ರಾಯಚೂರು

'ಖಾತ್ರಿ'ಗೆ ಯಂತ್ರಗಳ ಬಳಕೆ: ಕೆಪಿಆರ್‌ಎಸ್ ಆರೋಪ

Published On :

ಕ.ಪ್ರ. ವಾರ್ತೆ, ರಾಯಚೂರು, ಮಾ.4
ಉದ್ಯೋಗ ಖಾತ್ರಿ ಯೋಜನೆಯಡಿ ಕಾಲುವೆ ಹೂಳೆತ್ತುವ ಕಾಮಗಾರಿಯನ್ನು ಯಂತ್ರಗಳ ಮೂಲಕ ನಡೆಸುತ್ತಿದ್ದು, ಕೂಡಲೆ ಕೆಲಸದ ಬಿಲ್ ತಡೆ ಹಿಡಿಯಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಮುಖಂಡರಾದ ಗದ್ವಾಲ್ ರಂಗಪ್ಪ ನಾಯಕ, ಕೆ.ಜಿ. ವೀರೇಶ, ಶಾಂತಕುಮಾರ ಆರೋಪಿಸಿದ್ದಾರೆ.
ತಾಲೂಕಿನ ಯಾಪಲದಿನ್ನಿ ಗ್ರಾಪಂ ವ್ಯಾಪ್ತಿಯ ಯಾಪಲದಿನ್ನಿ ಗ್ರಾಮದಲ್ಲಿ ಜಂಗ್ಲಿಸಾಬ್ ದರ್ಗಾದಿಂದ ರಾಯಚೂರು ರಸ್ತೆವರೆಗೆ ಕಾಲುವೆ ಹೂಳೆತ್ತುವ ಕಾಮಗಾರಿಯನ್ನು ಕೂಲಿಕಾರರಿಂದ ಮಾಡಿಸದೆ ಗ್ರಾಪಂ ಸದಸ್ಯರು ಫೆ.26 ರಂದು ರಾತ್ರಿ ಹೊತ್ತಿನಲ್ಲಿ ಯಂತ್ರೋಪಕರಣಗಳಿಂದ ಕೆಲಸ ಪ್ರಾರಂಭಿಸಿ ಬೆಳಗಾಗುವುದರೊಳಗೆ ಪೂರ್ಣಗೊಳಿಸಿರುತ್ತಾರೆ. ಉದ್ಯೋಗ ಖಾತ್ರಿ ನಿಯಮಾವಳಿ ವಿರುದ್ಧ ಯಂತ್ರಗಳಿಂದ ಕಾಮಗಾರಿ ಕೈಗೊಂಡಿದ್ದು, ಕೂಡಲೆ ಕಾಮಗಾರಿ ಬಿಲ್ ತಡೆ ಹಿಡಿದು ಗ್ರಾಪಂ ಸದಸ್ಯರು ಮತ್ತು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮತ್ತು ಎಂಜಿನಿಯರ್‌ಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಸಂಘದಿಂದ ಹೋರಾಟ ನಡೆಸುವುದಾಗಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಬರೆದ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಲಾರಿ ಡಿಕ್ಕಿ; ವ್ಯಕ್ತಿ ಸಾವು
ರಾಯಚೂರು: ಲಾರಿಯೊಂದು ರಸ್ತೆ ಬದಿಗೆ ನಿಂತಿದ್ದ ಟಾಟಾ ಮ್ಯಾಜಿಕ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಮೃತನನ್ನು ದೇವರಾಜ ಎಂದು ಗುರುತಿಸಲಾಗಿದೆ. ಈತ ಟಾಟಾ ಮ್ಯಾಜಿಕ್ ವಾಹನದಿಂದ ಇಳಿಯುತ್ತಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ಲಾರಿಯು ಡಿಕ್ಕಿ ಹೊಡೆದಿದ್ದರಿಂದ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜು: 13 ಜನರ ಬಂಧನ
ರಾಯಚೂರು: ಸಿಂಧನೂರು ತಾಲೂಕಿನ ಗಾಂಧಿನಗರದ ಎಸ್‌ಬಿಎಚ್ ಬ್ಯಾಂಕ್ ಬಳಿ ಇಸ್ಪೀಟ್ ಆಡುತ್ತಿದ್ದ 13 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಾಮರಾವ್ ಮತ್ತಿತರೆ 12 ಜನರೆಂದು ಗುರುತಿಸಲಾಗಿದೆ. ಇವರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಅವರಿಂದ 35 ಸಾವಿರ ಜಪ್ತಿ ಮಾಡಿದ್ದಾರೆ. ತುರ್ವಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.