ರಾಯಚೂರು

ಡೊನೇಷನ್ ಹಾವಳಿ ತಡೆಗೆ ಆಗ್ರಹ

Published On :

ಲಿಂಗಸ್ಗೂರು: ತಾಲೂಕಿನ ಹಟ್ಟಿ ಗ್ರಾಮದ ಸಂತ ಅನ್ನಮ್ಮ ಹಾಗೂ ಡಾ. ಇ.ಎ. ಸಿಮೆಂಡ್ಸ್ ಶಾಲೆಗಳಲ್ಲಿ ಪ್ರವೇಶ ನೀಡಲು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ವಿದ್ಯಾರ್ಥಿಗಳಿಂದ ಡೊನೇಷನ್ ಪಡೆಯುತ್ತಿದ್ದು, ಕೂಡಲೇ ಶಿಕ್ಷಣ ಸಂಸ್ಥೆಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ ವತಿಯಿಂದ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ ಅಮರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಸದರಿ ಶಾಲೆಗಳಲ್ಲಿ ಎಲ್‌ಕೆಜಿ ಅರ್ಜಿಗೆ 200 ಪಡೆಯುತ್ತಾರೆ ಅಲ್ಲದೆ 30ರಿಂದ 40 ಸಾವಿರ ಡೋನೆಷನ್ ವಸೂಲಿ ಮಾಡುತ್ತಾರೆ. ಬೋಧನೆ ಶುಲ್ಕ ತಿಂಗಳಿಗೆ 375ರಿಂದ 450 ಪಡೆಯುತ್ತಾರೆ. ಹಣ ಪಡೆದ ಬಗ್ಗೆ ರಶೀದಿ ನೀಡುವುದಿಲ್ಲ. ಪ್ರತಿವರ್ಷ ಕೋಟಿಗಟ್ಟಲೆ ಹಣ ವಸೂಲಿ ಮಾಡುವ ಶಾಲೆಗಳ ಕಟ್ಟಡಗಳು ತುಂಬಾ ಹಳೆಯದಾಗಿದ್ದು ಯಾವಾಗ ಬೀಳುತ್ತವೆ ಎಂಬ ಭೀತಿಯಲ್ಲಿ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಕೂಡಲೇ ಸದರಿ ಶಾಲೆಗಳ ಮೇಲೆ ಉಗ್ರ ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಎಸ್‌ಎಫ್‌ಐನ ಜಿಲ್ಲಾದ್ಯಕ್ಷ ಎಸ್.ರಂಗನಾಥ, ಭೀಮಣ್ಣ, ಯಲ್ಲಪ್ಪ, ಪ್ರಶಾಂತ, ಎನ್.ಗುರುಪಾದಪ್ಪ, ಚೆನ್ನಬಸವ, ಮಹೇಶ, ಸರಸ್ವತಿ, ನಿಂಗಪ್ಪ ಯಂಕಮ್ಮ ಸೇರಿದಂತೆ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.