ಶಾಂತಿ ಪ್ರಕಾಶನದ ರಜತ ಮಹೋತ್ಸವ: 'ಶಾಂತಿಗಾಗಿ ಸಾಹಿತ್ಯ' ಅಭಿಯಾನ
ಸಿಂಧನೂರು: ರಾಯಚೂರಿನ ಶಾಂತಿ ಪ್ರಕಾಶನದ ರಜತ ಮಹೋತ್ಸವದ ಅಂಗವಾಗಿ ಶಾಂತಿಗಾಗಿ ಸಾಹಿತ್ಯ ಎಂಬ ಶಿರೋನಾಮೆ ಅಡಿಯಲ್ಲಿ ನ.1ರಿಂದ 30ರವರೆಗೆ ರಾಜ್ಯ ವ್ಯಾಪಿ ಅಭಿಯಾನವನ್ನು ಕೈಗೊಂಡಿದ್ದು, ಅದರಂಗವಾಗಿ ರಾಯಚೂರು, ಮಾನ್ವಿ ಮತ್ತು ಸಿಂಧನೂರಿನಲ್ಲಿ ವಿವಿಧ ರಚನಾತ್ಮಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸ್ಥಳೀಯ ಸಂಘಟಕರಾದ ಮಹ್ಮದ್ ಹುಸೇನಸಾಬ ತಿಳಿಸಿದ್ದಾರೆ.
ಶಾಂತಿ ಪ್ರಕಾಶನದಿಂದ ಪ್ರವಾದಿ ವಚನಗಳ ಸಂಗ್ರಹ, ವ್ಯಾಖ್ಯಾನ, ಪ್ರವಾದಿ ಚರಿತ್ರೆ, ಕುಟುಂಬ, ಸಮಾಜ, ಇಸ್ಲಾಮಿ ಕರ್ಮಶಾಸ್ತ್ರ, ಇಸ್ಲಾಮಿ ಸಂಸ್ಕರಣೆ, ಇಸ್ಲಾಮಿ ಆಂದೋಲನ, ಇಸ್ಲಾಮಿ ಜೀವನ ವಿಧಾನ, ಇತಿಹಾಸ, ಬಾಲಸಾಹಿತ್ಯ ಮತ್ತಿತರ ಪುಸ್ತಕಗಳನ್ನು ಪ್ರಕಟಿಸಲಾಗಿದ್ದು, ಅವುಗಳನ್ನು ಜಿಲ್ಲೆಯ ಎಲ್ಲ ಸಾಹಿತಿಗಳನ್ನು ವೈಯಕ್ತಿಕವಾಗಿ ಭೇಟಿಯಾಗಿ ಅವರಿಗೆ ತಲುಪಿಸುವ ಉದ್ದೇಶ ಹೊಂದಿರುವುದಾಗಿ ಹೇಳಿದ್ದಾರೆ. ಅದೇ ರೀತಿ ಸಾರ್ವಜನಿಕ ಸಮ್ಮೇಳನ, ವಿಚಾರಗೋಷ್ಠಿ, ಪುಸ್ತಕ ಮೇಳ, ಮಹಿಳಾ ಮತ್ತು ಮಕ್ಕಳ ಸಮ್ಮೇಳನ, ಬಹುಭಾಷ ಕವಿಗೋಷ್ಠಿ, ವಸ್ತುಪ್ರದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದ್ದಾರೆ.
ಸ್ವಾಗತ ಸಮಿತಿ ಅಸ್ತಿತ್ವಕ್ಕೆ: ಎಲ್ಲ ಕಾರ್ಯಕ್ರಮಗಳ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು ಗೌರವಾಧ್ಯಕ್ಷರಾಗಿ ಕಸಾಪ ಜಿಲ್ಲಾಧ್ಯಕ್ಷ ಮಹಾಂತೇಶ ಮಸ್ಕಿ, ಜಸಾಪ ಜಿಲ್ಲಾಧ್ಯಕ್ಷ ಅಯ್ಯಪ್ಪ ತುಕ್ಕಾಯಿ, ಅಧ್ಯಕ್ಷರಾಗಿ ಕಸಾಪ ಗೌರವಾಧ್ಯಕ್ಷ ಎಸ್.ಶರಣೇಗೌಡ, ಉಪಾಧ್ಯಕ್ಷರಾಗಿ ಸಾಹಿತಿ ವೀರಹನುಮಾನ್, ಸಂಚಾಲಕರಾಗಿ ಮಹ್ಮದ್ ಹುಸೇನ್ ಸಾಬ, ಸಹಸಂಚಾಲಕರಾಗಿ ಅಬ್ದುಲ್ ಸಮದ್ ಪಾಷ, ಖಜಾಂಚಿ ಶಿಕ್ಷಕ ಖಾಜಾ ಹುಸೇನ್, ಸದಸ್ಯರಾಗಿ ಸಹಪ್ರಾಧ್ಯಾಪಕ ಶೀಲಾದಾಸ್, ಸುದ್ದಿಬಿಂಬ ಪತ್ರಿಕೆ ಸಂಪಾದಕ ಡಿ.ಎಚ್.ಕಂಬಳಿ, ಉಪನ್ಯಾಸಕ ದಸ್ತಗೀರಸಾಬ ದಿನ್ನಿ, ನಿವೃತ್ತ ಉಪನ್ಯಾಸಕ ಸಿ.ಶರಣಪ್ಪ, ಸಾಹಿತಿ ಹೆಚ್.ಹೆಚ್. ಮ್ಯಾದಾರ, ಸುದ್ದಿಮೂಲ ವರದಿಗಾರ ಪಿ. ಪರಮೇಶ, ಶಿಕ್ಷಕರಾದ ಹುಸೇನಬಾಷಾ ಸಿಂಧನೂರು, ಸಲೀಂಪಾಷಾ ರಾಯಚೂರು, ಸಬ್ಜಲಿಸಾಬ ಮಾನ್ವಿ ನೇಮಕವಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

