ರಾಯಚೂರು

ಗಣಿಯಲ್ಲಿ ಗಾಳಿಯಂತ್ರ ಪುನಾರಂಭ: ಸಂತಸ

Published On :

ರಾಯಚೂರು: ಲಿಂಗಸ್ಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ಕಳೆದ 16 ವರ್ಷಗಳಿಂದ ಗಣಿಯ ಸೆಂಟ್ರಲ್ ಶಾಫ್ಟ್ನಲ್ಲಿ ಸ್ಥಗಿತಗೊಂಡಿದ್ದ ವೆಂಟಿಲೇಟರ್ ಗಾಳಿಯಂತ್ರ) ಯಂತ್ರಪುನಾ ಕಾರ್ಯಾರಂಭಕ್ಕೆ ಕ್ರಮ ಕೈಗೊಂಡಿರುವುದು ಟಿಯುಸಿಐ ಹೋರಾಟಕ್ಕೆ ಸಂದ ಗೆಲುವಾಗಿದೆ ಎಂದು ಸಂಘಟನೆ ತಿಳಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯ ಮುಖಂಡರಾದ ಆರ್.ಮಾನಸಯ್ಯ ಮತ್ತು ಶಿವುಕುಮಾರ್, ಸುಮಾರು 2600 ಅಡಿ ಆಳದಲ್ಲಿ ಗಾಳಿಯ ಕೊರತೆಯಿಂದಾಗಿ ಅನೇಕ ಕಾರ್ಮಿಕರು ಉಸಿರಾಟದ ತೊಂದರೆಗೆ ಸಿಲುಕಿದ ಪ್ರಸಂಗಗಳು ನಡೆದಿದ್ದು, ಈಚೆಗೆ ಕಾರ್ಮಿಕ ಅಮರೇಶ ಚಿಕ್ಕಹೆಸರೂರು ಎಂಬುವವರೂ ಸಹ ಸೆಂಟ್ರಲ್ ಶಾಫ್ಟ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗಲೇ ಉಸಿರಾಟದ ತೊಂದರೆಯಿಂದ ಹೃದಯಾಘಾತವಾಗಿ ಸಾವನ್ನಪ್ಪಿದ್ದರು ಎಂದು ತಿಳಿಸಿದ್ದಾರೆ.
  ಅನೇಕ ಕಾರ್ಮಿಕರ ಇಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾಗ ಪ್ರಾಣ ಕಳೆದುಕೊಂಡ ನಿದರ್ಶನಗಳಿವೆ. ಕಾರ್ಮಿಕರ ಜೀವ ಕಳೆದು ಕೊಳ್ಳಲು ಕಾರಣವಾಗಿದ್ದ ಗಾಳಿ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ ಟಿಯುಸಿಐ ಅ.29 ರಂದು ಧರಣಿ ನಡೆಸಿ ಕಾರ್ಮಿಕರು ಗಾಳಿ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಹೋರಾಟ ನಡೆಸಿದ್ದರು.
  ಪರಿಣಾಮ ಸೆಂಟ್ರಲ್ ಶಾಫ್ಟ್ನಲ್ಲಿ ಗಾಳಿಯಂತ್ರ ಕಾರ್ಯನಿರ್ವಹಣೆಗೆ ಮತ್ತೆ ಚಾಲನೆ ದೊರೆತಿದೆ. ಗಣಿಯ ಒಳಭಾಗದಲ್ಲಿ ಈಗಲೂ ಸರಿಯಾದ ರಸ್ತೆಯಿಲ್ಲ. ಕಲ್ಲು ಸ್ಪೋಟಿಸಿದಾಗ ಹೊರಬರುವ ಧೂಳಿನಿಂದ ಮುಕ್ತಗೊಳಿಸಿ ಹೊಸ ತಂತ್ರಜ್ಞಾನ ಅಳವಡಿಸುವ ಮೂಲಕ ಕಾರ್ಮಿಕರ ಬಹುದಿನದ ಸಮಸ್ಯೆಗೆ ಆಡಳಿತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.