ರಾಯಚೂರು

ಕಾನೂನು ನಿಂತ ನೀರಲ್ಲ: ನ್ಯಾ. ಸೋಮಶೇಖರ

Published On :

ಸಿಂಧನೂರು: ಕಾನೂನಿನ ವ್ಯಾಪ್ತಿ ದೊಡ್ಡದು. ಎಂತಹ ದೊಡ್ಡ ವ್ಯಕ್ತಿಯಾದರೂ ಕಾನೂನಿನ ಮುಂದೆ ಸಣ್ಣವನು. ನ್ಯಾಯವಾದಿಗಳು ನಿರಂತರವಾಗಿ ಅಧ್ಯಯನ ಶೀಲರಾಗಬೇಕು. ಕಾನೂನು ನಿತ್ಯವೂ ಹೊಸದು. ಅದು ಹರಿಯುವ ನೀರಿದ್ದಂತೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಪಿ.ಜೆ.ಸೋಮಶೇಖರ ಹೇಳಿದರು.
ತಾಲೂಕ ನ್ಯಾಯವಾದಿಗಳ ಸಂಘದಿಂದ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿತರಾಗಿ ಮಾತನಾಡಿದರು. ತಾವು ಸಿಂಧನೂರಿನಲ್ಲಿ ಮೂರು ವರ್ಷ ಒಂಬತ್ತು ತಿಂಗಳು ಕಾರ್ಯನಿರ್ವಹಿಸಿದ್ದು, ತಮ್ಮ ಆತ್ಮಸಾಕ್ಷಿಗನುಗುಣವಾಗಿ ಕಾರ್ಯನಿರ್ವಹಿಸಿರುವುದಾಗಿ ಹೇಳಿದ ಅವರು ಕೆಲಸದ ಒತ್ತಡದಲ್ಲಿ ನ್ಯಾಯವಾದಿಗಳಿಗೆ ಏನಾದರೂ ತಮ್ಮಿಂದ ನೋವಾಗಿದ್ದರೆ ವಿಷಾದಿಸುವುದಾಗಿ ಹೇಳಿದರು.
ಸಿಂಧನೂರು ನ್ಯಾಯವಾದಿಗಳು ತಮ್ಮ ಸೇವಾವಧಿಯಲ್ಲಿ ಸಂಪೂರ್ಣ ಸಹಕಾರ ನೀಡಿದ್ದು, ವಿಶೇಷವಾಗಿ ನ್ಯಾಯವಾದಿಗಳ ಸಂಘದ ಮಾಜಿ ಅಧ್ಯಕ್ಷ ಎನ್.ರಾಮನಗೌಡ ಹಾಗೂ ಹಾಲಿ ಅಧ್ಯಕ್ಷ ಕೆ.ಭೀಮನಗೌಡ ಕಾನೂನು ಅರಿವು ನೆರವು, ಕಾನೂನು ಸಾಕ್ಷರತ ರಥದ ಕಾರ್ಯಕ್ರಮಗಳಿಗೆ ಹೆಚ್ಚಿನ ರೀತಿಯಲ್ಲಿ ಸಹಕರಿಸಿದ್ದಾರೆ. ಜಿಲ್ಲೆಯಲ್ಲಿಯೇ ತಮ್ಮ ಕಾರ್ಯಕ್ರಮಗಳು ಯಶಸ್ವಿಯಾದವು. ತಮ್ಮ ಕಾರ್ಯನಿರ್ವಹಣೆಗೆ ಜಿಲ್ಲಾ ನ್ಯಾಯಾಧೀಶರಾದ ಎನ್.ಬಿ.ಕುಲಕರ್ಣಿ, ಕೆಂಪಗೌಡರ, ಮಿಟ್ಟಲಕೋಡ್ ಸಹಕಾರ ನೀಡಿದ್ದಾಗಿ ಸ್ಮರಿಸಿದರು. ವರ್ಗವಣೆಗೊಂಡ ನ್ಯಾಯಾಧೀಶರ ಕುರಿತು ನ್ಯಾಯವಾದಿಗಳಾದ ಟಿ.ರಾಜಶೇಖರಯ್ಯ, ಕಲ್ಮಂಗಿ ಅಮರೇಗೌಡ, ಎನ್.ರಾಮನಗೌಡ, ರಾಮಣ್ಣ ನಾಯಕ, ಜೆ. ರಾಯಪ್ಪ, ಮಾನ್ವಿಯ ನ್ಯಾಯವಾದಿಗಳಾದ ವೀರನಗೌಡ, ಜಯಶ್ರೀ ಮಾತನಾಡಿ, ಸೋಮಶೇಖರ ಅವರ ಸರಳತನ, ಕಾರ್ಯತತ್ಪರತೆ, ತಾಳ್ಮೆಯನ್ನು ಕೊಂಡಾಡಿದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಭೀಮನಗೌಡ, ಕಾರ್ಯದರ್ಶಿ ಖಾಜಿಮಲಿಕ್ ಅಹ್ಮದ್, ಖಜಾಂಚಿ ಚನ್ನಪ್ಪ ಬಂಗಾರಶೆಟ್ಟಿ, ನ್ಯಾ.ಸೋಮಶೇಖರರಿಗೆ ಆತ್ಮೀಯವಾಗಿ ಸನ್ಮಾನಿಸಿದರು. ಅಂತೆಯೇ ಮಾನ್ವಿ ನ್ಯಾಯವಾದಿಗಳ ಸಂಘದಿಂದ ಸನ್ಮಾನಿಸಲಾಯಿತು. ನ್ಯಾಯವಾದಿಗಳಾದ ವಿ.ಎ.ಪಾಟೀಲ್, ಎಂ.ಕಾಳಿಂಗಪ್ಪ, ಆರ್. ಮಲ್ಲಯ್ಯ, ಟಿ.ರಾಜಶೇಖರಯ್ಯ, ಅಬ್ದುಲಗನಿಸಾಬ, ಹೆಚ್.ಪಂಪಾಪತಿ, ಕೆ.ವೀರನಗೌಡ, ಎಂ.ಅಮರೇಗೌಡ, ಎನ್.ರಾಮನಗೌಡ, ವಿ.ಬಿ.ರಡ್ಡಿ ಮತ್ತಿತರರು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಎನ್. ಕೋಟೇಶ್ವರರಾವ್, ವಿರುಪಾಕ್ಷಪ್ಪ ಗದ್ರಟಗಿ, ಎಸ್.ವಿ.ಪಾಟೀಲ್, ಮಲ್ಲಿಕಾರ್ಜುನ ಮೈಲಾಪುರ, ಜಿ.ವಿ.ಜೋಶಿ, ಕೆ.ಶರಣಬಸವ, ವಿ.ಕೆ.ಹಿರೇಮಠ, ಪ್ರಹ್ಲಾದ ಗುಡಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.