ರಾಯಚೂರು

ಲಂಕೇಶ್ ನೆನಪು, ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಡಾ.ಶಿವರಾಜ ಅಭಿಮತ

Published On :

ಸಿಂಧನೂರು: ಮೊನಚು ಲೇಖನಿಯಿಂದ ವಿಶಿಷ್ಟವಾಗಿ ಬರೆದ ಪಿ.ಲಂಕೇಶ್ ತಮ್ಮ ಕೃತಿಗಳ ಮೂಲಕ ಸಾಹಿತ್ಯಾಸಕ್ತರಲ್ಲಿ ಇನ್ನೂ ಜೀವಂತವಾಗಿ ಉಳಿದಿದ್ದಾರೆ ಎಂದು ಮಕ್ಕಳ ತಜ್ಞ ಡಾ.ಶಿವರಾಜ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪಿ.ಲಂಕೇಶ್ ಬಳಗದಿಂದ ಬಸವರಾಜ ಬಾದರ್ಲಿ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ಲಂಕೇಶ್ ಒಂದು ನೆನಪು ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಬಂಗಾರಪ್ಪ ಅವರಿಗೆ ಬಂ, ಗುಂಡೂರಾವ್ ಅವರಿಗೆ ಗುಂ, ದೇವೇಗೌಡರಿಗೆ ಮಣ್ಣಿನ ಮಗ ಜೆ.ಎಚ್. ಪಟೇಲರಿಗೆ ಸನ್ ಆಫ್ ಆಯಿಲ್ ಎಂದು ಕುಟುಕುತ್ತಿದ್ದ ಲಂಕೇಶ್ ಅವರ ಬರೆಹಗಳು ಬಹಳ ಆಕರ್ಷಿಸುತ್ತಿದ್ದವು ಎಂದು ನೆನಪಿಸಿಕೊಂಡರು. ಕನ್ನಡಕ್ಕೆ ಕೊಡಗೆ: ಮುಖ್ಯ ಭಾಷಣಕಾರ ಗೋವಿಂದರಾಜ ಬಾರಕೇರ ಮಾತನಾಡಿ, ಮಹಿಳಾ ಲೇಖಕಿಯರ ಬೆಳವಣಿಗೆಯಲ್ಲಿ ಲಂಕೇಶ್ ಪ್ರಮುಖ ಪಾತ್ರ ವಹಿಸಿದವರು. ಬಿ.ಟಿ. ಲಲಿತಾ ನಾಯಕ್, ವೈದೇಹಿ, ಭಾನು ಮುಷ್ತಾಕ್, ಸಾರಾ ಅಬೂಬಕರ್ ಅವ ರಂತಹ ಪ್ರಮುಖ ಲೇಖಕಿಯರು ಕನ್ನಡಕ್ಕೆ ವಿಶಿಷ್ಟ ಕೊಡಗೆಯನ್ನೇ ನೀಡಿದ್ದಾರೆ. ಲಂಕೇಶ್‌ರ ಬಿರುಕು, ಅಕ್ಕ, ಕಲ್ಲು ಕರುಗುವ ಸಮಯ ಮತ್ತಿತರ ಕಾದಂಬರಿಗಳು ಇಂದಿಗೂ ಜನಪ್ರಿಯ. ಅಂತಿಗೊನೆ, ದೊರೆ ಈಡಿಪಸ್, ಪಾಪದ ಹೂಗಳು ಇನ್ನಿತರ ಕೃತಿಗಳ ಅನುವಾದವು ಕೂಡ ಬೆರಗುಗೊಳಿಸುವಂತದ್ದು ಎಂದರು.
ಉಪಸ್ಥಿತಿ: ಲಂಕೇಶ್ ಬಳಗದ ಸಂಚಾಲಕ ಡಿ.ಎಚ್. ಕಂಬಳಿ, ರಾಮಣ್ಣ ಹಿರೇಬೇರಿಗಿ, ಕಸಾಪ ಅಧ್ಯಕ್ಷೆ ರಮಾದೇವಿ ಶಂಭೋಜಿ, ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಹುಸೇನಪ್ಪ ಅಮರಾಪುರ ಮಾತನಾಡಿದರು. ಉಪನ್ಯಾಸಕ ನಾರಾಯಣ ಬೆಳಗುಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಟ್ರೇಶ ಬಿ. ನಿರೂಪಿಸಿದರು. ಶಿಕ್ಷಕ ಪರಮೇಶಪ್ಪ ಚಿಂತಮಾನದೊಡ್ಡಿ ವಂದಿಸಿದರು. ರಮೇಶ ಬಾಲಿ, ಹುಸೇನಪ್ಪ ನಂಜಲದಿನ್ನಿ, ಬಸವರಾಜ. ಎಚ್, ನರಸಪ್ಪ ಕಡಬೂರು, ಪಂಪಾರೆಡ್ಡಿ ಅರಳಹಳ್ಳಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.