ರಾಯಚೂರು

ಕನ್ನಡ ಭವನ ಅಪೂರ್ಣ: ಶಾಸಕ ಅಸಮಾಧಾನ

Published On :

ರಾಯಚೂರು: ನಗರದ ರಂಗಮಂದಿರ ಹಿಂಭಾಗದಲ್ಲಿರುವ ಅಪೂರ್ಣಗೊಂಡಿರುವ ಕನ್ನಡ ಭವನ ಕಟ್ಟಡವನ್ನು ನಗರ ಕ್ಷೇತ್ರದ ಶಾಸಕ ಡಾ.ಶಿವರಾಜ್ ಪಾಟೀಲ್ ಗುರುವಾರ ಪರಿಶೀಲಿಸಿದರು. ಅರ್ಧ ನಿರ್ಮಾಣಗೊಂಡ ಕಟ್ಟಡವನ್ನು ವೀಕ್ಷಿಸಿದ ಅವರು ಕಟ್ಟಡದ ದುಸ್ಥಿತಿಗೆ ಬೇಸರ ವ್ಯಕ್ತಪಡಿಸಿ, ಕಟ್ಟಡ ಬಹುತೇಕ ಪೂರ್ಣಗೊಂಡಿದ್ದು ಸಣ್ಣಪುಟ್ಟ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಪೂರಕ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಮಹಾಂತೇಶ್ ಮಸ್ಕಿ, ತಾಲೂಕು ಕಸಾಪ ಅಧ್ಯಕ್ಷ ಚಿದಾನಂದ ಸಾಲಿ, ಪ್ರಮುಖರಾದ ಭೀಮನಗೌಡ ಇಟಗಿ, ವಿ.ಎನ್.ಅಕ್ಕಿ, ರಾಮಕೃಷ್ಣ, ಸೇರಿದಂತೆ ಅನೇಕರಿದ್ದರು.
ಸಂಸ್ಥೆಗಳಿಂದ ಅರ್ಜಿ ಆಹ್ವಾನ
ರಾಯಚೂರು: ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ವಿವಿಧ ತಾಲೂಕುಗಳ ಮಕ್ಕಳಿಗೆ ವಸತಿ ಸಹಿತ ವಿಶೇಷ ತರಬೇತಿ ನೀಡಲು ಸಂಘ ಸಂಸ್ಥೆಗಳಿಂದ ಅರ್ಜಿ ಕರೆಯಲಾಗಿದೆ. ಶಾಲೆಯಿಂದ ಹೊರಗುಳಿದ ಲಿಂಗಸ್ಗೂರು ತಾಲೂಕಿನ 100, ಮಾನ್ವಿಯ-37, ಸಿಂಧನೂರಿನ-50 ಹೀಗೆ ಒಟ್ಟು 187ಮಕ್ಕಳಿಗಾಗಿ 2013-14ನೇ ಸಾಲಿಗೆ 6 ತಿಂಗಳ ವಸತಿ ಸಹಿತ ವಿಶೇಷ ತರಬೇತಿ ನೀಡಲು ಆಸಕ್ತ ಸಂಘ ಸಂಸ್ಥೆಗಳು(ಎನ್ ಜಿಓ) ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಸರ್ಕಾರೇತರ ಸಂಘ ಸಂಸ್ಥೆಗಳು ಅರ್ಜಿಯನ್ನು ಡಿಡಿಠ//ಡಡಛ್ಞಛ್ಠಟಿಛಡಿಛ್ಞಛ.್ಜ್ಟಢ.್ಝಟಿ ಈ ವೆಬ್ಸೈಟ್ನಿಂದ ಪಡೆದು ಭರ್ತಿ ಮಾಡಿ ಡಿಡಿಪಿಐ ಕಚೇರಿಗೆ ಜೂ. 3ರೊಳಗೆ ಸಲ್ಲಿಸುವಂತೆ ಸರ್ವ ಶಿಕ್ಷಣ ಅಭಿಯಾನದ ಉಪನಿರ್ದೇಶಕರು ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.