ರಾಯಚೂರು

'ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ'

Published On :

ದೇವದುರ್ಗ: ತಾಲೂಕಿನಲ್ಲಿ ಕುಡಿಯುವ ನೀರಿನ ತೊಂದರೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಹಸೀಲ್ದಾರ್ ತುಕರಾಮ್ ಕಲ್ಯಾಣ್ಕರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ಎ. ವೆಂಕಟೇಶ ನಾಯಕ ಅವರ ಸೂಚನೆ ಮೇರೆಗೆ ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ, ತಾಲೂಕಿನಲ್ಲಿ ಅರಕೇರಾ, ಜಾಲಹಳ್ಳಿ ಹೋಬಳಿಗಳ ಗ್ರಾಮಗಳಿಗೆ ಈಗಾಗಲೇ ಖುದ್ದಾಗಿ ಭೇಟಿ ನೀಡಿ ಜನರು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದಿದ್ದಾಗಿ ತಿಳಿಸಿದರು.
ಬಂಡೆಗುಡ್ಡ ಗ್ರಾಮ ಸೇರಿ ನಾಲ್ಕು ತಾಂಡಾಗಳಲ್ಲಿ ಭೂಮಾಲೀಕರ ಹೊಲದಲ್ಲಿದ್ದ ಬೋರವೆಲ್ನಿಂದ ಎರಡು ತಿಂಗಳ ಮಟ್ಟಿಗೆ ದಾನ ರೂಪವಾಗಿ ನೀರು ಪಡೆದು ಸುಮಾರು 600 ಮೀಟರ್ವರೆಗೆ ಕೊಳವೆಮಾರ್ಗ  ಅಳವಡಿಸಿ ನೀರು ಒದಗಿಸಲಾಗುತ್ತಿದೆ ಎಂದು ಹೇಳಿದರು.
ಅದೇ ರೀತಿ ಸಮುದ್ರ ತಾಂಡಾದ ಹತ್ತಿರ ಅಂತರ್ಜಲ ಲಭ್ಯವಿದ್ದು, ಹೊಸದಾಗಿ ಕೊಳವೆಬಾವಿ ಕೊರೆಯಿಸಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಭೂಮನಗುಂಡ, ಜಾಲಹಳ್ಳಿ ಹೋಬಳಿಯಲ್ಲಿ ಕುಡಿಯುವ ನೀರಿನ ಅವಶ್ಯಕತೆ ಕಂಡುಬಂದಿದ್ದು, ತಾತ್ಕಾಲಿಕವಾಗಿ ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಈಗಾಗಲೇ ಜಿಪಂ, ತಾಪಂ ಹಾಗೂ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸಭೆ ನಡೆಸಿದ್ದು, ನೀರಿನ ಸಮಸ್ಯೆ ಪರಿಹರಿಸುವ ಬಗ್ಗೆ ಸಮಿತಿ ರಚಿಸಲಾಗಿದೆ. ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದರು.

--
ಜೆಸ್ಕಾಂ: ದೂರು ಸಲ್ಲಿಕೆಗೆ ಮಾಹಿತಿ
ರಾಯಚೂರು: ಜೂನ್ ತಿಂಗಳ ಮೊದಲ ವಾರದಲ್ಲಿ ಮುಂಗಾರು ಮಳೆಯು ಆರಂಭವಾಗಲಿದ್ದು, ನಗರದಲ್ಲಿ ಭಾರೀ ಪ್ರಮಾಣದ ಮಳೆ ಮತ್ತು ಗಾಳಿ ಬೀಸುವ ಸಂಭವಿಸಿರುವುದರಿಂದ ವಿದ್ಯುತ್ ಸಂಬಂಧಿ ದೂರುಗಳನ್ನು ನಗರ ವ್ಯಾಪ್ತಿಯಲ್ಲಿ 24 ಗಂಟೆ ಸೇವಾ ಕೇಂದ್ರಕ್ಕೆ ನೀಡಲು ಜೆಸ್ಕಾಂ ಮನವಿ ಮಾಡಿದೆ.
   ವಿದ್ಯುತ್ ಸಮಸ್ಯೆ ಸಂದರ್ಭದಲ್ಲಿ ಗ್ರಾಹಕರು ನಿರಂತರ ಸೇವಾ ಕೇಂದ್ರ ರಾಯಚೂರು- ದೂರವಾಣಿ ಸಂಖ್ಯೆಗಳಾದ 231999, 226386, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್-94495 96769, 1ನೇ ಸೆಕ್ಷನ್ ಆಫೀಸರ್ 94483 95623, 2ನೇ ವಿಭಾಗದ ಸೆಕ್ಷನ್ ಆಫೀಸರ್- 94483 95624, 3ನೇ ವಿಭಾಗದ ಸೆಕ್ಷನ್ ಆಫೀಸರ್-94483 95622, 4ನೇ ವಿಭಾಗದ ಸೆಕ್ಷನ್ ಆಫೀಸರ್- 94808 44230, 5ನೇ ವಿಭಾಗದದ ಸೆಕ್ಷನ್ ಆಫೀಸರ್-94483 95621 ಮತ್ತು 6ನೇ ವಿಭಾಗದ ಸೆಕ್ಷನ್ ಆಫೀಸರ್ ಅವರ ದೂರವಾಣಿ ಸಂಖ್ಯೆ- 94808 45957 ಇಲ್ಲಿಗೆ ಮಾಹಿತಿ ನೀಡಲು ಜೆಸ್ಕಾಂನ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.