ರಾಯಚೂರು

ಬ್ಯಾಂಕ್ಗಳು ಗ್ರಾಹಕ ಸ್ನೇಹಿ: ಕುಮಾರಯ್ಯ

Published On :

ಕ.ಪ್ರ. ವಾರ್ತೆ   ಸಿಂಧನೂರು   ಮೇ 23
ಸಿಂಡಿಕೇಟ್ ಬ್ಯಾಂಕ್ 45 ವರ್ಷಗಳಿಂದ ಗ್ರಾಹಕರ ಬೇಕು ಬೇಡಗಳಿಗನುಣುವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಸಿಂಧನೂರು ಶಾಖೆ ಆರು ಜಿಲ್ಲೆಗಳಲ್ಲಿ 'ಸ್ಟಾರ್ ಬ್ಯಾಂಕ್' ಪ್ರಶಸ್ತಿ ಪಡೆದುಕೊಂಡಿದೆ. ಈ ಶಾಖೆ ಗ್ರಾಹಕರ ಸ್ನೇಹಿಯಾಗಿದೆ ಎಂದು ಬ್ಯಾಂಕಿನ ಮುಖ್ಯಪ್ರಬಂಧಕ ಕುಮಾರಯ್ಯ ಹೇಳಿದರು.
ಅವರು ಗುರುವಾರ ಶಾಖೆಯಲ್ಲಿ ಏರ್ಪಡಿಸಿದ್ದ 'ಗ್ರಾಹಕರ ಸಮಾವೇಶ'ದಲ್ಲಿ ಪಾಲ್ಗೊಂಡು ಮಾತನಾಡಿದರು. ಮಂಗಳೂರು ಮೂಲದ ಪೈ ಕುಟುಂಬದವರು ಕೇವಲ ರು. 7 ಸಾವಿರ ಬಂಡವಾಳದೊಂದಿಗೆ ಆರಂಭಿಸಿದ ಸಿಂಡಿಕೇಟ್ ಬ್ಯಾಂಕ್ ಈಗ ದೇಶಾದ್ಯಂತ ಸಾವಿರಾರು ಶಾಖೆಗಳನ್ನು ಹೊಂದಿದೆ. ಮೂರೂವರೆ ಲಕ್ಷ ಕೋಟಿಗೂ ಅಧಿಕ ವ್ಯವಹಾರ ನಡೆಸುತ್ತಲಿದೆ. ಕಳೆದ ವರ್ಷ ಬ್ಯಾಂಕ್ ರು. 105 ಕೋಟಿ ವ್ಯವಹಾರ ಮಾಡಿತ್ತು. ಈ ಬಾರಿ ರು. 115 ಕೋಟಿ ಗುರಿ ಮುಟ್ಟಲಾಗಿದೆ. ಕೃಷಿಗೆ ರು. 62 ಕೋಟಿ, ಆದ್ಯತಾ ವಲಯಕ್ಕೆ ರು. 79 ಕೋಟಿ  ಸಾಲಗಳನ್ನು ನೀಡಲಾಗಿದೆ. 33 ಕೋಟಿ ಠೇವಣಿ ಸಂಗ್ರಹಿಸಲಾಗಿದೆ. ಕಳೆದ ವರ್ಷ ಬ್ಯಾಂಕ್ ರು. 6.85 ಕೋಟಿ ಲಾಭ ಹೊಂದಿತ್ತು. ಈ ವರ್ಷ 8 ಕೋಟಿ ಲಾಭ ಹೊಂದಿದೆ ಎಂದು ವಿವರಿಸಿದರು.
ಕಾರ್ಯ ಚಟುವಟಿಕೆಗಳು: ಬ್ಯಾಂಕಿನ ಕಾನೂನು ಸಲಹೆಗಾರರಾದ ವಿರೂಪಾಕ್ಷಪ್ಪ ಗದ್ರಟಗಿ, ಬ್ಯಾಂಕಿನ ಎಂಜಿನಿಯರ್ ಬಸವರಾಜ ಅಲಬನೂರ ಬ್ಯಾಂಕಿನ ಕಾರ್ಯ ಚಟುವಟಿಕೆಗಳ ಕುರಿತು ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ  ಬ್ಯಾಂಕಿನ ಹಿರಿಯ ಕಾನೂನು ಸಲಹೆಗಾರ ಎನ್.ಕೋಟೇಶ್ವರರಾವ್ ಮಾತನಾಡಿ, ಬ್ಯಾಂಕ್ ಗ್ರಾಮೀಣ ಭಾಗದಲ್ಲಿ ವಿಶೇಷ ಆಸಕ್ತಿಯಿಂದ ಕೆಲಸ ಮಾಡುತ್ತಿದೆ. ಅದರಲ್ಲೂ ಕುಮಾರಯ್ಯ ಬ್ಯಾಂಕಿಗೆ ಬಂದ ಮೇಲೆ ಸ್ತ್ರೀಶಕ್ತಿ ಗುಂಪುಗಳಿಗೆ ಆದ್ಯತೆ ನೀಡಿ ಗುಂಪುಗಳ ಬೆಳವಣಿಗೆಗೆ ಆಸಕ್ತಿ ವಹಿಸಿದ್ದಾರೆ.  ಸ್ತ್ರೀಶಕ್ತಿ ಗುಂಪುಗಳ ಅಭಿವೃದ್ಧಿಗೆ ಕಳೆದ ಮೂರು ವರ್ಷಗಳಿಂದ ಕೃಷ್ಣಮೋಹನ, ಶ್ರೀನಿವಾಸ, ಕೃಷ್ಣ ಬ್ಯಾಂಕ್ನೊಂದಿಗೆ ಸಹಕರಿಸುತ್ತಿದ್ದಾರೆ. ಬ್ಯಾಂಕುಗಳಿಂದ ಪಡೆದ ಸಾಲವನ್ನು ಸದುಪಯೋಗಪಡಿಸಿಕೊಂಡು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಬೇಕೆಂದು ಸಲಹೆ ನೀಡಿದರು.
ಸ್ತ್ರೀಶಕ್ತಿ ಗುಂಪುಗಳ ಪರವಾಗಿ ಕೃಷ್ಣ, ಶ್ರೀನಿವಾಸ ಮಾತನಾಡಿದರು. ತೇಜಸ್ವಿನಿ ಪ್ರಾರ್ಥಿಸಿದರು. ಅಭಿವೃದ್ಧಿ ಅಧಿಕಾರಿ ಬಸನಗೌಡ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗ್ರಾಹಕರಾದ ನಾಗಾನಂದ ವರ್ಣೇಕರ್ ಮತ್ತಿತರರ ಸ್ತ್ರೀಶಕ್ತಿ ಗುಂಪುಗಳ ಸದಸ್ಯರು ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.