ಒಪೆಕ್ ಆಸ್ಪತ್ರೆ ಮುಚ್ಚಿ ವರ್ಷ: ಸಿಬ್ಬಂದಿಯಿಂದ ಮಹತ್ವದ ಸಭೆ
ಕನ್ನಡಪ್ರಭ ವಾರ್ತೆ, ರಾಯಚೂರು, ಮೇ 24
ನಗರದ ರಾಜೀವಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ(ಒಪೆಕ್ ಆಸ್ಪತ್ರೆ)ಯಲ್ಲಿ ಶುಕ್ರವಾರ ಆಸ್ಪತ್ರೆಯಲ್ಲಿ ನೌಕರರಾಗಿ ಸೇವೆ ಸಲ್ಲಿಸಿದ್ದ ಸಿಬ್ಬಂದಿಯ ಸಭೆ ನಡೆಸಲಾಯಿತು.
ಹೈದರಾಬಾದ್ನ ಅಪೋಲೋ ಸಂಸ್ಥೆಯಿಂದ ರಾಜ್ಯ ಸರ್ಕಾರ ವಹಿಸಿಕೊಂಡು ನಂತರದಲ್ಲಿ ಆಸ್ಪತ್ರೆ ಮುಚ್ಚಿ ಒಂದು ವರ್ಷ ಕಳೆದ ಸಂದರ್ಭದಲ್ಲಿ ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು.
ಸಂಘದ ಗೌರವಾಧ್ಯಕ್ಷ ಆರ್. ಮಾನಸಯ್ಯ ಅವರ ನೇತೃತ್ವದಲ್ಲಿ ನಡೆದ ಮಹತ್ವದ ಸಾಮಾನ್ಯ ಸರ್ವಸದಸ್ಯರ ಸಭೆಯಲ್ಲಿ, ಹೊರಗುತ್ತಿಗೆ ನೀತಿ ಪಾಲಿಸಿಕೊಂಡು ಹೋಗುತ್ತಿರುವ ಸರ್ಕಾರಗಳ ದಲ್ಲಾಳಿ ನಿಲುವನ್ನು ಖಂಡಿಸಲಾಯಿತು. ಒಪೆಕ್ ಆಸ್ಪತ್ರೆ ಮುಚ್ಚಿದ್ದೇ ಖಾಸಗಿ ಆಸ್ಪತ್ರೆಗಳ ಲಾಬ್ಬಿಯಿಂದ ಹಾಗೂ ಸರ್ಕಾರದ ಹೊರಗುತ್ತಿಗೆ ಧೋರಣೆಯಿಂದ ಆಗಿರುವ ಹಾನಿಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಮಾತುಕತೆ: ಒಪೆಕ್ ಆಸ್ಪತ್ರೆ ಪುನಾರಂಭಿಸಬೇಕು. ಕಳೆದ 11 ವರ್ಷಗಳಿಂದ ಆಸ್ಪತ್ರೆಯಲ್ಲಿ ದುಡಿದ 286 ಜನ ಸಿಬ್ಬಂದಿಯನ್ನು ಪುನಾ ನೇಮಿಸಿಕೊಂಡು ಸೇವೆಗೆ ಅವಕಾಶ ಕಲ್ಪಿಸಬೇಕು ಎಂದು ಮೂರು ತಿಂಗಳು ನಡೆಸಿದ ಹೋರಾಟದ ಫಲವಾಗಿ ಬಿಜೆಪಿ ಸರ್ಕಾರದಲ್ಲಿನ ಸಚಿವ ರಾಮದಾಸ್ ಮತ್ತು ಹೋರಾಟ ಸಮಿತಿಯ ಮುಖಂಡರ ನಡುವೆ ಮಾತುಕತೆ ನಡೆದಿತ್ತು.
286 ನೌಕರರನ್ನು ಪುನಾ ಕೆಲಸಕ್ಕೆ ತೆಗೆದುಕೊಂಡು ಆಸ್ಪತ್ರೆ ಆರಂಭಿಸಲು ಒಪ್ಪಿಗೆ ಸೂಚಿಸಲಾಗಿತ್ತು. ಅದಕ್ಕಾಗಿ 40ಕೋಟಿ ರು.ಮಂಜೂರಿ ಮಾಡುವ ಆಗಿನ ಸರ್ಕಾರದ ಆದೇಶ ಕೂಡಾ ಆಗಿತ್ತು. ಆದರೆ ಇದುವರೆಗೆ ಈ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂಬ ಆರೋಪ ಸಭೆಯಲ್ಲಿ ಕೇಳಿಬಂದಿತು.
ರಸ್ತೆ ತಡೆಗೆ ನಿರ್ಧಾರ: ಈ ಹಿನ್ನೆಲೆಯಲ್ಲಿ ನೂತನ ಸರ್ಕಾರದ ಸಂಭ್ರಮಾಚರಣೆ ಸದ್ಯಕ್ಕೆ ಕೊನೆಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಆದ್ದರಿಂದ ಸರ್ಕಾರದ ವಿರುದ್ಧ ಕೂಡಲೇ ನ್ಯಾಯಾಲಯದ ಮೆಟ್ಟಿಲು ತುಳಿಯಬೇಕು. ಒಂದು ವಾರದ ಗಡುವಿನ ನಂತರ ಜೂ.1ರಂದು ಒಪೆಕ್ ಆಸ್ಪತ್ರೆ ಮುಂಭಾಗದ ರಾಜ್ಯ ಹೆದ್ದಾರಿಯ ಮೇಲೆ ಸಂಪೂರ್ಣ ರಸ್ತೆ ತಡೆ ಚಳವಳಿ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಕಾರ್ಮಿಕರ ಈ ಹೋರಾಟಕ್ಕೆ ಎಲ್ಲ ನಾಗರಿಕರು ಅದರಲ್ಲೂ ಪ್ರತಿಯೊಂದು ಜನಪರ ಸಂಘ ಸಂಸ್ಥೆಗಳು ಹಾಗೂ ಹೊರಗುತ್ತಿಗೆ ಅಡಿ ದುಡಿಯುತ್ತಿರುವ ಕಾರ್ಮಿಕರು ಬೆಂಬಲಿಸುವಂತೆ ಮನವಿ ಮಾಡಲು ಸಭೆ ನಿರ್ಧರಿಸಿತು.
ಸಭೆಯಲ್ಲಿ ಸಂಘದ ಅಧ್ಯಕ್ಷ ವಾಜೀದ್ ಅಲಿ, ಮಲ್ಲೇಶ, ಎನ್.ಕುಮಾರ, ಗುರುರಾಜ, ವೀರಭದ್ರ, ನಳಿನಿ, ಸರಳ, ಜ್ಯೋತಿ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

