ಅಪಘಾತ; ಲಿಂಗಸ್ಗೂರಿನ ಇಬ್ಬರ ಸಾವು
ಚಳ್ಳಕೆರೆ: ತಾಲೂಕಿನ ಸಾಣಿಕೆರೆ ಗ್ರಾಮದ ಬಳಿ ರಾಯಚೂರು ಜಿಲ್ಲೆ ಲಿಂಗಸ್ಗೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದು, ಟಾಟಾ ಏಸ್ ವಾಹನಕ್ಕೆ ಹಿರಿಯೂರು ಕಡೆಯಿಂದ ರಭಸವಾಗಿ ಬಂದ ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಮಟ್ಟಿದ್ದು 8 ಜನ ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಹೆಚಿನ್ಚ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಆಸ್ವತ್ರೆಗೆ ದಾಖಲಿಸಲಾಗಿದೆ. ಲಿಂಗಸ್ಗೂರು ತಾಲೂಕಿನ ಮುದಗಲ್ ಹೋಬಳಿಯ ಕನ್ನಾಪುರಹಟ್ಟಿ ಗ್ರಾಮದ ಪರಮನಗೌಡ ಮತ್ತು ಇದೆ ಹೋಬಳಿಯ ಡೆಬ್ಬೇರ ಮಡುವು ಗ್ರಾಮದ ಮುದ್ದಮ್ಮ ಎಂಬವರು ಮೃತಪಟ್ಟಿದ್ದು, ಇವರು ಬೆಂಗಳೂರಿಗೆ ಕೂಲಿಗಾಗಿ ತೆರಳುತ್ತಿದ್ದರು. ಜೂನ್ 9ರ ರಾತ್ರಿ ಸುಮಾರು 10 ಗಂಟೆಗೆ ಕನ್ನಾಪುರಹಟ್ಟಿ ಗ್ರಾಮದ ಆಮರೇಶ, ಛತ್ರಪ್ಪ, ಈಶಪ್ಪ, ಗಂಗಮ್ಮ, ಶಂಕರಗೌಡ, ಭಾಗ್ಯ, ಚಂದ್ರಪ್ಪ ಮತ್ತು ಸೂರ್ಯ ಎಂಬವರು ಪ್ರಯಾಣಿಸುತ್ತಿದ್ದು ಸಾಣೀಕೆರೆಯ ರಾಜ್ಯ ಹೆದ್ದಾರಿ 19 ರಲ್ಲಿ ಈ ಅಪಘಾತ ನಡೆದಿದೆ.
ಲಾರಿ ಚಾಲಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿರುತ್ತಾನೆ. ಘಟನೆ ನಡೆಸ ಸ್ಥಳಕ್ಕೆ ವೃತ್ತನಿರೀಕ್ಷಕ ಟಿ. ಮಂಜುನಾಥ್ ಭೇಟಿ ನೀಡಿದ್ದು ಉಪನಿರೀಕ್ಷಕ ಡಿ.ಜಿ. ಶ್ರೀನಿವಾಸ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

