ರಾಯಚೂರು

ಜವಾಬ್ದಾರಿ ಅರಿತರೆ ಬಾಲಕಾರ್ಮಿಕತೆ ನಿವಾರಣೆ: ಕ್ಯಾಲಕೊಂಡ

Published On :

ಕ.ಪ್ರ. ವಾರ್ತೆ, ಸಿಂಧನೂರು, ಜೂ.14
ಪ್ರತಿಯೊಬ್ಬ ನಾಗರಿಕನು ತನ್ನ ವೈಯಕ್ತಿಕ ಜವಾಬ್ದಾರಿಯನ್ನು ಅರಿತರೆ ಬಾಲ ಕಾರ್ಮಿಕರ ನೇಮಕ ಮಾಡಿಕೊಳ್ಳುವುದು ಹಾಗೂ ದುಡಿಸಿಕೊಳ್ಳುವುದು ನಿಯಂತ್ರಣವಾಗುತ್ತದೆ ಎಂದು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಕರವೀರಪ್ರಭು ಕ್ಯಾಲಕೊಂಡ ಹೇಳಿದರು.
ಇಲ್ಲಿನ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಹಾಗೂ ಸಾರ್ವಜನಿಕ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕರ ವಿರೋಧಿ ದಿನಾಚರಣೆ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಿದ ನಂತರ ಅವರು ಮಾತನಾಡಿದರು.
6ರಿಂದ 14 ವರ್ಷದ ಮಕ್ಕಳಿಗೆ ಕಡ್ಡಾಯ ಶಿಕ್ಷಣನ್ನು ಪಾಲಕರು ತಪ್ಪದೆ ನೀಡಿದಲ್ಲಿ ಹಾಗೂ ಹೋಟೆಲ್, ಅಂಗಡಿ, ಕಾರ್ಖಾನೆ ಮುಂತಾದವುಗಳ ಮಾಲೀಕರು ಸಹ ಬಾಲ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವುದನ್ನು ಸ್ವಯಂ ಆಗಿ ತಡೆದಲ್ಲಿ ಮುಂದಿನ ದಿನಗಳಲ್ಲಿ ಬಾಲ ಕಾರ್ಮಿಕ ಪದ್ಧತಿ ಸಂಪೂರ್ಣ ನಿಯಂತ್ರಣವಾಗುವುದರಲ್ಲಿ ಸಂಶಯವಿಲ್ಲವೆಂದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಾ. ರಮ್ಯ ದೀಪಿಕಾ, ಡಾ. ವೀರಪ್ಪ, ಡಾ. ಬಸವರಾಜ ವಿ, ಡಾ. ವಿರುಪಾಕ್ಷಪ್ಪ, ದೀಪಕ್ ಗಾಡವಿ, ಈಶ್ವರ ದಾಸಪ್ಪನವರ, ಸಣ್ಣ ಮೀನಾಕ್ಷಮ್ಮ, ಎ.ಐ. ಪಾಟೀಲ್, ಎಫ್.ಎ. ಹಣಗಿ, ಶಿವನಮ್ಮ, ಅಮೃತಮ್ಮ, ಹುಸೇನಪ್ಪ, ಗುರುಶಾಂತಮ್ಮ, ಸುಮಿತ್ರ ಹೀರೆಮಠ, ಮಲ್ಲಿಕಾರ್ಜುನ, ಓಂ.ಪ್ರಸಾದ್, ಶಿವರಾಜ, ಪುಷ್ಪರಾಣಿ, ಹನುಮಂತರೆಡ್ಡಿ, ಬಸಪ್ಪ, ಸುಜಾತ, ಹನುಮಂತಗೌಡ, ರೇಣುಕಮ್ಮ, ಸುಜಾತ, ಈರಪ್ಪ ಬಿರಾದಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.