ರಾಯಚೂರು

'ಹೆಣ್ಣು ಸಹನಾ ಮೂರ್ತಿ, ಬದುಕಿಗೆ ಸ್ಫೂರ್ತಿ'

Published On :

ಸಿಂಧನೂರು: ಹೆಣ್ಣನ್ನು ಕವಿಗಳು ಭೂಮಿಗೆ ಹೊಲಿಸಿದ್ದಾರೆ. ಕ್ಷಮಯಾ ಧರೀತ್ರಿ ಎಂಬುವಂತೆ ಕ್ಷಮೆಗೆ ಅಷ್ಟೇ ಅಲ್ಲ, ಹೆಣ್ಣು ತಾಳ್ಮೆಗೂ ಪ್ರತೀಕವಾಗಿದ್ದಾರೆಂದು ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸೀಮಾ ಅಕ್ಕ ನುಡಿದರು.
ಜ್ಯೋತಿ ಮಹಿಳಾ ಸಮಾಜದ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸಮಾರೋಪ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ, ಮನೆ ಬೆಳಗುವ ಮಹಾಲಕ್ಷ್ಮಿ ಎಂದರೆ ಹೆಣ್ಣು ಸಹನಾ ಮೂರ್ತಿ, ಸಹನಾ ಶಕ್ತಿ, ಕೊಟ್ಟ ಮನೆಯ ಹೆಸರು ಬೆಳಗುವ ಧೀರೋದ್ದಾತ್ತೆ ಮಹಿಳೆ ಆದರೆ, ಇಂದಿನ ವ್ಯವಸ್ಥೆಯಲ್ಲಿ ಪುರುಷರಿಂದ ನಿರಂತರ ಶೋಷಣೆ ನಡೆದಿದೆ ಎಂದು ಕಳವಳ ವ್ಯಕ್ತ ಪಡಿಸಿದರು.
ಸಮಾಜ ಕಟ್ಟಲು: ದೇಶಾದ್ಯಂತ ಸುಮಾರು 25 ಸಾವಿರ ಬ್ರಹ್ಮಕುಮಾರಿಯರು ಈಶ್ವರನ ಆರಾಧಕರಾಗಿ ಸಮಾಜ ಕಟ್ಟುವ ಕೆಲಸದಲ್ಲಿ ತೊಡಗಿದ್ದಾರೆ. ಪ್ರತಿಯೊಬ್ಬರು ಒತ್ತಡದ ಜೀವನದಲ್ಲಿ ಬದುಕನ್ನು ದುರ್ಬರವಾಗಿಸಿಕೊಂಡಿದ್ದಾರೆ. ಅವರಿಗೆಲ್ಲಾ ಶಾಂತಿ ಸಮಾಧಾನ ನೀಡಲು ಬ್ರಹ್ಮಕುಮಾರಿಯರು ಯೋಗ ಧ್ಯಾನದ ಮೂಲಕ ಶಿಕ್ಷಣ ಹೇಳುತ್ತಾ ಸುಂದರ ಸಮಾಜ ಕಟ್ಟಲು ಹೊರಟ್ಟಿದ್ದಾರೆ. ಪ್ರತಿವರ್ಷ ಮೌಂಟ್ ಅಬುದಲ್ಲಿ ನಡೆಯುವ ವಿಐಪಿ ಶಿಬಿರದಲ್ಲಿ ಹತ್ತು ಜನರಿಗೆ ಅವಕಾಶ ಕಲ್ಪಿಸಲಾಗುವುದು. ಇದರ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳಬೇಕು ಎಂದರು.
ಬಾಬಾ ರಾಮದೇವ ಪತಂಜಲಿ ಯೋಗ ಸಮಿತಿಯ ರಾಜ್ಯ ಪ್ರಭಾರಿ ಎಂ.ಭಾಸ್ಕರ ಮಾತನಾಡಿ, ಮಹಿಳೆಯರು ಒತ್ತಡದ ಜೀವನದಲ್ಲಿ ಬದುಕುವುದು ಅನಿವಾರ್ಯ ಎಂದು ಭಾವಿಸಿದ್ದಾರೆ. ಒತ್ತಡವಿಲ್ಲದೆ ಬದುಕನ್ನು ಕಳೆಯಬೇಕೆಂದರೆ ಬಾಬಾರವರ ಯೋಗ, ಧ್ಯಾನವನ್ನು ನಿತ್ಯವೂ ರೂಢಿಯಲ್ಲಿರಿಸಿಕೊಳ್ಳಬೇಕು. ಇದರಿಂದ ದೇಹಾರೋಗ್ಯ, ಶಿಸ್ತಿನ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಹ್ಲಾದ ಗುಡಿ, ಸ್ತ್ರೀರೋಗ ತಜ್ಞೆಯರಾದ ಅಭಿನೇತ್ರಿ ಪಾಟೀಲ, ಅನ್ನಪೂರ್ಣ ರೆಡ್ಡಿ, ಎಸ್. ಮುತ್ಯಾವತಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜ್ಯೋತಿ ಮಹಿಳಾ ಸಮಾಜದ ಅಧ್ಯಕ್ಷೆ ಸುವರ್ಣ ಶೇಟ ಮಾತನಾಡಿ, ಮಹಿಳೆಯರು ಸಂಘಟಿತರಾಗಿ, ಸ್ವಾವಲಂಬಿಗಳಾಗಿ ಬದುಕಿದರೆ ಮಾತ್ರ ಪುರುಷ ಪ್ರಧಾನ ಸಮಾಜದ ಮುಷ್ಟಿಯಿಂದ ಹೊರಬರಲು ಸಾಧ್ಯ ಎಂದರು.
ನಗರಸಭೆ ಮಾಜಿ ಸದಸ್ಯೆ ಸರಸ್ವತಿ ಪಾಟೀಲ ಸ್ವಾಗತಿಸಿದರು. ಚಂದ್ರಕಲಾ ಸಂಗಡಿಗರು ಪ್ರಾರ್ಥಿಸಿದರು. ವನಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು. ಇದಕ್ಕೂ ಪೂರ್ವದಲ್ಲಿ ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ 150 ಕ್ಕೂ ಹೆಚ್ಚು ಮಹಿಳೆಯರು ಆರೋಗ್ಯ ತಪಾಸಣೆ ನಡೆಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.