ಇಂದಿರಾ ಆವಾಸ್ ಶ್ರೀಮಂತರ ಪಾಲು; ರದ್ದತಿಗೆ ಉಪ್ಪಾರ ನಂದಿಹಾಳ ಗ್ರಾಮಸ್ಥರ ಆಗ್ರಹ
ಕನ್ನಡಪ್ರಭ ವಾರ್ತೆ ಲಿಂಗಸ್ಗೂರು ಮಾ.25
ತಾಲೂಕಿನ ಉಪ್ಪಾರ ನಂದಿಹಾಳ ಗ್ರಾಮ ಪಂಚಾಯ್ತಿಯಲ್ಲಿ ಇಂದಿರಾ ಆವಾಸ್ ಯೋಜನೆ ಮನೆಗಳನ್ನು ಶ್ರೀಮಂತರಿಗೆ ನೀಡಲಾಗಿದ್ದು, ಕೂಡಲೇ ಪರಿಶೀಲನೆ ನಡೆಸಿ ರದ್ಧುಗೊಳಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ವೀರಭದ್ರಪ್ಪ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಗ್ರಾಪಂ ವ್ಯಾಪ್ತಿಗೆ 2012-13 ನೇ ಸಾಲಿನಲ್ಲಿ ಇಂದಿರಾ ಆವಾಸ್ ಯೋಜನೆಯಡಿ 145 ಹೆಚ್ಚುವರಿ ಮನೆಗಳು ಮಂಜೂರಾಗಿದ್ದು, ಗ್ರಾಪಂ ಸಭೆಯಲ್ಲಿ ಸೂಚಿಸಿದ ಅರ್ಹ ಫಲಾನುಭವಿಗಳ ಹೆಸರನ್ನು ಕೈ ಬಿಟ್ಟು 2 ರಿಂದ 3 ಮನೆಗಳು ಹೊಂದಿರುವ ಶ್ರೀಮಂತರಿಗೆ ಫಲಾನುಭವಿಗಳೆಂದು ಆಯ್ಕೆ ಮಾಡಲಾಗಿದೆ. ಈಗಾಗಲೇ ತಾಪಂಗೆ ಕಳುಹಿಸಿದ ಸದರಿ ಆಯ್ಕೆ ಪಟ್ಟಿ ದೋಷದಿಂದ ಕೂಡಿದೆ ಎಂದು ಗ್ರಾಮಸ್ಥರು ದಾಖಲೆ ಸಮೇತ ಮೂರು ಬಾರಿ ದೂರು ನೀಡಿದರೂ ಪರಿಶೀಲನೆ ನಡೆಸದೆ ಅನುಮೋದನೆ ನೀಡಲಾಗಿದೆ.
ತಾಲೂಕು ನೋಡಲ್ ಅಧಿಕಾರಿಗಳು ಗ್ರಾಮಕ್ಕೆ ಆಯ್ಕೆ ಪಟ್ಟಿಯಲ್ಲಿನ ಫಲಾನುಭವಿಗಳ ಈಗಿರುವ ಮನೆಯ ಸ್ಥಿತಿ, ಕಟ್ಟಿಸಿಕೊಳ್ಳುವ ಜಾಗದ ಪರಿಶೀಲನೆ ನಡೆಸಿಲ್ಲ ಮತ್ತು ಗ್ರಾಮಸ್ಥರು ದಾಖಲೆ ಸಮೇತ ನೀಡಿದ 145 ಫಲಾನುಭವಿಗಳ ಆಯ್ಕೆ ಪಟ್ಟಿಯಲ್ಲಿ ಕ್ರಸಂ 100 ರಿಂದ 1012 ರವಗೆಗೆ ಇರುವ ಫಲಾನುಭವಿಗಳು ಶ್ರೀಮಂತರಾಗಿರುತ್ತಾರೆ. ಇದರಿಂದ ಅರ್ಹ ಫಲಾನುಭವಿಗಳು ವಂಚಿತಗೊಂಡಿದ್ದು, ಕೂಡಲೇ ಪಟ್ಟಿಯನ್ನು ಪರಿಶೀಲನೆ ನಡೆಸಿ ಬಡವರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕನ್ನಾಪುರಹಟ್ಟಿ ಗ್ರಾಮದ ಪರಮಣ್ಣ ಸಂಗಪ್ಪ, ಪರಮಯ್ಯ ರಾಮಲಿಂಗಯ್ಯ, ದುರುಗಪ್ಪ, ನರಸಪ್ಪ, ಪರಮನಗೌಡ, ಮಲ್ಲಿಕಾರ್ಜುನ, ಪರಮಣ್ಣ, ಛತ್ರಪ್ಪ, ಹನುಮಂತ ಸೇರಿದಂತೆ ಇನ್ನಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

