ರಾಯಚೂರು

25ರಂದು ನೂತನ ಸಚಿವರಿಗೆ ಸ್ವಾಗತ

Published On :

ಗುಲ್ಬರ್ಗ: ಕರ್ನಾಟಕ ಸರ್ಕಾರದ ಪೌರಾಡಳಿತ ಸಚಿವರಾಗಿರುವ ಖಮರುಲ್ ಇಸ್ಲಾಂ, ವೈದ್ಯಕೀಯ ಶಿಕ್ಷಣ ರಾಜ್ಯ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಇವರಿಗೆ ಅದ್ದೂರಿ ಸ್ವಾಗತ ನೀಡುವ ಬಗ್ಗೆ ಇಲ್ಲಿನ ಬ್ಲಾಕ್ ಕಾಂಗ್ರೆಸ್ (ಉತ್ತರ ಕ್ಷೇತ್ರ) ಕಾರ್ಯಕರ್ತರು ನಿರ್ಧರಿಸಿದ್ದಾರೆ. ಸಮೀತಿಯ ಅಧ್ಯಕ್ಷ ಅಸ್ಗರ್ ಚುಲಬುಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ವಿಷಯ ಚರ್ಚಿಸಲಾಗಿದೆ ಎಂದು ಕಾರ್ಯದರ್ಶಿ ಅದಿಲ್ ಸುಲೇಮಾನ್ ಹೇಳಿದ್ದಾರೆ.
ನಗರದ ಹುಮನಾಬಾದ್ ಬೇಸ್‌ನಿಂದಲೇ ಮೆರವಣಿಗೆ ಆರಂಭಿಸಲಾಗುತ್ತದೆ. ಮೆರವಣಿಗೆಯಲ್ಲಿ ಜಿಲ್ಲೆಯ ನೂತನ ಸಚಿವರೊಂದಿಗೆ ಕೇಂದ್ರ ಕಾರ್ಮಿಕ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಯಾದಗಿರಿ ಜಿಲ್ಲೆಯ ಗುರುಮಠಕಲ್ ಶಾಸಕ, ಸಚಿವ ಬಾಬೂರಾವ್ ಚಿಂಚನ್ಸೂರ್ ಪಾಲ್ಗೊಳ್ಳುತ್ತಿದ್ದಾರೆ. ಅಂದೇ ಸಂಜೆ ಸುಪರ್ ಮಾರ್ಕೆಟ್‌ನಲ್ಲಿ ಬಹಿರಂಗ ಸಭೆಯನ್ನೂ ಆಯೋಜಿಸಲಾಗಿದೆ. ಈ ಸಭೆಯಲ್ಲಿ ನೂತನ ಸಚಿವರೊಂದಿಗೆ ಸಂಸದ ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಭಾಗವಹಿಸುತ್ತಿದ್ದಾರೆ.
ಬ್ಲಾಕ್ ಕಾಂಗ್ರೆಸ್ (ಉತ್ತರ) ಸಭೆಯಲ್ಲಿ ಕಾರ್ಯಕರ್ತರಾದ ಭೀಮರೆಡ್ಡಿ ಪಾಟೀಲ್, ಬಾಬೂ ಒಂಟಿ, ವಿಜಯಕುಮಾರ್, ಸೈಯ್ಯದ್ ಅಹ್ಮದ್, ಅಲಿ ಖಾನ್, ಹಮೀದ್ ನಿಸ್ಸಾರ್, ಮಲ್ಲಿಕಾರ್ಜು ಟೆಂಗಳಿ, ರಾಜು ಕಪನೂರ್, ಶರಣು ಮೋದಿ, ಯಲ್ಲಪ್ಪ ನಾಯ್ಕೋಡಿ, ಮಜರ್ ಖಾನ್, ಇಕ್ಬಲ್‌ಶಿರ್ನಿ ಫಿರ್ದೋಸ್, ಮೊಹ್ಮದ್ ಜಾವೆದ್ ಮೊದಲಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.