ರಾಯಚೂರು

ಮನವೊಲಿಕೆಗೆ ಅಧಿಕಾರಿಗಳ ಶತಪ್ರಯತ್ನ: ಜಗ್ಗದ ಗ್ರಾಮಸ್ಥರು

Published On :

ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಮೇ 5
ಸರ್ಜಾಪುರ, ಅಮರಾವತಿ, ಕುಪ್ಪಿಗುಡ್ಡ ಗ್ರಾಮಸ್ಥರು ಮತದಾನ ಬಹಿಷ್ಕರಿಸಲು ನಿರ್ಧರಿಸಿದ ಪ್ರಯುಕ್ತ ಮೇ 5 ರಂದು ಬೆಳಗ್ಗೆ ಅಧಿಕಾರಿಗಳು ಗ್ರಾಮಸ್ಥರ ಮನಮೊಲಿಕೆಗೆ ಶತಪ್ರಯತ್ನ ನಡೆಸಿದರು. ಆದರೆ ಸರ್ಜಾಪುರ ಮತ್ತು ಅಮರಾವತಿ ಗ್ರಾಮಗಳ ಜನತೆ ಮತದಾನ ಮಾಡಲು ನಿರಾಕರಿಸಿದರು. ಕುಪ್ಪಿಗುಡ್ಡ ಗ್ರಾಮದಲ್ಲಿ ಬೆಳಗ್ಗೆ 5 ಮತಗಳು ಚಲಾವಣೆಗೊಂಡ ಮಾಹಿತಿ ತಿಳಿದ ಅಧಿಕಾರಿಗಳು ಗ್ರಾಮದ ಮುಖಂಡರ ಮನಮೊಲಿಸಲು ಯತ್ನಿಸಿದರು. ಆದರೆ ಗ್ರಾಮಸ್ಥರಿಂದ ಸಮಂಜಸ ಉತ್ತರ ದೊರೆಯಲಿಲ್ಲ.
ಗ್ರಾಮಗಳಿಗೆ ಭೇಟಿ: ಲಿಂಗಸ್ಗೂರು ಕ್ಷೇತ್ರದ ಚುನಾವಣಾಧಿಕಾರಿ, ಸಹಾಯಕ ಆಯುಕ್ತ ಟಿ.ಯೋಗೇಶ ಮತ್ತು ಡಿವೈಎಸ್‌ಪಿ ಅನಿತಾ ಹದ್ದಣ್ಣವರ ನೇತೃತ್ವದಲ್ಲಿ ಭಾನುವಾರ (ಮೇ 5) ಬೆಳಗ್ಗೆ ಸರ್ಜಾಪುರ, ಅಮರಾವತಿ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮದ ಮುಖಂಡರನ್ನು ಭೇಟಿ ಮಾಡಿ ಮನಮೊಲಿಸಲು ಪ್ರಯತ್ನಿಸಿದರು. ಆದರೆ ಈ ಎರಡು ಗ್ರಾಮಗಳ ಜನತೆ ಮತದಾನ ಮಾಡಲು ನಿರಾಕರಿಸಿದರು. ನಂತರ ಕುಪ್ಪಿಗುಡ್ಡ ಗ್ರಾಮಕ್ಕೆ ಬೆಳಗ್ಗೆ 10 ಗಂಟೆ ಸುಮಾರಿಗೆ ತೆರಳಿದಾಗ ಮತಗಟ್ಟೆ ಕೇಂದ್ರದಲ್ಲಿ ಕೇವಲ 5 ಮತಗಳು ಚಲಾವಣೆಗೊಂಡ ಮಾಹಿತಿ ತಿಳಿದು ಬಂದಿತು.
ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ: ಇದರಿಂದ ಅಧಿಕಾರಿಗಳು ಕುಪ್ಪಿಗುಡ್ಡ ಗ್ರಾಮದ ಮುಖಂಡರನ್ನು ಭೇಟಿ ಮಾಡಿ ಅಲ್ಲಿಯೂ ಮನಮೊಲಿಸುವ ಪ್ರಯತ್ನ ನಡೆಸಿದರು. ಇದಕ್ಕೆ ಸರ್ಜಾಪುರ, ಕುಪ್ಪಿಗುಡ್ಡ ಮತ್ತು ಅಮರಾವತಿ ಗ್ರಾಮಗಳನ್ನು ಮಸ್ಕಿ (ತಾಲೂಕು) ಕ್ಷೇತ್ರಕ್ಕೆ ಒಳಪಡಿಸದೆ ಲಿಂಗಸ್ಗೂರು ತಾಲೂಕಿನಲ್ಲಿಯೆ ಉಳಿಸಬೇಕೆಂದು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಮತ್ತು ಗ್ರಾಮದಲ್ಲಿ ಶಾಶ್ವತ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದ ಬೇಸತ್ತ ಜನತೆ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ತೀರ್ಮಾನಿಸಲಾಗಿದೆ ಎಂದು ಗ್ರಾಮಸ್ಥರು ಸ್ಪಷ್ಟಪಡಿಸಿದರು.
ಇದಕ್ಕೆ ಸಹಾಯಕ ಆಯುಕ್ತ ಟಿ.ಯೋಗೇಶ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಮತದಾನ ಮಾಡುವುದು ಎಲ್ಲರ ಹಕ್ಕಾಗಿದ್ದು, ಈ ರೀತಿ ಬಹಿಷ್ಕರಿಸುವುದು ಸರಿಯಾದ ಕ್ರಮವಲ್ಲ. ಬಹಿಷ್ಕಾರ ಕೈಬಿಟ್ಟು ಮತದಾನ ಮಾಡಲು ಮುಂದಾಗಬೇಕು. ಚುನಾವಣೆ ನಂತರ ಬೇಡಿಕೆಗಳ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದೆಂದು ಮನವಿ ಮಾಡಿದರು. ಆದರೆ ಗ್ರಾಮಸ್ಥರಿಂದ ಸಮಂಜಸ ಉತ್ತರ ದೊರೆಯಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.