ರಾಯಚೂರು

ಗೊಂದಲದ ಮಧ್ಯೆ ಮಸ್ಕಿ ಗ್ರಾಪಂ ಸಭೆ

Published On :

ಮಸ್ಕಿ: ಸದಸ್ಯರ ಹಾಜರಾತಿ ಕೊರತೆ ಮಧ್ಯೆಯೂ ಇಲ್ಲಿನ ಗ್ರಾಪಂನ ಸಭೆ ಬುಧವಾರ ನಡೆಸಿದ್ದನ್ನು ಕೆಲ ಸದಸ್ಯರು ಆಕ್ಷೇಪಿಸಿದ್ದರಿಂದ ಗೊಂದಲದಲ್ಲಿಯೇ ಸಭೆ ನಡೆಯಿತು. ಗ್ರಾಪಂ ಸಭೆಯಲ್ಲಿ ಮೊದಲಿಗೆ ಪಿಡಿಒ ಹನುಮೇಶ ಕುಲಕರ್ಣಿ, 13ನೇ ಹಣಕಾಸು ಯೋಜನೆಯಡಿ 15 ಲಕ್ಷ ಮಂಜೂರಾಗಿದೆ. ಪ್ರತಿ ವಾರ್ಡಿಗೆ 1 ಲಕ್ಷದಂತೆ ಅಭಿವೃದ್ಧಿ ಕೆಲಸಕ್ಕೆ ಒದಗಿಸಲಾಗುತ್ತದೆ. ಗ್ರಾಮ ಸ್ವರಾಜ್ ಯೋಜನೆಯಡಿ 1ನೇ ವಾರ್ಡಿನಲ್ಲಿ 11.95 ಲಕ್ಷ ವೆಚ್ಚದ ಹೈಟೆಕ್ ಶೌಚಾಲಯಕ್ಕೆ ಅನುದಾನ ಮಂಜೂರಾಗಿದೆ ಎಂದರು.
ಅಲೆಮಾರಿಗಳಿಗಾಗಿ ಗ್ರಂಥಾಲಯ: ಉದ್ಯೋಗ ಖಾತ್ರಿ ಯೋಜನೆಯ ಅನುದಾನದ ಮಂಜೂರಾತಿಗಾಗಿ ಕ್ರಿಯಾ ಯೋಜನೆ  ಸಿದ್ಧಪಡಿಸಿ ಅನುಮೋದನೆಗೆ ಕಳುಹಿಸಲಾಗಿದೆ. ಅಲೆಮಾರಿಗಳಿಗಾಗಿ ಗ್ರಂಥಾಲಯ ಮಂಜೂರಾಗಿದ್ದು, ಸ್ಥಳ ಪರಿಶೀಲಿಸಿ ನಿರ್ಮಿಸಲಾಗುವುದು ಎಂದರು. ಸಭೆಯ ಕೊನೆಗೆ ಗ್ರಾಪಂ ಸದಸ್ಯರಾದ ಮಲ್ಲಿಕಾರ್ಜುನ ಕಾಸ್ಲಿ, ಶಂಕ್ರಪ್ಪ ಮೋಚಿ, ರಮೇಶ ನಾಯಕ, ಮುದಿಯಪ್ಪ ಪೂಜಾರಿ ಅವರು ಆಗಮಿಸಿ, ಸದಸ್ಯರ ಹಾಜರಾತಿಯ ಕೊರತೆಯ ಮಧ್ಯೆಯೂ ಸಭೆ ನಡೆಸುತ್ತಿರುವುದಕ್ಕೆ ಆಕ್ಷೇಪಿಸಿದರು.
ಏಕಪಕ್ಷೀಯ ನಿರ್ಧಾರಕ್ಕೆ ವಿರೋಧ: ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ಯೋಜನೆ ಜಾರಿಗೆ ನಿರ್ಧಾರ ಕೈಗೊಳ್ಳುತ್ತಿರುವುದಕ್ಕೆ ವಿರೋಧಿಸಿದರು. ವಾಗ್ವಾದ, ಗೊಂದಲದ ಮಧ್ಯೆಯೇ ಕೊನೆಗೊಂಡಿತು.
ಕಲುಷಿತ ಆಹಾರ ಸೇವನೆ ಶಂಕೆ; 14 ಮಕ್ಕಳು ಅಸ್ವಸ್ಥ
ಲಿಂಗಸ್ಗೂರು: ತಾಲೂಕಿನ ಪೈದೊಡ್ಡಿ ಗ್ರಾಮದ ಅಂಗನವಾಡಿ ಕೇಂದ್ರದ ಮಕ್ಕಳು ಆಹಾರ ಸೇವಿಸಿದ ನಂತರ ತೀವ್ರ ಅಸ್ವಸ್ಥಗೊಂಡಿದ್ದು, ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಮಧ್ಯಾಹ್ನ ಮಾಡಿದ ಉಪ್ಪಿಟ್ಟು ಸೇವಿಸಿದ ನಂತರ 14 ಮಕ್ಕಳಿಗೆ ವಾಂತಿಯಾಗಿ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಡಿಪಿಒ ಪ್ರಭಾಕರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.