4 ಕಾರು ಗಾಜಿಗೆ ಕಲ್ಲು: ಆತಂಕದಲ್ಲಿ ಜನತೆ
ಗುಲ್ಬರ್ಗ: ಖಾಲಿ ಜಾಗದಲ್ಲಿ ನಿಲ್ಲಿಸಲಾಗಿದ್ದ 4 ಕಾರುಗಳಿಗೆ ಕಿಡಿಗೇಡಿಗಳು ಕಲ್ಲು ಹೊಡೆದು ಕಾರುಗಳ ಗ್ಲಾಸ್ಗಳನ್ನು ಒಡೆದು ಹಾಕಿದ ಘಟನೆ ನಗರದ ಬಸವೇಶ್ವರ ಕಾಲೋನಿಯ ಹೊಸ ಬಡಾವಣೆಯ ಕೆಎನ್ಝಡ್ ಫಂಕ್ಷನ್ ಹಾಲ್ ಹತ್ತಿರ ಗುರುವಾರ ಬೆಳಗಿನ ಜಾವ ನಡೆದಿದೆ. ಹೆಸರಾಂತ ಕಂಪನಿಯ ಸ್ಯಾಂಟ್ರೋ, ಸ್ವಿಫ್ಟ್ ಮತ್ತು ಡಿಜೈರ್ ಕಾರುಗಳಿಗೆ ಕಲ್ಲು ಹೊಡೆದು ಕಾರಿನ ಗ್ಲಾಸುಗಳನ್ನು ಒಡೆದು ಹಾಕಲಾಗಿದ್ದು, ಎರಡು ಕಾರುಗಳ ಮುಂದಿನ ಗ್ಲಾಸುಗಳನ್ನು ಮತ್ತು ಇನ್ನೆರೆಡು ಕಾರುಗಳ ಹಿಂದಿನ ಗ್ಲಾಸುಗಳನ್ನು ಒಡೆದು ಪುಡಿ ಪುಡಿ ಮಾಡಲಾಗಿದೆ. ನಗರದಲ್ಲಿ ಈ ರೀತಿ ನಡೆಯುತ್ತಿರುವುದು ಮೂರನೇ ಘಟನೆ ಇದಾಗಿದ್ದು, ಈ ಹಿಂದೆ ಬಸವೇಶ್ವರ ಕಾಲೋನಿ, ಖೂಬಾ ಪ್ಲಾಟ್ ಮತ್ತು ವೆಂಕಟೇಶ್ವರ ನಗರದಲ್ಲಿ ಮನೆ ಮುಂದೆ ನಿಲ್ಲಿಸಲಾಗಿದ್ದ ಕಾರುಗಳಿಗೆ ಕಲ್ಲು ಹೊಡೆದು ಕಾರಿನ ಗ್ಲಾಸ್ಗಳನ್ನು ಪುಡಿ ಪುಡಿ ಮಾಡಲಾಗಿತ್ತು. ಇಂತಹ ಘಟನೆಗಳು ನಗರದಲ್ಲಿ ಮತ್ತೆ ಮತ್ತೆ ಮರುಕಳಿಸುತ್ತಿದ್ದು, ಈ ರೀತಿಯ ದುಷ್ಕೃತ್ಯವೆಸಗುತ್ತಿರುವವರು ಯಾರು ಮತ್ತು ಕಾರುಗಳನ್ನೇ ಗುರಿಯಾಗಿಟ್ಟುಕೊಂಡು ಅವರು ಯಾಕೆ ಈ ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂಬುದು ಪೊಲೀಸರಿಗೆ ತಲೆ ನೋವಾಗಿದೆ. ಈ ಹಿಂದೆ ನಡೆದ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ ಮತ್ತು ಪ್ರಕರಣ ಯಾರಿಂದ ನಡೆಯಿತು ಎಂಬುವುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಸುದ್ದಿ ತಿಳಿದ ತಕ್ಷಣ ಎಂ.ಬಿ. ನಗರ ಪಿಎಸ್ಐ ಶ್ರೀಮಂತ ಇಲ್ಲಾಳ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

