ಕುಡಿವ ನೀರಿನ ಸಮಸ್ಯೆ ನೀಗಿಸಲು ಸದಸ್ಯರ ಮನವಿ
ಸಿಂಧನೂರು: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಹೆಚ್ಚುತ್ತಲಿದ್ದು ಕೆರೆಯಲ್ಲಿ ಸಂಗ್ರಹಿಸಿದ ನೀರು ಜೂ. 30ರವರೆಗೆ ಮಾತ್ರ ಸರಿ ಹೋಗಬಹುದು. ಜುಲೈ ಅಂತ್ಯದವರೆಗೆ ನೀರಿನ ಸಮಸ್ಯೆ ಭೀಕರಗೊಳ್ಳಲಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಲಿಂಗಸ್ಗೂರು ಉಪ ವಿಭಾಗದ ಸಹಾಯಕ ಆಯುಕ್ತ ಟಿ.ಯೋಗೇಶ ಅವರಿಗೆ ನಗರಸಭಾ ಸದಸ್ಯರು ಮನವಿ ಪತ್ರ ಸಲ್ಲಿಸಿದರು.
ಕೆರೆಯ ಹತ್ತಿರ ಹೊಸದಾಗಿ 10 ಬೊರವೆಲ್ಗಳನ್ನು ಕೊರೆದು ಪಂಪ್ಸೆಟ್ ಅಳವಡಿಸಬೇಕು. ಗುರುಸಿದ್ದಪ್ಪನ ತೋಟದ ಹತ್ತಿರ ಹರಿಯುವ ಹಳ್ಳದ ನೀರನ್ನು ಕೆರೆಗೆ ಸರಬರಾಜು ಮಾಡಲು 10 ಎಚ್.ಪಿ.ಯ ಎರಡು ಪಂಪ್ಸೆಟ್ ಅಳವಡಿಸಿ 4 ಕಿ.ಮೀ.ವರೆಗೆ 6 ಇಂಚ್ ವ್ಯಾಸದ ಪಿವಿಸಿ ಪೈಪ್ಲೈನ್ ಹಾಕಬೇಕು. ಇಲ್ಲದಿದ್ದರೆ ನಗರದಾದ್ಯಂತ ಕುಡಿಯುವ ನೀರಿಗೆ ಹಾಹಾಕಾರ ಏಳುತ್ತದೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕೆಂದು ನಗರಸಭಾ ಸದಸ್ಯರಾದ ಜಾಫರ ಜಾಗೀರದಾರ, ಪ್ರಭುರಾಜ, ನಬೀಸಾಬ, ಶರಣಯ್ಯಸ್ವಾಮಿ, ವೆಂಕಟೇಶ ಬಂಡಿ, ಹಾಜಿ ಮಸ್ತಾನ ಮತ್ತಿತರರು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

