ರಾಯಚೂರು

'ಅಭಿವೃದ್ಧಿ ದಾಖಲೆಗೆ ಸೀಮಿತ ಬೇಡ'

Published On :

ದೇವದುರ್ಗ: ತಾಲೂಕಿನ ಅಭಿವೃದ್ಧಿ ಕೇವಲ ದಾಖಲೆಗಳಿಗೆ ಸೀಮಿತವಾಗಬಾರದೆಂದು ಜಿಪಂ ಮಾಜಿ ಸದಸ್ಯ ಎ. ರಾಜಶೇಖರ ನಾಯಕ ಕರೆ ನೀಡಿದರು.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಯಚೂರು ಹಾಗೂ ಎಸ್‌ಎಲ್‌ವಿ ಇನ್ಫೋಟೆಕ್ ಟ್ರೇನಿಂಗ್ ಇನ್‌ಸ್ಟಿಟ್ಯೂಟ್ ದೇವದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮಹಿಳಾ ತರಬೇತಿ ಯೋಜನೆಯಡಿ ಗಣಕ ಯಂತ್ರ ತರಬೇತಿ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನ ಗ್ರಾಮೀಣ ಭಾಗದಲ್ಲಿ ವಿದ್ಯಾವಂತ ಯುವತಿಯರು ಉದ್ಯೋಗವಿಲ್ಲದೇ ತೊಂದರೆಯಲ್ಲಿದ್ದು ಅವರು ಗಣಕಯಂತ್ರ ತರಬೇತಿ ಪಡೆಯುವುದರಿಂದ ಸ್ವಯಂ ಉದ್ಯೋಗ ಕೈಗೊಳ್ಳಬಹುದು. ತರಬೇತಿ ಪಡೆದ ಯುವತಿಯರಿಗೆ ಉದ್ಯೋಗಿನಿ ಯೋಜನೆ ಅಡಿ ಸರ್ಕಾರದ ಸಾಲ ಸೌಲಭ್ಯ ದೊರಕಿಸಲಾಗುತ್ತದೆ ಎಂದು  ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿ ಗೋಪಾಲ ನಾಯಕ್, ಸಕ್ಕೂಬಾಯಿ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ರಂಗಪ್ಪ ಗೋಸಲ, ಶಿವಾನಂದ ಮೇಟಿ ವಕೀಲರು, ಕಾಂಗ್ರೆಸ್ ಯುವ ಮುಖಂಡ ಮಹ್ಮದ ಫಾರೂಖ್, ಚನ್ನಯ್ಯ ಸ್ವಾಮಿ ಹಿರೇಮಠ ಅರಕೇರಾ, ಗೋಗಿ ನಾಗರಾಜ, ಬಾಬಾ ಸಿಕ್ಕಲಗಾರ, ಸಂಸ್ಥೆಯ ಮುಖ್ಯಸ್ಥ ಗೋಪಿ ಮೇಟಿ, ಗೋಸಲ ಭೀಮಣ್ಣ ನಾಯಕ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.