಹೇಳಿದರು.
ದೇವಸ್ಥಾನದ ಅಭಿವೃದ್ಧಿಗೆ ಆರ್ಥಿಕ ಸಹಾಯ ನೀಡುವುದಾಗಿ ತಿಳಿಸಿದ ಅವರು, ತಮ್ಮ ಯಶಸ್ಸಿಗೆ ಎಲ್ಲರೂ ಕಾರಣರಾಗಿದ್ದಾರೆಂದು ಹೇಳಿದರು. ಶರಣಪ್ಪಗೌಡ ಮಾಲಿಪಾಟೀಲ್, ಪ್ಯಾಟಯ್ಯ ಸ್ವಾಮಿ, ದೊಡ್ಡ ಬಸನಗೌಡ, ರಾಜಶೇಖರ, ವೀರೇಶ್ ಸಿಂಧನೂರು, ವಿರುಪಾಕ್ಷಿ ಬಳಿಗಾರ, ಮಹಾಂತೇಶ್ ಮೇಟಿ, ಹಂಪನಗೌಡ ನೀರಮಾನ್ವಿ, ಉಪನ್ಯಾಸಕ ಸಂಗಮೇಶ್ ಕುಂಬರ, ನಾಗರಾಜ ಧನಶೆಟ್ಟಿ ಮತ್ತಿತರರಿದ್ದರು.
ಇದಕ್ಕೂ ಮೊದಲು ಶಾಸಕ ಡಾ. ಶಿವರಾಜ ಪಾಟೀಲ್ ಸ್ವಗ್ರಾಮ ಸಾನಬಾಳಕ್ಕೆ ಆಗಮಿಸುತ್ತಿದ್ದಂತೆ ಅವರನ್ನು ಡೊಳ್ಳು ಕುಣಿತ ಇನ್ನಿತರ ವಾದ್ಯಗಳೊಂದಿಗೆ ಅದ್ಧೂರಿ ಸ್ವಾಗತ ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.