ಸುವರ್ಣ 5ನೇ ಹಂತ: 19 ಗ್ರಾಮಗಳ ಆಯ್ಕೆ
ಕ.ಪ್ರ. ವಾರ್ತೆ, ಮುದಗಲ್, ಮಾ.20
5ನೇ ಹಂತದ ಸುವರ್ಣ ಗ್ರಾಮೋದಯ ಯೋಜನೆಯಡಿಯಲ್ಲಿ ಮಸ್ಕಿ ಕ್ಷೇತ್ರದ 19 ಗ್ರಾಮಗಳನ್ನು ಆಯ್ಕೆ ಮಾಡಿ ಮಂಜೂರಾತಿ ಪಡೆಯಲಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಲಾಗುವುದು ಎಂದು ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
ಅವರು ಮಸ್ಕಿ ಕ್ಷೇತ್ರದಲ್ಲಿ 5ನೇ ಹಂತದ ಸುವರ್ಣ ಗ್ರಾಮೋದಯ ಯೋಜನೆಯ ಕಾಮಗಾರಿಗಳಿಗೆ ಚಾಲನೆ ನೀಡಿ, ಮುದಗಲ್ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸುತ್ತೇನೆ. ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದ ಬಳಿಕ ಪಕ್ಷ ಸೇರುವುದಾಗಿ ಹೇಳಿದರು.
ತೀರ್ಮಾನ ವೈಯಕ್ತಿಕವಲ್ಲ: ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿಕೆ ಬಗ್ಗೆ ಹಸಿರು ನಿಶಾನೆ ತೋರಿದೆ. ಕ್ಷೇತ್ರದಲ್ಲಿ ಟಿಕೆಟ್ಗಾಗಿ ಯಾರೂ ಸ್ಪರ್ಧಾಳುಗಳು ಇಲ್ಲ. ಹೀಗಾಗಿ ಯಾವುದೇ ತೊಂದರೆಯಿಲ್ಲ ಎಂದು ಹೇಳಿದರು. ನನ್ನ ತೀರ್ಮಾನ ವೈಯಕ್ತಿಕವಲ್ಲ. ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯದ ಮೇರೆಗೆ ಪಕ್ಷಾಂತರಕ್ಕೆ ಕಾರಣ ಎಂದು ಹೇಳಿದರು.
ಮಸ್ಕಿ ಕ್ಷೇತ್ರದಲ್ಲಿ ಸುವರ್ಣ ಗ್ರಾಮೋದಯ ಯೋಜನೆಗೆ 19 ಗ್ರಾಮಗಳು ಆಯ್ಕೆಯಾಗಿವೆ. ಅದರಲ್ಲಿ ಲಿಂಗಸ್ಗೂರು ತಾಲೂಕಿನ ಸಾನಬಾಳ ಬುದ್ದಿನ್ನಿ ರು. 31.65 ಲಕ್ಷ, ಹೂವಿನಭಾವಿ ರು. 31.50 ಲಕ್ಷ, ಕುಣಿಕೆಲ್ಲೂರ ರು. 40.27 ಲಕ್ಷ, ಗುಡಿಹಾಳ ರು. 38 ಲಕ್ಷ ಮತ್ತು ತಿಮ್ಮಾಪುರ ರು. 40.90 ಲಕ್ಷ ಮಂಜೂರಾತಿ ದೊರಕಿದೆ. ಅವುಗಳಿಗೆ ಇಂದು ಚಾಲನೆ ನೀಡಿದೆ.
ಮಂಜೂರಾತಿ: ಮಾನವಿ ತಾಲೂಕಿನ ಮಲ್ಕಾಪುರ, ಜಂಗಮರಹಳ್ಳಿ, ಗುಡಿಹಾಳ, ಹರವಾಪುರ, ಸಿಂಧನೂರು ತಾಲೂಕಿನ ದೀನಸಮುದ್ರ, ಹಸಮಕಲ್, ಉದ್ಬಾಳ, ಉಪ್ಪಲದೊಡ್ಡಿ, ಬಪ್ಪೂರ, ಬಗರನಾಳ, ಚಿಕ್ಕಬೇರಗಿ, ಮತ್ತು ವೀರಾಪುರ ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಮಂಜೂರಾತಿ ದೊರಕಿದೆ ಎಂದರು.
ಕ್ಷೇತ್ರದಲ್ಲಿ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಭವನಗಳನ್ನು ಮಂಜೂರಾತಿ ಮಾಡಿಸಲಾಗಿದೆ. ಅವುಗಳನ್ನು ರು. 10 ಲಕ್ಷ ಮೊತ್ತದಲ್ಲಿ ನಿರ್ಮಿಸಲಾಗುವುದು. ಸರ್ಜಾಪುರ, ಮುಸ್ಲಿಕಾರಲಕುಂಟಿ, ಬೆನಕನಾಳ, ಇರಕಲ್ಲ, ಹಾಲಾಪೂರ, ಬಳಗಾನೂರ, ತುರ್ವಿಹಾಳ ಮತ್ತು ಉಮಲೂಟಿ ಗ್ರಾಮಗಳಿಗೆ ಮಂಜೂರಾತಿ ಮಾಡಿಸಲಾಗಿದೆ.
ಮೂರು ವಾಲ್ಮೀಕಿ ಭವನಗಳನ್ನು ಮಂಜೂರಾತಿ ಮಾಡಿಸಲಾಗಿದೆ. ಮೆದಕಿನಾಳ, ರಂಗಾಪೂರ, ಇರಕಲ್ಲ ಸೇರಿವೆ. ಮಸ್ಕಿ ಗ್ರಾಮಕ್ಕೆ ರು. 1 ಕೋಟಿ ಮೊತ್ತದಲ್ಲಿ ವಾಲ್ಮೀಕಿ ಭವನವನ್ನು ಮಂಜೂರಾತಿ ಮಾಡಿಸಲಾಗಿದೆ ಎಂದು ಹೇಳಿದರು. ಈ ಸಮಯದಲ್ಲಿ ಎಪಿಎಂಸಿ ಅಧ್ಯಕ್ಷ ಮಂಜುನಾಥ ಪಾಟೀಲ, ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಂದಾನಪ್ಪ ಗುಂಡಳ್ಳಿ, ಪಂಪಾಪತಿ ಗುಡಿಹಾಳ, ಯಲ್ಲೋಜಿ ಕೋರೆಕರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

