ಹೂಳು ತೆರವು ಕಾರ್ಯಾರಂಭ: ನಗರಕ್ಕೆ ಶೀಘ್ರ ನೀರು
ಕನ್ನಡಪ್ರಭ ವಾರ್ತೆ, ರಾಯಚೂರು, ನ.5
ಇಲ್ಲಿನ ನಗರಸಭೆ ಆಡಳಿತವು ಕೊನೆಗೂ ನಗರದ ಜನತೆಗೆ ಕೃಷ್ಣಾ ನದಿಯಿಂದ ಶುದ್ಧ ನೀರೊದಗಿಸಲು ಪೂರಕ ಕ್ರಮ ಕೈಗೊಂಡಿದೆ. ಕೃಷ್ಣಾ ನದಿ ನೀರಿನ ಶುದ್ಧೀಕರಣ ಘಟಕದಲ್ಲಿ ಕಳೆದ ಅನೇಕ ವರ್ಷಗಳಿಂದ ಸೇರಿದ್ದ ಹೂಳು ತೆರವು ಕಾರ್ಯಕ್ಕೆ ಚಾಲನೆ ನೀಡಿದ್ದು, ಬಹುತೇಕ ಕಾರ್ಯ ಮುಕ್ತಾಯ ಹಂತದಲ್ಲಿದೆ. ಈ ಮೂಲಕ ನಗರದ ಜನತೆಗೆ ಶುದ್ಧ ಕುಡಿವ ನೀರು ಪೂರೈಕೆ ಸಾಧ್ಯವಾಗಲಿದೆ.
ಕಳೆದ ಅನೇಕ ವರ್ಷಗಳಿಂದ ನಗರಕ್ಕೆ ಕೃಷ್ಣಾ ಮತ್ತು ತುಂಗಭದ್ರಾ ನದಿಯಿಂದ ನೀರೆತ್ತಿ ಕುಡಿವ ನೀರಿನ ಬಳಕೆಗೆ ಪೂರೈಸಲಾಗುತ್ತದೆ. ಆದರೆ ಹೀಗೆ ಪೂರೈಕೆಯಾಗುತ್ತಿದ್ದ ನೀರು ಈಚಿನ ದಿನಗಳಲ್ಲಿ ಶುದ್ಧೀಕರಣ ಘಟಕದ ಶುದ್ಧಗೊಳ್ಳದೇ ಸರಬರಾಜಾಗುತ್ತಿದೆ ಎಂಬ ಆರೋಪ ವ್ಯಾಪಕವಾಗಿತ್ತು. ಈ ಹಿನ್ನೆಲೆಯಲ್ಲಿ ನಗರಸಭೆಯ ಆಡಳಿತ ಲಕ್ಷಾಂತರ ರು. ವೆಚ್ಚದಲ್ಲಿ ನೀರು ಶುದ್ಧೀಕರಣ ಘಟಕದ ಸ್ವಚ್ಛತೆ ಮತ್ತಿತರೆ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು, ನಗರದ ಜನತೆಗೆ ಶುದ್ಧ ಕುಡಿವ ನೀರೊದಗಿಸುವ ಕಾರ್ಯಕ್ಕೆ ಮುಂದಾಗಿದೆ.
ಹೂಳು ತೆರವಿಗೆ: ನಗರಸಭೆಯ ಆಡಳಿತವು ಕಳೆದ 15 ದಿನಗಳಿಂದ ಕೃಷ್ಣಾ ನೀರು ಸರಬರಾಜು ಯೋಜನೆ ಅಡಿ ನಿರ್ಮಿಸಿದ ನೀರು ಶುದ್ಧೀಕರಣ ಘಟಕದಲ್ಲಿ ಕಳೆದ 8-10 ವರ್ಷಗಳಿಂದ ಸೇರಿಕೊಂಡಿದ್ದ ಹೂಳು ತೆರವಿಗೆ ಮುಂದಾಗಿದೆ. ಇದುವರೆಗೆ ಅಧಿಕಾರದಲ್ಲಿದ್ದವರು ಹೂಳು ತೆರವಿಗೆ ಅನುದಾನ ಎತ್ತಿಟ್ಟಿದ್ದರೂ ಬಳಕೆಗೆ ಮಾತ್ರ ಅಧಿಕಾರಿಗಳು ಆಸಕ್ತಿ ತೋರಿರಲಿಲ್ಲ. ಪರಿಣಾಮ ಅನುದಾನವಿದ್ದರೂ ಜನತೆ ಕಲುಷಿತ ನೀರು ಸೇವಿಸುವಂಥ ಅನಿವಾರ್ಯತೆ ಸಿಲುಕಿದ್ದರು.
