ರಾಯಚೂರು

ಹಣ ಹಂಚಿಕೆಯಿಂದ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಗೆಲವು: ಟೀಕೆ

Published On :

ರಾಯಚೂರು: ರಾಯಚೂರು ಗ್ರಾಮೀಣ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಗೆಲವಿಗೆ ಅವರ ವೈಯಕ್ತಿಕ ವರ್ಚಸ್ಸು ಕಾರಣವಲ್ಲ. ಬದಲಿಗೆ ಕಳೆದ 8ತಿಂಗಳಿನಿಂದ ಅವರು ಕ್ಷೇತ್ರದಲ್ಲಿ ಮತದಾರರಿಗೆ ವಿವಿಧ ಆಮಿಷಗಳನ್ನೊಡ್ಡಿದ್ದರಿಂದಲೇ ಗೆಲವು ಕಂಡಿದ್ದಾರೆಂದು ಚುನಾವಣೆಯ ಪರಾಜಿತ ಪಕ್ಷೇತರ ಅಭ್ಯರ್ಥಿ ಚಿನ್ನಯ್ಯ ನಾಯಕ ಆರೋಪಿಸಿದರು.
ನಗರದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಅನೇಕ ತಿಂಗಳಿನಿಂದ ಬಿಜೆಪಿಯ ತಿಪ್ಪರಾಜ ಅವರು ಮತದಾರರಿಗೆ ಚಿನ್ನದ ಆಭರಣ, ಹಣ ಮತ್ತು ಗುಡಿಗುಂಡಾರಗಳಿಗೆ ಹಣ ನೀಡುವ ಮೂಲಕ ಮತದಾರರಿಗೆ ಆಮಿಷ ಒಡ್ಡಿದ್ದಾರೆಂದು ದೂರಿದರು.
ಚುನಾವಣೆಯ ಮತದಾನದ ದಿನದಂದೂ ಸಹ ಅವರು ಮತದಾರರಿಗೆ ಚಿನ್ನದ ಓಲೆ ಮತ್ತಿತರೆ ಆಮಿಷ ಒಡ್ಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರಿತ್ತರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದ ಅವರು ದೇವದುರ್ಗ ಕ್ಷೇತ್ರಕ್ಕೆ ಬಿಜೆಪಿ ಸರ್ಕಾರಒದಗಿಸಿದ್ದ ಅನುದಾನ ದುರ್ಬಳಕೆಯಾಗಿದ್ದು, ಆ ಅನುದಾನವನ್ನೇ ಗ್ರಾಮೀಣ ಕ್ಷೇತ್ರದಲ್ಲಿ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದರು.
ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಪರಿಹರಿಸುವುದಾಗಿ ಸದ್ಯ ಆಯ್ಕೆಯಾಗಿರುವ ಬಿಜೆಪಿ ಶಾಸಕ ತಿಪ್ಪರಾಜ ಮತದಾರರಿಗೆ ಆಶ್ವಾಸನೆ ನೀಡಿದ್ದು, ಭರವಸೆಗಳನ್ನು ಮರೆತು ಕಾರ್ಯನಿರ್ವಹಿಸಿದಲ್ಲಿ ರೈತರೊಂದಿಗೆ ಸೇರಿ ಹೋರಾಟಕ್ಕಿಳಿಯುವುದಾಗಿ ಚಿನ್ನಯ್ಯ ನಾಯಕ ಎಚ್ಚರಿಸಿದರು.
ಕ್ಷೇತ್ರದಲ್ಲಿ ಶಾಶ್ವತ ಕುಡಿಯುವ ನೀರು, ಎಡದಂಡೆಯಿಂದ ರೈತರಿಗೆ ಸಮರ್ಪಕ ನೀರು, ರಸ್ತೆ ನಿರ್ಮಾಣದಂಥ ಭರವಸೆಗಳನ್ನು ತಿಪ್ಪರಾಜ ನೀಡಿದ್ದು ಈ ನಿಟ್ಟಿನಲ್ಲಿ ಮುಂದುವರಿಯದಿದ್ದಲ್ಲಿ ಹೋರಾಟ ನಿಶ್ಚಿತ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.