ಡೆಂಘಿ ನಿಯಂತ್ರಣಕ್ಕಾಗಿ ಜಿಲ್ಲಾ ತಂಡದ ಸಮೀಕ್ಷೆ
ಸಿಂಧನೂರು: ಡೆಂಘಿ ಹಾಗೂ ಇತರ ಸೊಳ್ಳೆಯಿಂದ ಹರಡುವ ಖಾಯಿಲೆಗಳ ಹತೋಟಿಗೆ ಇಲಾಖೆಗಳ ಜೊತೆಗೆ ಸಮುದಾಯವು ಸಕ್ರಿಯವಾಗಿ ಭಾಗವಹಿಸಿ, ಸುತ್ತಲಿನ ಪರಿಸರವನ್ನು ಶುಚಿತ್ವವಾಗಿ ಇಡಲು ಪಣ ತೊಟ್ಟಲ್ಲಿ ನಿಯಂತ್ರಣ ಸಾಧ್ಯವೆಂದು ಜಿಲ್ಲಾ ಕೀಟಶಾಸ್ತ್ರಜ್ಞ ಪರುಶರಾಮ ನಾಯ್ಕ ಹೇಳಿದರು.
ಅವರು ತಾಲೂಕಿನ ಆರ್.ಎಚ್. ನಂ 2 ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಮತ್ತು ಆರ್.ಎಚ್. ನಂ 5 ರಲ್ಲಿ ಕಂಡುಬಂದಿರುವ ಸಂಶಯಾಸ್ಪದ ಡೆಂಘಿ ಪ್ರಕರಣಗಳ ಹಿನ್ನಲೆಯಲ್ಲಿ ಜಿಲ್ಲಾ ಕೀಟಶಾಸ್ತ್ರಜ್ಞರ ತಂಡವು ಗ್ರಾಮಕ್ಕೆ ಭೇಟಿ ನೀಡಿ ನಂತರ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದರು.
ಪ್ರಸಕ್ತ ರೋಗವು ಹತೋಟಿಯಲ್ಲಿದ್ದು, ಸಾರ್ವಜನಿಕರು ಗಾಬರಿಯಾಗುವ ಅಗತ್ಯವಿಲ್ಲ. ಆರೋಗ್ಯ ಇಲಾಖೆ ಹಾಗೂ ಆಶಾ ಅಂಗನವಾಡಿ ಕಾರ್ಯಕರ್ತೆಯರನ್ನೊಳಗೊಂಡ ತಂಡ ಸೊಳ್ಳೆ ಉತ್ಪತ್ತಿ ತಾಣಗಳ ಸಮಿಕ್ಷಾ ಕಾರ್ಯವನ್ನು ನಡೆಸುತ್ತದೆ ಎಂದರು.
ಡೆಂಘಿ ಲಕ್ಷಣಗಳು: ಈ ರೋಗ ಹರಡುವ ಈಜಿಪ್ಟ್ ಇಡಿಸ್ ಸೊಳ್ಳೆಯು ಹಗಲು ಹೊತ್ತಿನಲ್ಲಿ ಕಚ್ಚುತ್ತದೆ. ನಂತರದಲ್ಲಿ ವ್ಯಕ್ತಿಯಲ್ಲಿ ತೆಲೆನೋವು, ಜ್ವರ, ಕಣ್ಣುಗಳ ಹಿಂಭಾಗದಲ್ಲಿ ಸೇದುವಿಕೆ, ಕೀಲುಗಳಲ್ಲಿ ನೋವು, ವಾಂತಿ, ಕಂಡು ಬರುತ್ತದೆ. ಒಂದು ವೇಳೆ ಈ ಹಂತದಲ್ಲಿ ಚಿಕಿತ್ಸೆ ಪಡೆಯದಿದ್ದಲ್ಲಿ ಹಾಗೂ ನಿರ್ಲಕ್ಷಿಸಿದಲ್ಲಿ ರಕ್ತದಲ್ಲಿನ ಪ್ಲೇಟ್ ಲೆಟ್ಸ್ ಕಡಿಮೆಯಾಗಿ ಮೂಗು, ವಸಡು ಹಾಗೂ ದೇಹದ ಇತರ ಭಾಗಗಳಿಂದ ರಕ್ತ ಒಸರುತ್ತದೆ. ಇವೆಲ್ಲ ಲಕ್ಷಣಗಳಾಧರಿಸಿ, ಚಿಕಿತ್ಸೆ ನೀಡಲಾಗುತ್ತದೆ. ಯಾವುದೇ ಜ್ವರ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣವೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆಯಿರಿ ಎಂದು ಸಲಹೆ ನೀಡಿದರು.
ಮುನ್ನೆಚ್ಚರಿಕೆ: ಗ್ರಾಮದ ಪ್ರತಿ ಕುಟುಂಬದವರು ತಮ್ಮ ಮನೆಯ ಆವರಣದಲ್ಲಿ ಬಳಕೆಗಾಗಿ ನೀರು ತುಂಬುವ ಡ್ರಮ್, ಬ್ಯಾರಲ್, ಸಿಮೆಂಟ್ ತೊಟ್ಟಿ, ಮಡಿಕೆ, ಇತರ ನೀರು ಸಂಗ್ರಹಗಳನ್ನು ವಾರದಲ್ಲಿ ಒಮ್ಮೆ ಚೆನ್ನಾಗಿ ತಿಕ್ಕಿ ತೊಳೆದು ಒಳಭಾಗದಲ್ಲಿ ಸುಣ್ಣವನ್ನು ಹಚ್ಚಿ ತುಂಬಿಸಬೇಕು. ಮುಚ್ಚಳನ್ನು ಮುಚ್ಚಬೇಕು. ಸೊಳ್ಳೆ ಮೊಟ್ಟೆಯನ್ನು ಇಡಲು ನಂತರ ಅದರ ಮರಿ (ಲಾರ್ವಾ) ನಾಶವಾಗುವುದರ ಜೊತೆಗೆ ರೋಗದ ನಿಯಂತ್ರಣ ಸಾಧ್ಯವೆಂದು ಜಿಲ್ಲಾ ಹಿರಿಯ ಆರೋಗ್ಯ ಸಹಾಯಕ ರೋಷನ್ ಅಲಿ ತಿಳಿಸಿದರು. ಎಫ್.ಎ. ಹಣಿಗಿ, ತಂತ್ರಜ್ಞರು, ಮತಿನ್ ಹುಸೇನ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ, ಎ.ಐ. ಪಾಟೀಲ್, ಆರೋಗ್ಯ ಸಹಾಯಕಿ ಸರಸ್ವತಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

