ಬೇಡಿಕೆ ಈಡೇರಿಕೆಗೆ ಆಗ್ರಹ: ಔಷಧ ವ್ಯಾಪಾರಿಗಳಿಂದ ಬಂದ್
ರಾಯಚೂರು: ಕೇಂದ್ರ ಸರ್ಕಾರದ ವಿರೋಧಿ ನೀತಿಯಿಂದಾಗಿ ಔಷಧ ವ್ಯಾಪಾರಿಗಳಿಗೆ ಕಿರುಕುಳ ಆಗುತ್ತಿದ್ದು, ಕೂಡಲೇ ನಿಯಮಗಳಲ್ಲಿ ಸಡಿಲಿಕೆಗೆ ಕೋರಿ ಅಖಿಲ ಭಾರತ ಮಟ್ಟದಲ್ಲಿ ಕರೆ ನೀಡಿದ್ದ ಬಂದ್ ಗೆ ಬೆಂಬಲಿಸಿ ನಗರ ಸೇರಿ ಜಿಲ್ಲಾದ್ಯಂತ ಶುಕ್ರವಾರ ಜಿಲ್ಲಾ ಔಷಧ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ಔಷಧ ಅಂಗಡಿ ಮುಚ್ಚಿ ಪ್ರತಿಭಟನೆ ನಡೆಸಿದರು.
ತಿದ್ದುಪಡಿ: ನಗರದಲ್ಲಿ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ನಡೆಸಿದ ಔಷಧ ವ್ಯಾಪಾರಿಗಳು, ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಗೆ ಮನವಿ ಸಲ್ಲಿಸಿ, ಔಷಧ ವ್ಯಾಪಾರಸ್ಥರ ಲಾಭಾಂಶ ಕಡಿತಗೊಳಿಸುವ ಕುರಿತು ಕಾಯಿದೆ 2013ರ ತಿದ್ದುಪಡಿ ಜಾರಿಗೆ ತರದೇ ಸದ್ಯ ಜಾರಿಯಲ್ಲಿರುವ ಪದ್ಧತಿ ಮುಂದುವರಿಸಲು ಆಗ್ರಹಿಸಿದರು.
ಔಷಧ ಹಾಗೂ ಕಾಂತಿವರ್ಧಕ ವಸ್ತುಗಳ ಮಾರಾಟ ಕಾಯಿದೆ ಅಡಿ ಔಷಧ ವ್ಯಾಪಾರದಲ್ಲಿ ತೊಡಗಿರುವ ಫಾರ್ಮಾಸಿಸ್ಟ್‌ಗಳಿಗೆ ಔಷಧಿ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು. ಔಷಧ ಮತ್ತು ಕಾಂತಿವರ್ಧಕ ಕಾಯಿದೆ 1940ರ ಕಲಂ 19ರ ಉಲ್ಲಂಘನೆ ಹಿನ್ನೆಲೆಯಲ್ಲಿ ಔಷಧ ಮಾರಾಟಗಾರ ತಾನು ಖರೀದಿಸಿದ ಇಲ್ಲವೇ ದಾಸ್ತಾನಿರಿಸಿದ ವಸ್ತುವಿನ ದಾಖಲೆ ಆಧರಿಸಿ ಆತನನ್ನು ಆರೋಪಿಯಾಗಿಸುವುದು ಸರಿಯಲ್ಲ.
ಬದಲಿಗೆ ಆತ ತಪ್ಪಿತಸ್ಥ ಎಂದು ಸಾಬೀತಾಗುವವರೆಗೆ ಕಾಯಿದೆಯಲ್ಲಿನ ಶಿಕ್ಷಾರ್ಹ ಕಲಂ ಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದರು.
ಔಷಧ ವಿತರಣೆ ಉದ್ಯಮದಲ್ಲಿ ದೇಶದ 25 ಲಕ್ಷ ಕುಟುಂಬಗಳು ನಿರತರಾಗಿದ್ದಾರೆ. ಈ ಹಿನ್ನೆಲೆ ಔಷಧಿಯ ವಹಿವಾಟನ್ನು ವಿದೇಶಿ ಹಣದ ಹೂಡಿಕೆಯಿಂದ ಮುಕ್ತಗೊಳಿಸುವಂತೆ ಹೋರಾಟಗಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ನಾಗರಾಜ್ ತುಪ್ಪದ್, ಕಾರ್ಯದರ್ಶಿ ಮುರಾರಿ ಲಾಲ್ ಅಗರವಾಲ್ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

