ವಿಶ್ವಜ್ಯೋತಿ ವಾರ್ಷಿಕೋತ್ಸವ: ವಿನೂತನ ಆಚರಣೆಗೆ ನಿರ್ಧಾರ
ಕನ್ನಡಪ್ರಭ ವಾರ್ತೆ ಟಿ ಗುಲ್ಬರ್ಗ ಟಿ ಮಾ.25
ವಿಶ್ವಜ್ಯೋತಿ ಪ್ರತಿಷ್ಠಾನವು ತನ್ನ ಐದನೇ ವರ್ಷದ ವಾರ್ಷಿಕೋತ್ಸವವನ್ನು ವಿನೂತನವಾಗಿ ಆಚರಿಸುವ ಹಿನ್ನೆಲೆಯಲ್ಲಿ ಬರುವ ಏಪ್ರಿಲ್ 23ರಂದು ನಗರದಲ್ಲಿ ಜಿಲ್ಲಾ ಸಾಹಿತ್ಯ ಉತ್ಸವ-2103ನ್ನು ಆಚರಿಸುವ ಮೂಲಕ ನಾಡಿನ ಸಾಹಿತಿಗಳನ್ನು ಒಂದೆಡೆ ಸೇರಿಸಿ ಸಾಹಿತ್ಯಿಕ ಒಲವು- ನಿಲುವುಗಳ ಕುರಿತು ಚರ್ಚೆಗೆ ಆಸ್ಪದ ನೀಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಹೇಳಿದರು.
ನಗರದಲ್ಲಿ ಸಾಹಿತ್ಯ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಾಡು, ನುಡಿ ಬಗೆಗಿನ ಸವಾಲುಗಳು ಸಾಹಿತಿಗಳ ಜವಾಬ್ದಾರಿ ಬಗ್ಗೆ ಚಿಂತನ ಮಂಧನ ನಡೆಸಲು ಪ್ರತಿಷ್ಠಾನ ಮುಂದಾಗಿದೆ ಎಂದರು.
ಸಾಹಿತಿ ಡಾ. ಸ್ವಾಮಿರಾವ ಕುಲ್ಕರ್ಣಿ ಮಾತನಾಡಿ, ಸಾಹಿತಿಗಳ ಮಾಹಿತಿ ಇಂದಿನ ಯುವ ಪೀಳಿಗೆಗೆ ಸಿಗಬೇಕಾದರೆ, ಇಂತಹ ಸಾಹಿತ್ಯ ಉತ್ಸವಗಳು ಅವಶ್ಯ. ಈ ಮೂಲಕ ವಿಮರ್ಶೆ, ಚರ್ಚೆಗಳು ನಡೆದು ಅರ್ಥಪೂರ್ಣ ನಿಲವು ಪಡೆದು ಸಾಹಿತ್ಯಲೋಕ ಶ್ರೀಮಂತವಾಗಲು ಪ್ರೇರಣೆಯಾಗುತ್ತದೆ ಎಂದು ಹೇಳಿದರು.
ಹಿರಿಯ ಸಾಹಿತಿ ಎ.ಕೆ. ರಾಮೇಶ್ವರ, ಗುಲ್ಬರ್ಗ ವಿಶ್ವವಿದ್ಯಾಲಯ ಪ್ರಸಾರಾಂಗ ನಿರ್ದೇಶಕ ಡಾ. ಬಿ.ಎಸ್. ಪೊಲೀಸ್ ಪಾಟೀಲ್, ಪ್ರಾಧ್ಯಾಪಕ ಡಾ. ಶ್ರೀಶೈಲ್ ನಾಗರಾಳ, ಕಥೆಗಾರ್ತಿ ಸಂದ್ಯಾ ಹೊನಗುಂವಿಕರ್, ವೈದ್ಯ ಸಾಹಿತಿ ಡಾ. ಎಸ್.ಎಸ್. ಗುಬ್ಬಿ ಮಾತನಾಡಿದರು.
ಹಿರಿಯ ಸಾಹಿತಿ ಡಾ. ವಿಜಯಲಕ್ಷ್ಮೀ ಕೋಸಗಿ, ಪ್ರೊ. ಬಿ.ಆರ್. ಸುರಪುರ, ಪ. ಮನುಸಗರ, ನರಸಿಂಗರಾವ ಹೇಮನೂರ, ಎಂ.ಬಿ. ನಿಂಗಪ್ಪ, ಕೆ. ಗಿರಿಮಲ್ಲ, ಸಿ.ಎಸ್. ಮಾಲಿ ಪಾಟೀಲ್, ವಿಜಯಕುಮಾರ ಚೌಧರಿ, ಪ್ರಕಾಶ ಅಂಗಡಿ ಕನ್ನೆಳ್ಳಿ, ಶಿವರಾಜ ಎಸ್. ಅಂಡಗಿ, ಪ್ರಭುಲಿಂಗ ಮೂಲಗೆ, ಈರಣ್ಣ ನಾವಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಎಸ್. ದೇಸಾಯಿ, ಪ್ರತಿಷ್ಠಾನದ ಸಂಚಾಲಕ ಶ್ರೀಕಾಂತಗೌಡ ತಳಗೂಳ, ಶಾಂತಪ್ಪ ಪಾಟೀಲ್ ನರಿಬೋಳ, ಎನ್.ಸಿ. ವಾರದ ಸೇರಿದಂತೆ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಾಹಿತ್ಯ ಉತ್ಸವದ ಯಶಸ್ಸಿಗೆ ಪೂರಕವಾಗಿ ಸ್ವಾಗತ ಸಮಿತಿಯೊಂದನ್ನು ರಚಿಸಲಾಗಿದ್ದು, ಸಾಹಿತಿ. ಡಾ. ಸ್ವಾಮಿರಾವ ಕುಲ್ಕರ್ಣಿ ಗೌರವಾಧ್ಯಕ್ಷ, ಡಾ. ವಾಸುದೇವ ಸೇಡಂ ಕಾರ್ಯದರ್ಶಿ, ಎಂ.ಬಿ. ನಿಂಗಪ್ಪ ಪತ್ರಿಕಾ ಕಾರ್ಯದರ್ಶಿಯಾಗಿ ಆಯ್ಕೆಮಾಡಲಾಗಿದೆ. ಜಿಲ್ಲೆಯ ಲೇಖಕರು, ಬರಹಗಾರರನ್ನು ಒಗ್ಗೂಡಿಸಿ ಕಲ್ಬುರ್ಗಿ ಜಿಲ್ಲಾ ಲೇಖಕರ ವೇದಿಕೆಯೊಂದನ್ನು ಅಸ್ತಿತ್ವಕ್ಕೆ ತರಲು ಇದೇ ಸಂದರ್ಭದಲ್ಲಿ ತೀರ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

