'ಸಾಮಾಜಿಕ ಕಳಕಳಿ ಮನಸ್ಸು ಅಗತ್ಯ'
ಲಿಂಗಸ್ಗೂರು: ಇಂದಿನ ಆಧುನಿಕ ಯುಗದಲ್ಲಿ ಯುವಜನತೆ ವೈಚಾರಿಕ, ನೈತಿಕ ಶಿಕ್ಷಣ ಪಡೆಯುವ ಮೂಲಕ ಅನ್ಯಾಯವನ್ನು ಪ್ರತಿಭಟಿಸುವ ಹಾಗೂ ಸಾಮಾಜಿಕ ಕಳಕಳಿಯ ಮನಸ್ಸು ಹೊಂದುವುದು ಅಗತ್ಯ ಎಂದು ವಿಸಿಬಿ ಕಾಲೇಜು ಉಪನ್ಯಾಸಕ ಯಲ್ಲಪ್ಪ ಈಳಗೇರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸ್ಥಳೀಯ ಅಮರೇಶ್ವರ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಎಐಡಿಎಸ್ಒ ಮತ್ತು ಎಐಡಿವೈಒ ವತಿಯಿಂದ ಹಮ್ಮಿಕೊಂಡಿದ್ದ, ಶಹೀದ್ ಭಗತ್ಸಿಂಗ್ರ 82ನೇ ಹುತಾತ್ಮ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ಆರಂಭಕ್ಕೆ ಚಾಲನೆ ನೀಡಿ ಮಾತನಾಡಿ, ದೇಶಕ್ಕೆ ಸ್ವತಂತ್ರ್ಯ ದೊರೆತು 67 ವರ್ಷ ಗತಿಸಿದರೂ ಎಲ್ಲ ರಂಗಗಳಲ್ಲಿ ಅಭಿವೃದ್ಧಿ ಕಾಣದೆ ಅಸಮಾನತೆ, ನಿರುದ್ಯೋಗ, ಬೆಲೆ ಏರಿಕೆ, ಸಿನಿಕತನ ವ್ಯಾಪಕವಾಗಿ ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿ ಯುವಜನತೆಗೆ ಭಗತ್ಸಿಂಗ್ರ ಜೀವನ ಹಾಗೂ ಅವರ ಆದರ್ಶ ಮಾರ್ಗ ಸಹಕಾರಿಯಾಗಲಿದೆ ಎಂದರು. ಕಾಲೇಜು ಪ್ರಾಚಾರ್ಯ ಅಣ್ಣಯ್ಯ, ಉಪನ್ಯಾಸಕರಾದ ಸಿದ್ದಪ್ಪ ಭಾವಿಮನಿ, ಕಣ್ಮೇಶ, ಕೋರೆನಲ್, ಸೋಮಶೇಖರ, ಸಂಘಟನೆಯ ಮುಖಂಡರಾದ ತಿರುಪತಿ, ಶರಣಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

