ರಾಯಚೂರು

ಮುದಗಲ್ ಪಪಂ; ಜೆಡಿಎಸ್‌ಗೆ ಉತ್ಸಾಹ, 'ಕೈ'ಗೆ ನಿರಾಶೆ, ಬಿಜೆಪಿ, ಕೆಜೆಪಿ ಧೂಳೀಪಟ

Published On :

ಕನ್ನಡಪ್ರಭ ವಾರ್ತೆ, ಮುದಗಲ್, ಮಾ.11
ಸ್ಥಳೀಯ ಪಟ್ಟಣ ಪಂಚಾಯತಿ ಚುನಾವಣೆ ಫಲಿತಾಂಶ ಇಂದು ಹೊರಬಿದ್ದಿದೆ. ಬಿಎಸ್‌ಆರ್ 2 ಸ್ಥಾನವನ್ನು ಪಡೆದು ಖಾತೆಯನ್ನು ತೆರೆದಿದೆ. 9 ಸ್ಥಾನ ಗಳಿಸಿದ ಜೆಡಿಎಸ್‌ಗೆ ಉತ್ಸಾಹ, 7 ಸ್ಥಾನ ಗಳಿಸಿದ ಕಾಂಗ್ರೆಸ್  ನಿರೀಕ್ಷಿತ ಸ್ಥಾನ ಲಭಿಸದೇ ನಿರಾಶೆಯಾಗಿದೆ. ಬಿಜೆಪಿ, ಕೆಜೆಪಿ ಧೂಳೀಪಟವಾಗಿದೆ. ಒಟ್ಟಾರೆ ಮುದಗಲ್ ಪಟ್ಟಣ ಪಂಚಾಯತಿ ಯಾವುದೇ ಪಕ್ಷಕ್ಕೆ ಬಹುಮತವಿಲ್ಲದೇ ಇರುವುದರಿಂದ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣ ಪಂಚಾಯತಿಯ 19 ಸ್ಥಾನಗಳಲ್ಲಿ 9 ಜೆಡಿಎಸ್, 7 ಕಾಂಗ್ರೆಸ್, 2 ಬಿಎಸ್‌ಆರ್ ಮತ್ತು ಒಂದು ಪಕ್ಷೇತರ ಪಾಲಾಗಿದೆ. ಏತನ್ಮಧ್ಯೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಪಕ್ಷೇತರ ಅಭ್ಯರ್ಥಿ  ಬಿಎಸ್‌ಆರ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ಬಿಎಸ್‌ಆರ್ ಮೂರು ಸ್ಥಾನ ಪಡೆದಂತಾಗಿದೆ.
 ವಾರ್ಡ್ 1: ಶರಣಮ್ಮ ನಂದಪ್ಪ ಕತ್ತಿ (ಕಾಂಗ್ರೆಸ್ -528),  ಸುಮಿತ್ರಾ ಸಿದ್ದಯ್ಯ (ಬಿಎಸ್‌ಆರ್-517).
 ವಾರ್ಡ್ 2: ರಾಮಪ್ಪ ದುರಪಗಪ್ಪ (ಕಾಂಗ್ರೆಸ್-457), ಗ್ಯಾನಪ್ಪ ಆದಪ್ಪ (ಜೆಡಿಎಸ್-359).
 ವಾರ್ಡ್ 3:  ಸಾಹೇರಾಬಾನು (ಜೆಡಿಎಸ್-236), ಅಮೀನಾಬೇಗಂ ಬಾರಿಗಿಡ (ಕಾಂಗ್ರೆಸ್).
 ವಾರ್ಡ್ 4: ನೀಲಮ್ಮ ಬಸವರಾಜ ಹೊರಪೇಟ (ಕಾಂಗ್ರೆಸ್-408), ಸಾಧಿಕಾಬೇಗಂ (ಜೆಡಿಎಸ್-251).
 ವಾರ್ಡ್ 5: ವೀರಭದ್ರಪ್ಪ ಬಶೆಟೆಪ್ಪ ಕೊಳ್ಳಿ (ಪಕ್ಷೇತರ-256) ಗುಂಡಪ್ಪ ಜೀಡಿ (ಕೆಜೆಪಿ-255).
