ರಾಯಚೂರು

ಹೈ-ಕ 6 ಜಿಲ್ಲೆಗಳ ಉತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ ಪ್ರದಾನ

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಮಾ.5
ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಹೈ.ಕ. ಭಾಗದ ಆರು ಜಿಲ್ಲೆಗಳ ಉತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ ಹಾಗೂ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು.
ಸಮಾರಂಭದಲ್ಲಿ ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲೂಕಿನ ಭೂಂಯಾರ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಶಂಕ್ರೆಪ್ಪ ಹೊಸದೊಡ್ಡಿ, ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಚಿಟಗುಪ್ಪದ ಬಾಲಕರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಗುಂಡಪ್ಪ ಹುಡಗೆ, ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಚಿಕ್ಕಡಂಕನಕಲ್ ಗ್ರಾಮದ ಪೊಲೀಸ್ ಪಾಟೀಲ್ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಸಿದ್ಧಲಿಂಗೇಶ್ವರ ಪೂಲಭಾವಿ, ಯಾ ದಗಿರಿಯ ಸರ್ಕಾರಿ ಪಪೂ ಕಾಲೇಜಿನ ಶಿಕ್ಷಕ ಹನುಮಯ್ಯ ಕಲಾಲ್, ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಸರ್ಕಾರಿ ಪಪೂ ಕಾಲೇಜಿನ ಶಿಕ್ಷಕ ಪ್ರಭುರಾಜ ಪಾಟೀಲ್, ಮಾನವಿಯ ಕಲ್ಮಠದ ಎಸ್.ಎಸ್. ಕೆ. ಕಾಲೇಜಿನ ಶಿಕ್ಷಕ ಟಿ. ಶಿವಕುಮಾರ ಉತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸನ್ಮಾನ: ಅದೇ ರೀತಿ ಈ ವೇಳೆ ನಗರದ ಬಾಲಕಿಯರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಕುಂಟೆಪ್ಪ ಗೌರೀಪುರ ಅವರನ್ನು ಪಿಎಚ್‌ಡಿ ಪದವಿ ಪಡೆದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು. ಹಾಗೆಯೇ ಎಸ್ಸೆಸ್ಸೆಲ್ಸಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಂಜುನಾಥ, ಆಂಗ್ಲ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಡಿ.ಮೇಘಾ, ಬಿಎಸ್ಸಿ ಸಿಬಿಜೆಡ್‌ನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಾಧನಾ ಅವರನ್ನೂ ಸನ್ಮಾನಿಸಲಾಯಿತು.


ಎಸ್‌ಡಿಎಂಸಿ ಪದಾಧಿಕಾರಿಗಳ ಆಯ್ಕೆ
ಕೊಪ್ಪಳ: ಯಲಬುರ್ಗಾ ತಾಲೂಕಿನ ಬಿನ್ನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಎಸ್‌ಡಿಎಂಸಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧಕ್ಷರಾಗಿ ರಾಮಣ್ಣ ಭಜೆಂತ್ರಿ, ಉಪಾಧ್ಯಕ್ಷರಾಗಿ ಶಂಕ್ರವ್ವ ತಹಸೀಲ್ದಾರ್ ಹಾಗೂ ಸದಸ್ಯರಾಗಿ ಶರಣವ್ವ ಚಲವಾದಿ, ಬಸವರಾಜ ಬನ್ನಿಕೊಪ್ಪ, ಹುಸೇನಬಿ ರಾಜಾಸಾಬ ಕಡೆಮನಿ, ಶಾರದಾ ಶೇಖಪ್ಪ ಮುತ್ತ್ಯಾಳ, ಅಶೋಕ ಭೂಸನೂರಮಠ, ಬಸವಂತಪ್ಪ ಕಟಬಿ, ಸಂಗಪ್ಪ ಪಂತರ, ಶರಣಪ್ಪ ಶಿ. ಕಂಬಳಿ, ಚನ್ನಪ್ಪ ಚಟ್ಟಿ, ಈರಪ್ಪ ಹಾದಿಮನಿ, ಬಸವಣ್ಣೆವ್ವ ಪಲ್ಲೇದ ಆಯ್ಕೆಯಾದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.