'ಸಮಾಜಕ್ಕೆ ಬಸವಣ್ಣ ಕೊಡುಗೆ ಅಪಾರ'
ಚಿತ್ತಾಪುರ: 12ನೇ ಶತಮಾನದಲ್ಲಿ ಜಾತಿರಹಿತ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕುವಲ್ಲಿ ಬಸವಣ್ಣರ ಪಾತ್ರ ಹಿರಿದಾಗಿದೆ. ಅವರ ವಚನಗಳಲ್ಲಿ ಸಾಮಾಜಿಕ ಕಳಕಳಿ ಎದ್ದು ಕಾಣುತ್ತದೆ. ಅವು ಅಂದು-ಇಂದು-ಮುಂದು ಪ್ರಸ್ತುತವಾಗಿವೆ ಎಂದು ಸೇಡಂನ ವಿಶ್ವಗಂಗಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಂಕರ ಬಿರಾದಾರ ಹೇಳಿದರು.
ಚಿತ್ತಾಪುರ ತಾಲೂಕಿನ ಮಾಡಬೂಳ ಗ್ರಾಮದಲ್ಲಿ ಬಸವದಳ ಸಮಿತಿ ವತಿಯಿಂದ ಹಮ್ಮಿಕೊಂಡ ಬಸವ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಾಧು, ಶರಣ, ಸಂತರು ಯಾವುದೇ ಒಂದು ಜಾತಿಗೆ ಸೀಮಿತರಾದವರಲ್ಲ. ಸರ್ವೆ ಜನ ಸುಖಿನೋಭವಂತು ಎನ್ನುವ ತತ್ವಾದರ್ಶದ ಸಂದೇಶ ಸಾರಿದವರು ಅವರು. ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನ ಸಾರ್ಥಕ ಎಂದು ಹೇಳಿದರು.
ಸಿದ್ಧಾಂತದ ಮೇಲೆ ಜೀವನ: ಬಸವ ಧ್ವಜಾರೋಹಣ ನೆರವೇರಿಸಿ, ದಿವ್ಯ ಸಾನ್ನಿಧ್ಯ ವಹಿಸಿದ ಮುಗುಳನಾಗಾಂವದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಆಶಿರ್ವಚನ ನೀಡಿ, ಮಾನವ ಜನ್ಮಕ್ಕಿಂತ ಮಾನವೀಯತೆ ದೊಡ್ಡದು, ಧರ್ಮಕ್ಕಿಂತ ದಯೆ ದೊಡ್ಡದು, ಕೈಲಾಸಕ್ಕಿಂತ ಕಾಯಕ ದೊಡ್ಡದು ಎನ್ನುವ ಸಿದ್ಧಾಂತ ಶರಣರದು. ಆ ಒಂದು ಸಿದ್ಧಾಂತದ ತಳಹದಿಯ ಮೇಲೆ ನಮ್ಮ ಜೀವನ ಸಾಗಬೇಕು ಎಂದರು.
ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ, ಸಂಗೀತ ಕಲಾವಿದ ಗುರುಶಾಂತಯ್ಯ ಭೂಸನೂರ, ಎಎಸ್ಐ ಸಿಂಗೆ, ನಾಟಕಕಾರ ಸಿದ್ಧಲಿಂಗಯ್ಯ ಸ್ವಾಮಿ ಮಲಕೂಡ, ಗ್ರಾಪಂ ಅಧ್ಯಕ್ಷ ಹಮೀದ್ ಪಟೇಲ್, ಮಲ್ಲಣಗೌಡ ಪಾಟೀಲ್ ಸಿದ್ಧರಾಮ ಮಾಲಿಪಾಟೀಲ್, ನರಸಯ್ಯ ಗುತ್ತೇದಾರ, ರಮೇಶ ಪಾಟೀಲ್, ಮಹಾಂತಯ್ಯ ಸ್ವಾಮಿ, ಸರಶ್ಚಂದ್ರ ಹಳ್ಳದ, ಮಲಕಣ್ಣ ಹಳ್ಳದ, ತಿಪ್ಪಣ್ಣ ತಳವಾರ, ಸಂತೋಷ ಹಿರೇಮನಿ, ಭೀಮರಾಯ ಮಾವನೂರ, ಗುಂಡಪ್ಪ ಸುಗೂರ, ಶಾಂತಗೌಡ ಪಾಟೀಲ್, ಮಹೇಶರೆಡ್ಡಿ, ಬಸವರಾಜ ಹಳ್ಳದ, ಸುನೀಲ್ ಪಾಟೀಲ್, ರಮೇಶ ತಳವಾರ, ಆನಂದ ಪಾಟೀಲ್, ವಿರೇಶ, ಭೀಮಾಶಂಕರರೆಡ್ಡಿ, ಹಣಮಂತ ಪೂಜಾರಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ನ್ಯಾಯವಾದಿ ಶಿವಶರಣಪ್ಪ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಶರಣಗೌಡ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಶೈಲ್ ಪಾಟೀಲ್ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