 ವಾರ್ಡ್ 6: ಮಹ್ಮದ್ ಮಾಸೂಮ್ ಆರೀಫ್ (ಕಾಂಗ್ರೆಸ್-397), ಉದಯಕುಮಾರ (ಜೆಡಿಎಸ್-295). ವಾರ್ಡ್ ವಾರ್ಡ್ 7: ಹಂಪಮ್ಮ (ಜೆಡಿಎಸ್ 306), ಅಮೃತಮ್ಮ (ಕಾಂಗ್ರೆಸ್-99 ).
 ವಾರ್ಡ್ 8: ಖಾಜಾಪಾಷಾ (ಜೆಡಿಎಸ್ 242), ಅಬ್ದುಲ್ ಮಜೀದ್ (ಕಾಂಗ್ರೆಸ್-240).
 ವಾರ್ಡ್9:  ಹೇಮಂತಕುಮಾರ ನಾಗಲಾಪೂರ (ಬಿಎಸ್‌ಆರ್ 146), ಅಯ್ಪಪ್ಪ (ಕಾಂಗ್ರೆಸ್-117).
 ವಾರ್ಡ್ 10: ರೇವತಿ ಚಂದ್ರಶೇಖರ (ಜೆಡಿಎಸ್ 174), ಶರಣಮ್ಮ ಪಂಪಯ್ಯ (ಕಾಂಗ್ರೆಸ್ 121).  
 ವಾರ್ಡ್ 11: ಅಬ್ದುಲ್ ರವೂಫ್ (ಜೆಡಿಎಸ್ 595), ದೇವರಾಜ (ಬಿಎಸ್‌ಆರ್ 209).
 ವಾರ್ಡ್ 12:  ಎಸ್. ಈರಣ್ಣ (ಜೆಡಿಎಸ್ 216), ಷಣ್ಮುಖಪ್ಪ ಚಲುವಾದಿ (ಕಾಂಗ್ರೆಸ್ 128).
 ವಾರ್ಡ್ 13: ಶಿವರಾಜ ತಳವಾರ (ಬಿಎಸ್‌ಆರ್ 306), ವಿರುಪಾಕ್ಷಪ್ಪ ಸಜ್ಜನ (ಕಾಂಗ್ರೆಸ್ 178).
 ವಾರ್ಡ್ 14: ರಹಿಮತ್ ಬೇಗಂ ಚಂದಾವಲಿಸಾಬ (ಜೆಡಿಎಸ್ 497), ಹುಸೇನಬೀ  (ಬಿಎಸ್‌ಆರ್ 141).
 ವಾರ್ಡ್ 15: ಗದ್ದೆಮ್ಮ ಗಂ. ಹನುಮಂತ (ಕಾಂಗ್ರೆಸ್ 299), ವೆಂಕವ್ವ ಗಂ. ಗೋಸಲೆಪ್ಪ (ಜೆಡಿಎಸ್ 296).
 ವಾರ್ಡ್ 16: ಮಹ್ಮದ್ ಸಾಧಿಕಲಿ (ಕಾಂಗ್ರೆಸ್ 344), ಮಹಿಬೂಬಸಾಬ ಡೋಂಗ್ರಿ (ಜೆಡಿಎಸ್ 145).
 ವಾರ್ಡ್ 17: ಬಸಮ್ಮ ಸಂಗಪ್ಪ ಹಿರೇಮನಿ (389), ಶಾಂತವ್ವ ಮಿರ್ಜಪ್ಪ (ಕೆಜೆಪಿ 305).
 ವಾರ್ಡ್ 18: ಬಂದೇನವಾಜ (ಜೆಡಿಎಸ್ 490), ಮೌಲಾಸಾಬ (ಕಾಂಗ್ರೆಸ್ 439).
 ವಾರ್ಡ್ 19: ರಜ್ಜಬಲಿ ನಬೀಸಾಬ (ಜೆಡಿಎಸ್ 673), ಅಲ್ಲಾಸಾಬ (ಕಾಂಗ್ರೆಸ್ 218).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.