ರುದ್ರಾಭಿಷೇಕ, ಪೂಜಾರ್ಚನೆ
ಕನ್ನಡಪ್ರಭ ವಾರ್ತೆ , ಬೀದರ್ , ಮೇ 11
ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಪಟ್ಟ ದೊರಕಿರುವುದರಿಂದ ಮೇ 12ರಂದು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪಂಡಿತರಾವ ಚಿದ್ರಿಯವರಿಂದ ಮೈಲಾರ ಮಲ್ಲಣ್ಣಾ ದೇವರಿಗೆ ರುದ್ರಾಭಿಷೇಕ ಪೂಜಾರ್ಚನೆ ಹಮ್ಮಿಕೊಂಡಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿ ಕಾಂಗ್ರೆಸ್ನ ಹಿರಿಯ ಮುಖಂಡ, ಹಿಂದುಳಿದ ವರ್ಗಗಳ ಧೀಮಂತ ನಾಯಕ ಸಿದ್ರಾಮಯ್ಯ ಅವರಿಗೆ ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿರುವುದರಿಂದ ದೇವರ ಕೃಪೆಯಾಗಲೆಂದು ಭಾಲ್ಕಿ ತಾಲೂಕಿನ ದಕ್ಷಿಣ ಕಾಶಿ ಎಂದೆ ಪ್ರಸಿದ್ಧಿ ಪಡೆದ ಮೈಲಾರ ಮಲ್ಲಣ್ಣ (ಖಂಡೋಬಾ) ದೇವಸ್ಥಾನದಲ್ಲಿ ಮೇ 12ರಂದು ಬೆಳಿಗ್ಗೆ 8ಕ್ಕೆ ಪಂಡಿತರಾವ ಚಿದ್ರಿಯವರು ಪತ್ನಿ ಸಮೇತ ನೂರಾರು ಬೆಂಬಲಿಗರೊಂದಿಗೆ ಪೂಜಾರ್ಚನೆ ನಡೆಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಿದ್ರಾಮಯ್ಯನವರ ಬೆಂಬಲಿಗರು, ಅಭಿಮಾನಿಗಳು, ಹಿತೈಷಿಗಳು ಹೆಚ್ಚನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಬೂಡಾದ ಮಾಜಿ ಅಧ್ಯಕ್ಷ ಪಂಡಿತರಾವ ಚಿದ್ರಿ ಮನವಿ ಮಾಡಿದ್ದಾರೆ.
ಹಾರೂರಗೇರಿ: ಪ್ರಸಾದ, ವಚನ ಸಂಗೀತೋತ್ಸವ
ಬೀದರ್: ಪ್ರತಿ ವರ್ಷದಂತೆ ಈ ವರ್ಷವೂ ಬಸವ ಜಯಂತಿ ವಿಜ್ರಂಭಣೆಯಿಂದ ಆಚರಸಲಾಗುತ್ತಿದ್ದು ಮೇ 12 ರಂದು ಮಹಾ ಪ್ರಸಾದ ಹಮ್ಮಿಕೊಳ್ಳಲಾಗಿದೆ ಎಂದು ಬಸವರಾಜ ಪಾಟೀಲ್ ಹಾರೂರಗೇರಿ ತಿಳಿಸಿದ್ದಾರೆ.
ಸಂಜೆ 5 ಗಂಟೆಯಿಂದ ಜಯಂತಿ ನಿಮಿತ್ತ ಹಾರೂರಗೇರಿಯಲ್ಲಿ ಮಹಾ ಪ್ರಸಾದ (ಖಾಂಡ) ಪಲ್ಲಕಿ ಉತ್ಸವ ಹಾಗೂ ವಚನ ಸಂಗೀತೋತ್ಸವ ನಡೆಯಲಿದೆ.ಅಲ್ಲದೇ ಶಿವಕುಮಾರ ಪಂಚಾಳ ಮತ್ತು ಅವರ ತಂಡದಿಂದ ವಚನ ಸಂಗೀತೋತ್ಸವ ಏರ್ಪಡಿಸಲಾಗಿದೆ. ಮೇ 13ರಂದು ಬೆಳಿಗ್ಗೆ 7ಗಂಟೆಗೆ ಬಸವೇಶ್ವರ ಮಂದಿರದಿಂದ ಬಸವಣ್ಣನವರ ಪಲ್ಲಕಿ ಮೆರವಣಿಗೆ ನಡೆಯಲಿದೆ. ಎಲ್ಲಾ ಬಂಧುಗಳು ಪ್ರಸಾದ ಹಾಗೂ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

