ಡಾ. ಶಾಹೆದ್ ಪಾಶಾಗೆ ಪ್ರಶಸ್ತಿ
ಗುಲ್ಬರ್ಗ: ಧಾರ್ಮಿಕ ಹಾಗೂ ಪೌರಾಣಿಕ ಕತೆಗಳನ್ನು ಆಧುನಿಕ ಶೈಲಿಯಲ್ಲಿ ಅಳವಡಿಸುವ ಮೂಲಕ ಚಿತ್ರಗಳಿಗೆ ವಿಶೇಷ ಪರಿಕಲ್ಪನೆ ನೀಡುವುದರೊಂದಿಗೆ ಗುರುತಿಸಿ ಕೊಂಡಿರುವ ನಗರದ ಯುವ ಕಲಾವಿದ, ಗುಲ್ಬರ್ಗ ವಿವಿ ದೃಶ್ಯಕಲಾ ವಿಭಾಗದ ಅತಿಥಿ ಉಪನ್ಯಾಸಕ ಡಾ. ಶಾಹೆದ್ ಪಾಶಾ ಖಾಜಾ ಹುಸೇನ್ ಅವರಿಗೆ ಮೀರಾಕಲಾ ಪ್ರಶಸ್ತಿ-2013 ಲಭಿಸಿದೆ. ಈ ಕಲಾ ಪ್ರಶಸ್ತಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಒಬ್ಬ ಹಿರಿಯ ಹಾಗೂ ಯುವಕಲಾವಿದನ ಪ್ರತಿಭೆಯನ್ನು ಗುರುತಿಸಿ ನೀಡಲಾಗುತ್ತದೆ. ಇತ್ತೀಚೆಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಡಾ. ಪಾಶಾ ಅವರಿಗೆ 25 ಸಾವಿರ ಗೌರವಧನ ಹಾಗೂ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು. ಹಿರಿಯ ಕಲಾವಿದ ಹರೇಂದ್ರ ಶಾಹ್, ಮೀರಾ ಗುಪ್ತಾ ಉಪಸ್ಥಿತರಿದ್ದರು. ಡಾ. ಪಾಶಾ ಈಗಾಗಲೇ ಕರ್ನಾಟಕ ಲಲಿತಾಕಲಾ ಅಕಾಡೆಮಿ, ಅಖಿಲ ಭಾರತ ಮಟ್ಟದ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಡಾ. ಎಸ್.ಸಿ. ಪಾಟೀಲ್, ಡಾ. ಪಿ.ಕೆ. ಖಂಡೋಬಾ ಅವರ ಮಾರ್ಗದರ್ಶನದಲ್ಲಿ ದೃಶ್ಯಕಲೆಯಲ್ಲಿ ಪಿಎಚ್‌ಡಿ ಮಾಡಿದ್ದಾರೆ. ಇವರ ಸಾಧನೆಗೆ ವಿವಿ ಕುಲಸಚಿವ ಪ್ರೊ. ದಯಾನಂದ ಅಗಸರ, ಡಾ. ಪಿ.ಕೆ. ಖಂಡೋಬಾ, ಅಧ್ಯಾಪಕರು ಹರ್ಷ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