15ರಿಂದ 20 ಅಡಿ ಹೂಳು: ನಗರಕ್ಕೆ ತುಂಗಭದ್ರಾ ನದಿ ನೀರನ್ನು ರಾಂಪುರ ಜಲಾಶಯದ ಮೂಲಕ ನೀರು ಶುದ್ಧೀಕರಿಸಿ ಪೂರೈಸಲಾಗುತ್ತಿದೆ. ಅದೇ ರೀತಿ ಕೃಷ್ಣಾ ನೀರನ್ನು ನದಿಯಿಂದ ಎತ್ತಿ ಯರಮರಸ್ ಬಳಿ ಶುದ್ಧೀಕರಿಸಿ ನಗರಕ್ಕೆ ಪೂರೈಸಲಾಗುತ್ತದೆ. ರಾಂಪುರ ಜಲಾಶಯ ಮತ್ತು ಕೃಷ್ಣಾ ನದಿ ಶುದ್ಧೀಕರಣ ಘಟಕಗಳಲ್ಲಿ ದಿನವೂ ಸಂಗ್ರಹವಾಗುತ್ತಿದ್ದ ಹೂಳು ತೆರವಿಗೆ ಇದುವರೆಗೆ ಕಾರ್ಯನಿರ್ವಹಿಸಿದ ನಗರಸಭೆ ಆಯುಕ್ತರು ಆಸಕ್ತಿ ತೋರಿರಲಿಲ್ಲ. ಅದರಿಂದ ಕೃಷ್ಣಾ ನೀರು ಶುದ್ಧೀಕರಣ ಘಟಕದಲ್ಲಿ ಸುಮಾರು 15ರಿಂದ 20 ಅಡಿ ಹೂಳು ಸೇರಿಕೊಂಡಿತ್ತು. ಹಾಗಾಗಿ ಸ್ವಚ್ಛನೀರು ನಗರಕ್ಕೆ ಮರಿಚಿಕೆಯೇ ಆಗಿತ್ತು.
66 ಲಕ್ಷ ಬಳಕೆಯಾಗಿರಲಿಲ್ಲ: ಒಟ್ಟು 66 ಲಕ್ಷ ಹೂಳು ತೆರವು, ಕುಡಿವ ನೀರು ಪೂರೈಕೆ ಯೋಜನೆಯ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಡಲಾಗಿತ್ತು. ಅದರ ಬಳಕೆಯಾಗಿರಲಿಲ್ಲ. ಈಚೆಗೆ ನಗರಸಭೆಗೆ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಸಪ್ಪ ಅವರು ನಗರಸಭೆಯ ನೂತನ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ನೀರು ಶುದ್ಧೀಕರಣ ಕಾರ್ಯಕ್ಕೆ ಚಾಲನೆ ನೀಡಿದ್ದರು.
ಈ ಕುರಿತು “OÚ«ÚsÚ®ÚúڒOæQ ಮಾತನಾಡಿದ ನಗರಸಭೆ ಪೌರಾಯುಕ್ತ ಬಸಪ್ಪ, ಕಳೆದ 8-10 ವರ್ಷಗಳಿಂದ ಹೂಳು ತೆರವುಗೊಂಡಿರಲಿಲ್ಲ ಎಂಬುದು ಗಮನಕ್ಕೆ ಬಂದಿತು. ಅನುದಾನವೂ ಲಭ್ಯವಿದ್ದರಿಂದ ತೆರವು ಕಾರ್ಯ ಕೈಗೆತ್ತಿಕೊಂಡಿದ್ದು, ಆಗಲೇ ಶೇ.90 ರಷ್ಟು ಕಾರ್ಯ ಮುಗಿದಿದೆ. ಮುಂದೆ ನಗರದ ಜನತೆಯ ಅಭಿಲಾಷೆಯಂತೆ ಶುದ್ಧ ಕುಡಿವ ನೀರು ಪೂರೈಕೆಯಾಗಲಿದೆ ಎಂದು ಹೇಳಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಶುದ್ಧೀಕರಣ ಘಟಕಗಳಿದ್ದರೂ ಇಲ್ಲದಂತೆ ಕಲುಷಿತ ನೀರು ಪೂರೈಕೆಯಾಗುತ್ತಿದ್ದ ನಗರಕ್ಕೆ ಶೀಘ್ರದ ಲ್ಲಿಯೇ ಶುದ್ಧ ಕುಡಿಯುವ ನೀರಿನ ಭಾಗ್ಯ ಮತ್ತೆ ಪ್ರಾಪ್ತಿಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

