ಗುಣಮಟ್ಟದ ಪ್ರಸಾರ ಕೇಬಲ್ ಆಪರೇಟರ್ಗಳ ಧ್ಯೇಯವಾಗಲಿ: ಶಾಸಕ ಶಿವರಾಜ ಪಾಟೀಲ್ ಕರೆ
ಕ.ಪ್ರ.ವಾರ್ತೆ, ರಾಯಚೂರು, ನ.10
ಗುಣಮಟ್ಟದ ಸೇವೆ ಒದಗಿಸುವಿಕೆ ಮೂಲಕ ಜನಮನ್ನಣೆ ಗಳಿಸುವ ಜತೆಗೆ ಕೇಬಲ್ ಆಪರೇಟರ್ಗಳು ಸಂಘಟಿತರಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಶಾಸಕ ಡಾ.ಶಿವರಾಜ್ ಪಾಟೀಲ್ ಹೇಳಿದರು.
ನಗರದಲ್ಲಿ ಭಾನುವಾರ ಟ್ಯಾಗೋರ್ ಬಿ.ಇಡಿ. ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಕೇಬಲ್ ಆಪರೇಟರ್ಸ್ ಅಸೋಸಿಯೇಷನ್ ಉದ್ಘಾಟಿಸಿ ಮಾತನಾಡಿ, ನಗರದ ಮನೆಗಳಿಗೆ ಮನರಂಜನೆ ಮತ್ತಿತರೆ ಕಾರ್ಯಕ್ರಮಗಳನ್ನು ತಲುಪಿಸುವ ಮೂಲಕ ಸಮಾಜದಲ್ಲಿ ಬದಲಾವಣೆ ತರುವಲ್ಲಿ ಕೇಬಲ್ ಟಿವಿ ಆಪರೇಟರ್ಗಳು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದರು.
ಇಂದಿನ ದಿನಗಳಲ್ಲಿ ಸಮಾಜದಲ್ಲಿ ಕೇಬಲ್ ಟಿವಿ ಸೇವೆಗೆ ಮಹತ್ವವಿದೆ. ಜನರ ಮನೋರಂಜನೆಗೆ ಧಕ್ಕೆಯಾಗದಂತೆ ಗುಣಮಟ್ಟದ ಸೇವೆ ಒದಗಿಸಿ ಮೆಚ್ಚುಗೆ ಗಳಿಸುವಂತೆ ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಹಾಗೂ ಜಿಪಂ ಮಾಜಿಸದಸ್ಯ ಬಷೀರುದ್ದೀನ್ ಮಾತನಾಡಿ, ಕೇಬಲ್ ಆಪರೇಟರ್ಗಳು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದರ ಜತೆ ಪಾರದರ್ಶಕವಾಗಿ ಸಂಘ ಮುನ್ನಡೆಸಿಕೊಂಡು ಹೋಗಬೇಕಿದೆ. ಎಲ್ಲರೂ ಒಂದೇ ಕುಟುಂಬದ ಸದಸ್ಯರು ಎಂಬ ಭಾವನೆ ಇಸಿಕೊಂಡು ಪ್ರಗತಿ ಹೊಂದುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಅಸೋಸಿಯೇಷನ್ ಸಲಹೆಗಾರ ರವೀಂದ್ರ ಜಲ್ದಾರ್, ಪ್ರಧಾನ ಕಾರ್ಯದರ್ಶಿ ರವಿಕಿರಣ್ ಸರಸಂಕರ್, ಜಂಟಿ ಕಾರ್ಯದರ್ಶಿ ಜಿ.ವೆಂಕಟೇಶಗೌಡ, ಖಜಾಂಚಿ ವೀರೇಂದ್ರ ರೆಡ್ಡಿ, ಸ್ಥಳೀಯ ವಾಹಿನಿಗಳಾದ ಅಮೋಘ ಚಾನೆಲ್ನ ಮ್ಯಾನೇಜರ್ ಅಶೋಕ್, ಇನ್-ಕೇಬಲ್ನ ಚಂದ್ರಶೇಖರ ರೆಡ್ಡಿ ಸೇರಿ ಕೇಬಲ್ ನಿರ್ವಾಹಕರು, ಸಹಾಯಕ ಸಿಬ್ಬಂದಿ ಕಾರ್ಯಕ್ರಮದಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

