ಸಚಿವ ಲಿಂಬಾವಳಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ
ರಾಯಚೂರು: ಸ್ಥಳೀಯ ನಗರಸಭೆಗೆ ಮಾ. 7ರಂದು ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಸಚಿವ ಅರವಿಂದ ಲಿಂಬಾವಳಿ ನಗರದ ವಿವಿಧೆಡೆ ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿಗಳ ಚುನಾವಣೆ ಪ್ರಚಾರ ನಡೆಸಿದರು.
ನಗರದ ಮಡ್ಡಿಪೇಟೆ, ಮಕ್ತಲ್ ಪೇಟೆ ಸೇರಿದಂತೆ 24, 25, 26ನೇ ವಾರ್ಡುಗಳಲ್ಲಿ ಮತದಾರರ ಮನೆಗೆ ತೆರಳಿದ ಅವರು, ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ರಘುನಾಥರಾವ್ ಮಲ್ಕಾಪುರೆ, ಮಾಜಿ ಶಾಸಕ ಪಾಪಾರೆಡ್ಡಿ, ಪ್ರಮುಖರಾದ ತ್ರಿವಿಕ್ರಮ್ ಜೋಷಿ, ಅಶೋಕ ಗಸ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್, ಬಂಡೇಶ್ ವಲ್ಕಂದಿನ್ನಿ, ಗಿರೀಶ ಕನಕವೀಡು ಇದ್ದರು.
ಸಿಂಧನೂರು ವರದಿ: ಸಚಿವ ಅರವಿಂದ ಲಿಂಬಾವಳಿ ನಗರಸಭೆ ಚುನಾವಣೆಯ ಹಿನ್ನೆಲೆಯಲ್ಲಿ ನಗರದ ವಿವಿಧ ವಾರ್ಡ್ಗಳಲ್ಲಿ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು.
ವಾರ್ಡ್ ನಂ.19ರಲ್ಲಿ ಎಂ. ರಾಮಕೋಟೇಶ್ವರ ರಾವ್, ವಾರ್ಡ್ ನಂ.16ರಲ್ಲಿ ಎಂ. ವಿಜಯ್, ವಾರ್ಡ್ ನಂ. 21ರಲ್ಲಿ ಖಾಸೀಂಸಾಬ್, ವಾರ್ಡ್ ನಂ. 22ರಲ್ಲಿ ಹನುಮೇಶ್, 14ನೇ ವಾರ್ಡ್ನಲ್ಲಿ ಲಕ್ಷ್ಮೀ ಪರವಾಗಿ ಮತದಾರರಲ್ಲಿ ಮತಯಾಚಿಸಿ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್, ಜಿಲ್ಲಾ ಕಾರ್ಯದರ್ಶಿ ಶೇಷಗಿರಿರಾವ್ ಕೊಲ್ಲಾ, ತಾಲೂಕು ಅಧ್ಯಕ್ಷ ಅಮರೇಗೌಡ ವಿರುಪಾಪುರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವನಗೌಡ ಗೊರೇಬಾಳ, ಉಮೇಶ್ ಸಜ್ಜನ್, ದೇವೆಂದ್ರಪ್ಪ ಯಾಪಲಪರ್ವಿ , ಹನುಮೇಶ್ ಹರೆಟನೂರ್, ಶಿವಬಸನಗೌಡ, ಮಧ್ವರಾಜ್, ಕಲಮಂಗಿ ಅಮರೇಗೌಡ ಇನ್ನಿತರರು ಸಚಿವರಿಗೆ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

