ರಾಯಚೂರು

ಮುಳ್ಳೂರಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ

Published On :

ಸಿಂಧನೂರು: ಜಿಲ್ಲಾ ಮಲೇರಿಯಾ ರೋಗ ನಿಯಂತ್ರಣ ಅಧಿಕಾರಿಗಳ ಕಚೇರಿ, ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ತುರ್ವಿಹಾಳ ಇವರ ಆಶ್ರಯದಲ್ಲಿ ತಾಲೂಕಿನ ಮುಳ್ಳೂರ ಗ್ರಾಮದಲ್ಲಿ ಜರುಗಿದ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲೂಕಾ ಆರೋಗ್ಯಾಧಿಕಾರಿ ಡಾ. ಸೈಯದ್ ಹಸನ್ ಹುಸೇನಿ, ಯಾವುದೇ ಜ್ವರವಿರಲಿ ಆದಷ್ಟು ಶೀಘ್ರವಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದರಿಂದ ಮಲೇರಿಯ ರೋಗ ಖಚಿತಪಟ್ಟಲ್ಲಿ ಅಗತ್ಯ ಚಿಕಿತ್ಸೆ ಪಡೆಯಬೇಕು. ಇದು ರೋಗ ಗುಣಪಡಿಸಲು ಸಹಾಯಕವಾಗುವುದು. ಮಲೇರಿಯಾ ಜ್ವರವು ಅನಾಫಿಲಿಸ್ ಹೆಣ್ಣು ಸೊಳ್ಳೆಯು ಮನುಷ್ಯನಿಗೆ ಕಚ್ಚಿದ 14 ರಿಂದ 21 ದಿನಗಳೊಳಗೆ ಬರುತ್ತದೆ. ಇಂತಹ ಒಬ್ಬ ಮಲೇರಿಯಾ ರೋಗಿಯಿಂದ ಅನೇಕರಿಗೆ ಮಲೇರಿಯಾ ಹರಡುವ ಸಂಭವ ಇದೆ. ಯಾರಿಗಾದರೂ ಅತಿಯಾದ ಮೈ ಚಳಿ, ಮೈ ಬಿಸಿ, ಅತಿಯಾದ ಬೆವರುವಿಕೆ ಕಂಡು ಬಂದಲ್ಲಿ ಅದು ಮಲೇರಿಯಾದ ಲಕ್ಷಣ ವಾಗಿರುತ್ತದೆ ಎಂದರು.
ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ ಮಾತನಾಡಿ, ಮಲೇರಿಯಾ ಎಂದು ಖಚಿತ ಪಟ್ಟಲ್ಲಿ 5 ದಿನಗಳ ಕಾಲ ಕ್ಲೋರುಪಿನ್ ಮತ್ತು ಪ್ರೈಮಾಕ್ವಿನ್ ಮಾತ್ರೆಗಳನ್ನು ಊಟ ಮಾಡಿದ ನಂತರ ನುಂಗಬೇಕು. 6ನೇ ದಿವಸ ಪುನಃ ರಕ್ತ ಪರೀಕ್ಷೆಯನ್ನು ಮಾಡಿಸಿಕೊಂಡು ಮಲೇರಿಯಾ ರೋಗ ಇಲ್ಲದಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಮಲೇರಿಯಾ ಗುಣಪಡಿಸುವ ಮಾತ್ರೆಗಳು ಎಲ್ಲಾ ಸರ್ಕಾರಿ ಆಸ್ಪತ್ರೆ ಹಾಗೂ ಆರೋಗ್ಯ ಸಹಾಯಕರಲ್ಲಿ ಉಚಿತವಾಗಿ ದೊರುಕುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಲೇರಿಯಾ ತಾಂತ್ರಿಕ ಮೇಲ್ವಿಚಾರಕ ಎಫ್.ಎ.ಹಣಗಿ, ಗ್ರಾಪಂ ಸದಸ್ಯರಾದ ಮೌಲಪ್ಪ, ಮಲಿಯಪ್ಪ ಎಸ್ಡಿಎಮ್ಸಿ ಅಧ್ಯಕ್ಷರಾದ ಹನುಮಂತಪ್ಪ ಮುಖ್ಯ ಗುರುಗಳಾದ ಲಕ್ಷ್ಮಣ ಪತ್ತಾರ, ಆರೋಗ್ಯ ಕಾರ್ಯಕರ್ತೆ ಶಾಂತಾ, ಅಂಗನವಾಡಿ ಕಾರ್ಯಕರ್ತೆ ಸರಸ್ವತಿ ಮುಂತಾದವರು ಹಾಜರಿದ್ದರು. ಹನುಮಂತರಾಯ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.