ರಾಯಚೂರು

ಮಾರುತಿ ದೇವರ ರಥೋತ್ಸವ ವೈಭವ

Published On :

ಕನ್ನಡಪ್ರಭ ವಾರ್ತೆ, ಸಿಂಧನೂರು, ಮೇ 26
ತಾಲೂಕಿನ ಬಳಗಾನೂರಲ್ಲಿ ಸಾವಿರಾರು ಭಕ್ತಾದಿಗಳ ನಡುವೆ ಬಂಧುಶತಪುರೇಶ ಐತಿಹಾಸಿಕ ಪ್ರಸಿದ್ಧಿ ಪಡೆದ ಮಾರುತಿ ದೇವರ ರಥೋತ್ಸವ ಶನಿವಾರ ಸಂಜೆ ವಿಜೃಂಭಣೆಯಿಂದ ಜರುಗಿತು.
ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತರು ಬಾಳಹಣ್ಣು, ಉತ್ತುತ್ತಿ, ಬೆಲ್ಲದಚ್ಚು ಎಸೆಯುವ ಮೂಲಕ ಭಕ್ತಿಭಾವ ಮೆರೆದರು. ತೇರಿನ ಮನೆಯಿಂದ ತೆಳಗಡೆ ಪ್ರದೇಶದ ಚೌಡೇಶ್ವರಿ ದೇವಸ್ಥಾನದವರೆಗೂ ಭಕ್ತರು ರಥವನ್ನು ಎಳೆದು ಸಂಭ್ರಮಿಸಿದರು. ಇದಕ್ಕೂ ಮುನ್ನ ಬೆಳಗ್ಗೆ ಅಭಿಷೇಕ, ನೈವೇದ್ಯ ಸಮರ್ಪಣೆ, ಸುಪ್ರಭಾತ ಮತ್ತಿತರ ವಿಧಿವಿಧಾನಗಳು ದೇವಸ್ಥಾನದ ಅರ್ಚಕರಾದ ವೆಂಕಟೇಶ, ರಂಗನಾಥ, ನಾಗೇಶ ಅವರ ಸಮ್ಮುಖದಲ್ಲಿ ನಡೆದವು.
ಜನಮನ ಸೆಳೆದ ಮೆರವಣಿಗೆ: ರಥೋತ್ಸವ ಸಂದರ್ಭದಲ್ಲಿ ದಾಸಗೀತೆ, ಡೊಳ್ಳು, ಭಾಜಾ ಭಜಂತ್ರಿ, ವಿವಿಧ ವಾದ್ಯಮೇಳಗಳೊಂದಿಗೆ ನಡೆದ ಮೆರವಣಿಗೆ ನೆರೆದ ಜನರನ್ನು ಮನಸೂರೆಗೊಂಡಿತು. ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ದೇವಸ್ಥಾನ ಸಮತಿ ಅಧ್ಯಕ್ಷ ಬಿ.ಟಿ. ಕುಮಾರಸ್ವಾಮಿ, ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್, ಎಪಿಎಂಸಿ ನಿರ್ದೇಶಕ ಶರಣೇಗೌಡ ಗಿಣಿವಾರ, ಬಸವಂತರಾಯ ಕುರಿ, ಶೇಖರಪ್ಪ ಮೇಟಿ, ಡಾ. ಬಿ.ಎಚ್. ದಿವಟರ್, ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ ಗುತ್ತೇದಾರ, ಉಪಾಧ್ಯಕ್ಷ ಎಚ್.ಮಹಾಬಳೇಶ್ವರ, ತಾಪಂ ಸದಸ್ಯೆ ಬಾಲಮ್ಮ ನಾಗಬುಸ್ಸಪ್ಪ, ಮುಖಂಡರಾದ ವಿರುಪಣ್ಣ ಗುತ್ತೇದಾರ, ಸಿದ್ದನಗೌಡ ಮಾಲಿ ಪಾಟೀಲ್, ವೆಂಕನಗೌಡ ಗದ್ದಿ, ಪಂಪನಗೌಡ ಮಾಲಿ ಪಾಟೀಲ್, ಜಿ.ವಿ. ಜೋಷಿ ವಕೀಲರು, ಗ್ರಾಪಂ ಸದಸ್ಯರಾದ ನಾಗರಾಜ ಕೊಂಡರಡ್ಡಿ, ಹನುಮೇಶ ಹೂಗಾರ, ಗಣೇಶ ಡಿಶ್, ವಿಎಸ್‌ಎಸ್‌ಎನ್ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಮಂಜುನಾಥ ಗದ್ದಿಗೌಡ್ರು, ಬುಳ್ಳನಗೌಡ, ಗುರುರಾಝ ಜೋಷಿ, ರಾಜಶೇಖರ ಶಂಕರಬಂಡಿ, ಅನೇಕ ಮುಖಂಡರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಸುತ್ತಮುತ್ತಲಿನ ಉಟಕನೂರು, ಉದ್ಬಾಳ, ಬೆಳಗಿನೂರು, ಉಟಕನೂರು, ಗೌಡನಬಾವಿ ಸೇರಿದಂತೆ ಇನ್ನಿತರ ಗ್ರಾಮಗಳ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ಜಾತ್ರೆಯ ನಿಮಿತ್ಯ ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್‌ಐ ಸುಶೀತ್ ಕುಮಾರ ಪಾಟೀಲ್ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.