ನಾಳೆ ಬೆಂಗಳೂರಲ್ಲಿ ಪದಾಧಿಕಾರಿ ಸಭೆ
ರಾಯಚೂರು: ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಎಚ್.ಆಂಜನೇಯ್ಯ ಅವರ ಅಧ್ಯಕ್ಷತೆಯಲ್ಲಿ ಜೂ.29ರಂದು ಬೆಂಗಳೂರಿನಲ್ಲಿ ಮಹತ್ವದ ಸಭೆ ಕರೆಯಲಾಗಿದೆ. ಅಂದು ಬೆಂಗಳೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರ ಕಚೇರಿಯಲ್ಲಿ ಮಧ್ಯಾಹ್ನ 3ಕ್ಕೆ ವಿವಿಧ ಹಿಂದುಳಿದ ವರ್ಗಗಳ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆ ಕರೆಯಲಾಗಿದೆ. ಜಿಲ್ಲೆಯಲ್ಲಿರುವ ರಾಜ್ಯ ಮಟ್ಟದ ವಿವಿಧ ಹಿಂದುಳಿದ ವರ್ಗಗಳ ನೋಂದಾಯಿತ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಈ ಸಭೆಗೆ ಹಾಜರಾಗಬೇಕೆಂದು ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಬಿಜೆಪಿಯಿಂದ ನಿಧಿ ಸಂಗ್ರಹ
ಸಿಂಧನೂರು: ಉತ್ತರಾಖಂಡದಲ್ಲಿ ಜಲಪ್ರಳಯದಿಂದಾಗಿ ಸಂತ್ರಸ್ತರಾದವರಿಗೆ ನೆರವು ನೀಡುವ ಸಲುವಾಗಿ ಭಾರತೀಯ ಜನತಾ ಪಕ್ಷದ ತಾಲೂಕು ಘಟಕದಿಂದ ನಗರದ ಪ್ರಮುಖ ಬೀದಿಗಳಲ್ಲಿ ಪಕ್ಷದ ಕಾರ್ಯಕರ್ತರು ಸಂಚರಿಸುವ ಮೂಲಕ ನಿಧಿ ಸಂಗ್ರಹಿಸಿದರು. ನಂತರ ಪ್ರಧಾನ ಮಂತ್ರಿಗಳ ವಿಪತ್ತು ನಿಧಿಗೆ 1,01,111 ಸಲ್ಲಿಸಲಾಯಿತು. ನಗರದ ಪ್ರವಾಸಿ ಮಂದಿರದಲ್ಲಿ ಆರಂಭವಾದ ನಿಧಿ ಸಂಗ್ರಹ ಕಾರ್ಯ ಗಂಗಾವತಿ ಮಾರ್ಗದ ರಸ್ತೆ, ರಾಯಚೂರು, ಕುಷ್ಟಗಿ ಮಾರ್ಗದ ರಸ್ತೆಯ ಅಂಗಡಿ ಮುಂಗಟ್ಟು ಸೇರಿದಂತೆ ಸಾರ್ವಜನಿಕರಿಂದ ನಿಧಿ ಸಂಗ್ರಹಿಸಲಾಯಿತು. ಕೊಲ್ಲಾ ಶೇಷಗಿರಿರಾವ್ 25 ಸಾವಿರ, ಅಂಬಣ್ಣ ನಾಯಕ 21.500, ಬಿಜೆಪಿ ತಾಲೂಕಾಧ್ಯಕ್ಷ ಅಮರೇಗೌಡ ವಿರುಪಾಪುರ 5,500 ಹಣವನ್ನು ದೇಣಿಗೆ ನೀಡಿದರು. ಶಿವನಗೌಡ ಗೊರೇಬಾಳ, ಆರ್. ಮಧ್ವರಾಜ್, ಈರೇಶ ಇಲ್ಲೂರು, ನಡುವಿ ಕೃಷ್ಣಮೂರ್ತಿ, ಶಿವಬಸನಗೌಡ ಗೊರೇಬಾಳ, ದೇವೇಂದ್ರಪ್ಪ ಯಾಪಲಪರ್ವಿ, ಕಲ್ಲೂರು ಬಸಪ್ಪ, ಹನುಮೇಶ ನಾಯಕ ಹರೇಟನೂರ, ಶಂಕರ ಮೇದಾರ, ಸುಬ್ಬಾರಾವ್ ಮತ್ತಿತರರು ಸಂಗ್ರಹಣೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

