ರಾಯಚೂರು

ಹುತಾತ್ಮ ಸುಭಾಶ್ಚಂದ್ರ ನಾಡಿನ ಹೆಮ್ಮೆಯ ಪುತ್ರ

Published On :

ಕ.ಪ್ರ. ವಾರ್ತೆ  ಶಹಾಪುರ  ಮೇ 14
ವೀರಯೋಧ ಸುಭಾಶ್ಚಂದ್ರ ಮಡಿವಾಳ ಕಳೆದ ವರ್ಷ ನಕ್ಸಲರ ವಿರುದ್ಧ ಹೋರಾಡಿ ಅವರ ಗುಂಡೇಟಿಗೆ ಬಲಿಯಾಗಿದ್ದು ಆತನ ಪುಣ್ಯಸ್ಮರಣೆ ಕೇವಲ ಸಗರ ಗ್ರಾಮಕ್ಕೆ ಸೀಮಿತವಾಗದೇ ಇಡೀ ಸಗರ ನಾಡಿನಲ್ಲಿ ವೀರಯೋಧನ ಸ್ಮರಣೆ ನಡೆಯಬೇಕೆಂದು ಸ್ವಾತಂತ್ರ್ಯ ಹೋರಾಟಗಾರ ವಿದ್ಯಾಧರ ಗುರೂಜಿ ತಿಳಿಸಿದರು.
   ಸಗರ ಗ್ರಾಮದಲ್ಲಿ ಹುತಾತ್ಮ ಯೋಧ ಸುಭಾಶ್ಚಂದ್ರ ಮಡಿವಾಳರ ಪುಣ್ಯಸ್ಮರಣೆ ನಿಮಿತ್ತ ಸ್ಥಳೀಯ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಖ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
  ವೀರ ಯೋಧನ ನೆನಪಿಗಾಗಿ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಬಂದಾಗ ಸಗರದ ಮತ್ತೋರ್ವ ವೀರಯೋಧ ಮಲ್ಲಪ್ಪ ಭಾಗಪ್ಪ ಅಂದ್ಯಾಳ ಮೃಪಟ್ಟಿರುವುದು ಬೇಸರದ ಸಂಗತಿ. ಗೆಳೆಯನ ಪುಣ್ಯಸ್ಮರಣೆ ದಿನದಿಂದೇ ಹೃದಯಾಘಾತದಿಂದ ಹುತಾತ್ಮನಾಗಿರುವುದು ಇಬ್ಬರು ವೀರಯೋಧರ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದರು.
ಸ್ಮರಣೀಯರು: ಇತಿಹಾಸದ ಪುಟದಲ್ಲಿ ಯಾವಾಗಲೂ ಸಗರ ನಾಡು ತನ್ನದೇ ಆದ ಚರಿತ್ರೆಯನ್ನು ಹೊಂದಿದ್ದು, ಅಂಥ ಇತಿಹಾಸದಲ್ಲಿ ಇವರಂಥ ಮಹಾನ್ ವ್ಯಕ್ತಿಗಳು ಸ್ಮರಣೀಯರಾಗಿದ್ದಾರೆ. ಅಂದು ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಾತೃ ಹೃದಯಗಳು, ತಮ್ಮ ಮಕ್ಕಳು ಪ್ರಾಣಾರ್ಪಣೆ ಮಾಡಿದರೂ ಚಿಂತೆಯಿಲ್ಲ ದೇಶ ಉಳಿಯಬೇಕೆಂಬ ಆದರ್ಶವನ್ನು ತೋರಿದ್ದಾರೆ. ಅಂಥ ಆದರ್ಶ ಈಗಿನ ಮಾತೆಯರಲ್ಲೂ ಬರಬೇಕೆಂದು ವಿದ್ಯಾಧರ ಗುರೂಜಿ ಹೇಳಿದರು. ಸುಭಾಶ್ಚಂದ್ರ ಮಡಿವಾಳ, ಮಲ್ಲಪ್ಪ ಭಾಗಪ್ಪ ಅಂದ್ಯಳಿ ಇವರಿಬ್ಬರೂ ಯೋಧರು ಅಮರವಾಗಿದ್ದಾರೆ ಎಂದರು.
ಯೋಧರ ಪರಿಚಯ ಎಲ್ಲೆಡೆ ಪಸರಿಸಲಿ: ಸಾಹಿತಿ ಎ.ಕೆ. ರಾಮೇಶ್ವರ ಮಾತನಾಡಿ, ಮರಣವೇ ಮಹಾನವಮಿ ಎನ್ನುವಂತೆ ಬಸವ ಜಯಂತಿ ಆಚರಣೆ ಸಂದರ್ಭದಲ್ಲಿ ಇಬ್ಬರು ಯೋಧರ ಹುತಾತ್ಮರಾಗಿದ್ದು ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದರು. ಹಿರಿಯ ನ್ಯಾಯವಾದಿ ಭಾಸ್ಕರಾವ ಮೂಡಬೂಳ ಮಾತನಾಡಿ, ಯೋಧರ ಸ್ಮರಣೆ ಮುಂದಿನ ಪೀಳಿಗೆಗ ಅಗತ್ಯವಾಗಿದ್ದು ಅವರ ನೆನಪಿಗೆ ಸ್ಮಾರಕಗಳು, ಅವರ ಪರಿಚಯ ಎಲ್ಲಡೆ ಹರಡುವಂಥ ಪ್ರಯತ್ನಗಳು ನಡೆಯಬೇಕು ಎಂದರು.
  ಪ್ರಾಸ್ತಾವಿಕವಾಗಿ ಪ್ರಮುಖರಾದ ಲಿಂಗಣ್ಣಾ ಪಡಶಟ್ಟಿ ಮಾತನಾಡಿದರು. ಅಧ್ಯಕ್ಷತೆಯನ್ನು ಬಸನಗೌಡ ಮಾಲಿ ಪಾಟೀಲ ವಹಿಸಿದ್ದರು. ಹುತಾತ್ಮ ಸುಭಾಶ್ಚಂದ್ರ ಪತ್ನಿ ಗಂಗಾಬಾಯಿ ಇನ್ನಿತರರು ಉಪಸ್ಥಿತರಿದ್ದರು. ಪಿಡ್ಡಪ್ಪ ನಂದಿಕೋಲ್ ವಂದಿಸಿದರು. ಕಾರ್ಯಕ್ರಮದಲ್ಲಿ ಶೇಖರಪ್ಪ ಮಾಸ್ಟರ, ಗ್ರಾಪಂ ಅಧ್ಯಕ್ಷ ಸಿದ್ದಮ್ಮ ಶೇಖರಪ್ಪ, ಜಿಪಂ ಸದಸ್ಯ ನಾಗನಗೌಡ ಸುಬೇದಾರ, ತಾಪಂ ಸದಸ್ಯೆ ಲಕ್ಷ್ಮಿಬಾಯಿ, ಸಾಯಬಣ್ಣ ಮಡಿವಾಳಕರ ಸೇರಿದಂತೆ ಹಲವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.