ಕಾಂಗ್ರೆಸ್, ಕೆಜೆಪಿಗೆ ಹುಸಿ ರೈತ ಕಾಳಜಿ: ಸೋಮನಾಥ ಲೇವಡಿ
ಕನ್ನಡಪ್ರಭ ವಾರ್ತೆ, ಸಿಂಧನೂರು, ಮಾ.31
ತಾಲೂಕಿನ ಬಳಗಾನೂರಿನ ಕಾಂಗ್ರೆಸ್, ಕೆಜೆಪಿ ಹಾಗೂ ಬಿಜೆಪಿ ಪಕ್ಷಗಳಿಗೆ ರೈತರ ಬಗ್ಗೆ ಎಳ್ಳಷ್ಟು ಕಾಳಜಿ ಇಲ್ಲ. ಮೊಸಳೆ ಕಣ್ಣೀರು ಸುರಿಸುವ ಮೂಲಕ ನಾಟಕ ಮಾಡುತ್ತಿವೆ ಎಂದು ಮಸ್ಕಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಜಾ ಸೋಮನಾಥ ನಾಯಕ ಲೇವಡಿ ಮಾಡಿದರು.
ಗ್ರಾಮದಲ್ಲಿ ಶನಿವಾರ ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್‌ಗೆ ಬಂದ ಕಾರ್ಯಕರ್ತರನ್ನು ಬರಮಾಡಿಕೊಂಡು ಅವರು ಮಾತನಾಡಿದರು. ನಾಲೆಗೆ ನೀರು ಹರಿಸುವಂತೆ ಮನವಿ ಮಾಡಿದರೆ ಶಾಸಕರು ಮತ್ತು ಅಧಿಕಾರಿಗಳು ನಮ್ಮ ಜೇಬಿನಲ್ಲಿ ನೀರಿವೆಯೇ ಎಂದು ಉಢಾಪೆಯ ಉತ್ತರ ನೀಡುವ ಮೂಲಕ ರೈತ ಸಮುದಾಯವನ್ನು ಅಮಾನಿಸಿರುವವರಿಗೆ ತಕ್ಕಪಾಠ ಕಲಿಸುವಂತೆ ಕರೆ ನೀಡಿದರು.
ಮನವಿ: ರೈತ ಸಂಕಷ್ಟ ಪರಿಹಾರವಾಗಲು ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಮಾತ್ರ ಸಾಧ್ಯ. ರೈತ ಸಮುದಾಯ ಯಾವುದೇ ಪಕ್ಷಗಳ ಆಸೆ, ಆಮಿಷಗಳಿಗೆ ಬಲಿಯಾಗದೆ ನೈಜ ರೈತಪರ ಕಾಳಜಿಯ ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಹುಸೇನಬಾಷಾ ಬೂದಗುಂಪ, ಶೇಖರಗೌಡ ಮಾಲಿ ಪಾಟೀಲ್ ಮಾತನಾಡಿದರು. ಜೆಡಿಎಸ್ ಕಾರ್ಯಧ್ಯಕ್ಷ ಅಮರೇಶ ಹಂಚಿನಾಳ, ಮಲ್ಲಪ್ಪ ಬಾರಕೇರ, ವಿಜಯಕುಮಾರ ನಾಯಕ, ಮಲ್ಲರೆಡ್ಡಿ ಮರಡ್ಡಿ ಶ್ರೀಕಾಂತ ಗುರುಬಸವ ನಾಯಕ ರವಿಕುಮಾರ ಚಿಗರಿ ಪಂಪಣ್ಣ ಮಸ್ಕಿ ಇನ್ನಿತರರು ಇದ್ದರು.
ಸೇರ್ಪಡೆ: ವಿವಿಧ ಪಕ್ಷಗಳನ್ನು ತೊರೆದು ಹೊನ್ನಪ್ಪ ಪೂಜಾರಿ, ಅಮರಪ್ಪ ಉಪ್ಪಾರ, ಮಲ್ಲಪ ಮಸ್ಕಿ, ಮೋದಿನ್ ಪಾಷ ಜಾಗೀರದಾರ, ಹನುಮೇಶ ಕೊರಪುರ, ಆನಂದ ಉಪ್ಪಾರ, ಶಿವಗ್ಯಾನಪ್ಪ ಪೂಜಾರಿ, ಶಿವಶರಣ ಉಪ್ಪಾರ, ಮರಿಸ್ವಾಮಿ ಉಪ್ಪಾರ, ಮರಿದೇವಪ್ಪ ಮಸ್ಕಿ, ಶವಪ್ಪ ಕುರಬೂರ, ಯಂಕಪ್ಪ ಉಪ್ಪಾರ, ಗಿರಿಯಪ್ಪ, ತಿಮ್ಮಣ್ಣ, ರಮೇಶ ಉಪ್ಪಾರ, ಎಮ್.ಡಿ. ಅನೀಪ್, ಶಿವು ಲಿಂಗಸಗೂರ ಸೇರಿದಂತೆ ಬಳಗಾನೂರ ಸಾಗರಕ್ಯಾಂಪಿನ ಸಿದ್ದಯ್ಯ ಮತ್ತು ಗಂಗಾಧರ ನೇತೃತ್ವದಲ್ಲಿ ಹಲವಾರು ಯುವಕರು ಜೆಡಿಎಸ್ ಪಕ್ಷಕ್ಕೆ ಸೇರಿದ ಪ್ರಮುಖರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

