ರಾಯಚೂರು

ಶ್ರೀಶೈಲ ಮಲ್ಲಯ್ಯನಿಗೆ ಘಂಟೆ ದಾನ

Published On :

ಮುದಗಲ್: ಸಮೀಪದ ಕನಸಾವಿ ಗ್ರಾಮದ ದೇವಪ್ಪ ಪಂಪಣ್ಣ ಎನ್ನುವವರಿಂದ ಶ್ರೀಶೈಲ ಮಲ್ಲಿಕಾರ್ಜುನನಿಗೆ ಪಾದಯಾತ್ರೆ ಮೂಲಕ 75 ಕಿಲೋದ ಸುಮಾರು 45 ಸಾವಿರ ಮೊತ್ತದ ಘಂಟೆಯನ್ನು ಸಮರ್ಪಿಸಲಿದ್ದಾರೆ. ಗ್ರಾಮದಿಂದ ಶ್ರೀಶೈಲಕ್ಕೆ ಪಾದಯಾತ್ರೆ ಹೋಗವು ಮಾರ್ಗ ಮಧ್ಯದಲ್ಲಿ ಪಟ್ಟಣದ ಐತಿಹಾಸಿಕ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಈ ವಿಷಯ ತಿಳಿಸಿದರು.  ಅವರು ಪಾದಯಾತ್ರೆ ಬೆಳೆಸುವ ಮುಂಚೆ, ಪತ್ರಕರ್ತರಿಗೆ ಮಾಹಿತಿ ಒದಗಿಸುತ್ತಾ, ಇದು ನನ್ನ ಬೇಡಿಕೆಯಾಗಿತ್ತು. ನನ್ನ ಕುಟುಂಬ ಸಮೇತ ಗ್ರಾಮದ ಕೆಲವರು ಸೇರಿ 11 ಜನರು ಪಾದಯಾತ್ರೆ ಮೂಲಕ ದರ್ಶನ ಪಡೆದು ಘಂಟೆಯನ್ನು ಸಮರ್ಪಿಸಿದ್ದಾಗಿ ತಿಳಿಸಿದರು.


