ರಾಯಚೂರು

ಲಂಚ: ಅಧಿಕಾರಿಗೆ 7 ವರ್ಷ ಶಿಕ್ಷೆ

Published On :

ರಾಯಚೂರು: ಗುತ್ತಿಗೆದಾರರೊಬ್ಬರಿಗೆ ಲೈಸೆನ್ಸ್ ನೀಡಲು ಲಂಚ ಸ್ವೀಕರಿಸಿದ್ದ ಜಿಪಂ ಅಧೀಕ್ಷಕರಿಗೆ ಜಿಲ್ಲಾ ನ್ಯಾಯಾಲಯ 7 ವರ್ಷ ಶಿಕ್ಷೆ ಮತ್ತು 25 ಸಾವಿರ ದಂಡ ವಿಧಿಸಿ ತೀರ್ಪಿತ್ತಿದೆ. ಮಾನವಿ ತಾಲೂಕಿನ ಬಲ್ಲಟಗಿಯ ಹನುಮಂತ್ರಾಯ ಎಂಬ ಗುತ್ತಿಗೆದಾರರಿಗೆ 4ನೇ ದರ್ಜೆಯ ಗುತ್ತಿಗೆದಾರರ ಲೈಸೆನ್ಸ್ ನೀಡಲು 1 ಸಾವಿರ ಲಂಚ ಕೇಳಿದ್ದ ಜಿಪಂ ಎಂಜಿನಿಯರಿಂಗ್ ವಿಭಾಗದ ಅಧೀಕ್ಷಕ ಅಮರಯ್ಯ ಅವರನ್ನು ಲೋಕಾಯುಕ್ತರು ದಾಳಿ ಮಾಡಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಕುರಿತು ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎಚ್. ಮಿಟ್ಟಲಕೋಡ್ ಅವರು ಆರೋಪಿ ಅಮರಯ್ಯಗೆ 7 ವರ್ಷ ಶಿಕ್ಷೆ ಮತ್ತು 25 ಸಾವಿರ ದಂಡ ವಿಧಿಸಿದ್ದಾರೆಂದು ಲೋಕಾಯುಕ್ತ ಕಚೇರಿ ತಿಳಿಸಿದೆ. ಸರ್ಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕರಾದ ಸಿದ್ದಲಿಂಗಪ್ಪ ಬೋರೆಡ್ಡಿ ವಾದ ಮಂಡಿಸಿದ್ದರು.
ಅರ್ಜಿ ಸ್ವೀಕಾರ
ಮಸ್ಕಿ: ಸ್ಥಳೀಯ ಗ್ರಾಪಂ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಗ್ರಾಮ ಸಭೆಯಲ್ಲಿ 2012-13ನೇ ಸಾಲಿನ ಇಂದಿರಾ ಆವಾಸ್ ಯೋಜನೆಯ ವಸತಿ ಸೌಲಭ್ಯಕ್ಕೆ ಅರ್ಜಿಗಳನ್ನು ಸ್ವೀಕರಿಸಲಾಯಿತು. ಗ್ರಾಪಂಗೆ ಈ ಯೋಜನೆ ಅಡಿ ಮಂಜೂರಾಗಿರುವ 50 ಮನೆಗಳ ಪೈಕಿ 20 ಮನೆಗಳು ಎಸ್ಸಿಗೆ, 10 ಎಸ್ಟಿಗೆ,  8 ಅಲ್ಪಸಂಖ್ಯಾತರು, 12 ಜನ ಸಾಮಾನ್ಯವರ್ಗದವರಿಗೆ ಹಾಗೂ ಮೂವರು ಅಂಗವಿಕಲರಿಗೆ ವಿಂಗಡಿಸಲಾಗಿದೆ ಎಂದು ಗ್ರಾಪಂ ಅಧಿಕಾರಿಗಳು ಜನತೆಗೆ ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.