ಕುಡಿವ ನೀರಿಗೆ ಆಗ್ರಹಿಸಿ ನಾಳೆ ಧರಣಿ


ಕನ್ನಡಪ್ರಭ ವಾರ್ತೆ   ರಾಯಚೂರು   ಮಾ.28
ತಾಲೂಕಿನ ಉಡಮಗಲ್ ಖಾನಾಪುರ ಗ್ರಾಮದ ದಲಿತರು ವಾಸವಾಗಿರುವ ಕಾಲನಿಗೆ ಫ್ಲೋರೈಡ್ ಮಿಶ್ರಿತ ಕೊಳವೆಬಾವಿ ನೀರು ಪೂರೈಸಲಾಗುತ್ತಿದೆ. ಇದರಿಂದಾಗಿ ಅನೇಕರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಂಡು ಶುದ್ಧ ಕುಡಿಯುವ ನೀರೊದಗಿಸದಿದ್ದಲ್ಲಿ ಮಾ.30ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುವುದಾಗಿ ಗ್ರಾಮದ ಗ್ರಾಪಂ ಮಾಜಿ ಅಧ್ಯಕ್ಷ ತಾಯಪ್ಪ ಭಂಡಾರಿ ಎಚ್ಚರಿಸಿದರು.
ಅವರು ನಗರದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗ್ರಾಮದ ದಲಿತರು ವಾಸವಾಗಿರುವ ಬಾಪೂಜಿ ನಗರದಲ್ಲಿ ನಾಲ್ಕು ಕೊಳವೆ ಬಾವಿಗಳಿವೆ. ಇಲ್ಲಿನ ನಿವಾಸಿಗಳಿಗೆ ಅವುಗಳಿಂದ ನೀರನ್ನು ಒದಗಿಸಲಾಗುತ್ತಿದೆ. ಆದರೆ ಆ ನೀರು ಕುಡಿಯಲು ಅಯೋಗ್ಯವಾಗಿವೆ. ಈ ನೀರಿನ ಸೇವನೆಯಿಂದ ಮೂಳೆಗಳಿಗೆ ಸಂಬಂಧಿಸಿದ ರೋಗ ಸೇರಿದಂತೆ ನಾನಾ ರೀತಿಯ ಆರೋಗ್ಯ ಸಂಬಂಧಿ ಸಮಸ್ಯೆಗಳು ತಲೆದೋರುತ್ತಿವೆ. ಅನೇಕರು ಈಗಾಗಲೇ ನೀರಿನ ಸೇವನೆಯಿಂದ ಜೀವ ಕಳೆದುಕೊಂಡಿದ್ದಾರೆ ಎಂದು ದೂರಿದರು.
ಆರೋಗ್ಯ ಸಮಸ್ಯೆ: ಗ್ರಾಮದ ಅನೇಕ ದಲಿತರಲ್ಲಿ ನರದೌರ್ಬಲ್ಯ, ಕಿಡ್ನಿ ವೈಫಲ್ಯ ಹಾಗೂ ಮೂಳೆ ಸವೆತ ಮತ್ತಿತರೆ ಸಮಸ್ಯೆಗಳು ಕಂಡುಬಂದಿವೆ.  40 ವರ್ಷಗಳಿಂದ ಇದೇ ರೀತಿ ಸಮಸ್ಯೆಯಿದ್ದು, ಕಲುಷಿತ ನೀರು ಸೇವಿಸಿ ಇದುವರೆಗೆ 10ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಟೀಕಿಸಿದರು.
ಈ ಕುರಿತು ಸಂಬಂಧಿಸಿದ ಜಿ.ಪಂ. ಮತ್ತು ನಾನಾ ರೋಗಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲವೆಂದು ಆರೋಪಿಸಿದರು.
ಉಡಮಗಲ್ ಖಾನಾಪುರ ಗ್ರಾಮದ ಹರಿಜನವಾಡ ಕಾಲನಿಯಲ್ಲಿ ಈ ರೀತಿಯ ನೀರಿನ ಸಮಸ್ಯೆಯಿದ್ದು, ಕಾರಣ ಕೂಡಲೇ ಸಮಸ್ಯೆ ನಿವಾರಣೆಗೆ ಜಿಲ್ಲಾಡಳಿತ ಮುಂದಾಗಬೇಕಿದೆ. ಶುದ್ಧ ಕುಡಿನ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಕಲುಷಿತ ನೀರಿನಿಂದ ಅನಾರೋಗ್ಯಪೀಡಿತರಾಗಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು. ನಾನಾ ರೋಗಗಳಿಂದ ನರಳುತ್ತಿರುವವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿದರು.
ಸ್ಪಂದಿಸಿಲ್ಲ: ದಲಿತರ ಬಡಾವಣೆಯಲ್ಲಿ ಜಿಲ್ಲಾಡಳಿತದಿಂದ ಆರೋಗ್ಯ ತಪಾಸಣೆ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ಮಾ.30ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಗ್ರಾಮದ ದಲಿತರು ಪ್ರತಿಭಟನಾ ಧರಣಿ ನಡೆಸಲಿದ್ದಾರೆಂದು ಎಚ್ಚರಿಸಿದ ಅವರು ಸುಮಾರು ವರ್ಷಗಳಿಂದ ಗ್ರಾಮಸ್ಥರ ಅನುಭವಿಸುತ್ತಿರುವ ಸಮಸ್ಯೆಗೆ ರಾಜಕೀಯ ನಾಯಕರಾಗಲೀ, ಸರ್ಕಾರವಾಗಲೀ ಸ್ಪಂದಿಸದಿರುವುದು ದುರದೃಷ್ಟಕರ ಎಂದರು.
ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಶುದ್ಧ ಕುಡಿಯುವ ನೀರೊದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಭೀಮಪ್ಪ ವಕೀಲ, ಲಕ್ಷ್ಮಪ್ಪ ಭಂಡಾರಿ, ಶಾಂತಪ್ಪ, ತಿಪ್ಪಣ್ಣ, ಹನುಮಂತು ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.