ಬೀಡಾಡಿ ದನಗಳ ಹಾವಳಿ: ಕ್ರಮಕ್ಕೆ ನಾಗರಿಕರ ಒತ್ತಾಯ
ದೇವದುರ್ಗ: ಪಟ್ಟಣದ ಮುಖ್ಯ ರಸ್ತೆ ಸೇರಿ ಎಲ್ಲ ರಸ್ತೆಗಳಲ್ಲಿ ಬಿಡಾಡಿ ದನಗಳದ್ದೇ ಕಾರುಬಾರು. ರಸ್ತೆಯಲ್ಲಿಯೇ ವಿಹರಿಸುವ ದನಗಳಿಂದಾಗಿ ಸಮಸ್ಯೆಗಳು ಹತ್ತು ಹಲವಾರು. ಯಾರಿಗೂ ಜಗ್ಗದ, ಬಗ್ಗದ ಬಿಡಾಡಿ ದನಗಳಿಂದ ರಸ್ತೆಯಲ್ಲಿ ಸಂಚರಿಸುವ ಎಲ್ಲರಿಗೂ ತೊಂದರೆ ಮಾತ್ರ ತಪ್ಪಿಲ್ಲ.
ಪಟ್ಟಣದ ಡಾ.ಅಂಬೇಡ್ಕರ್ ವೃತ್ತ, ಹಜರತ್ ಜಹಿರುದ್ದೀನ್ ಪಾಶಾ ಚೌಕ್, ಮಿನಿ ವಿಧಾನಸೌಧ ಸೇರಿ ಪ್ರಮುಖ ರಸ್ತೆಗಳಲ್ಲಿ ಬೀಡಾಡಿ ದನಗಳು ಹಗಲ್ಛು ರಾತ್ರಿ ಎನ್ನದೇ ಮಲಗುವುದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಪಟ್ಟಣದ ಇಕ್ಕಟಾದ ರಸ್ತೆಗಳಲ್ಲೂ ದನಗಳು ಮಲಗುತ್ತಿವೆ. ಇದರಿಂದ ಪಾದಚಾರಿಗಳೂ ತೊಂದರೆ ಎದುರಿಸುವಂತಾಗಿದೆ. ಅನೇಕ ಸಂದರ್ಭದಲ್ಲಿ ವಾಹನ ಸವಾರರು ದನಗಳು ರಸ್ತೆಯಲ್ಲಿ ಮನಬಂದಂತೆ ಓಡಾಡುವುದರಿಂದ ವಾಹನಗಳಿಂದ ಬಿದ್ದು ಗಾಯಗೊಂಡ ಘಟನೆಗಳೂ ನಡೆದಿವೆ.
ಪುರಸಭೆ ವತಿಯಿಂದ ಇಂತಹ ಬಿಡಾಡಿ ದನಗಳ ಮಾಲೀಕರಿಗೆ ಎಚ್ಚರಿಕೆ ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಭರವಸೆ: ಪಟ್ಟಣದಲ್ಲಿ ಹೆಚ್ಚುತ್ತಿರುವ ಬಿಡಾಡಿ ದನಗಳ ಹಾವಳಿ ನಿಯಂತ್ರಣಕ್ಕೆ ಶೀಘ್ರದಲ್ಲಿಯೇ ದನಗಳ ಮಾಲಿಕರಿಗೆ ನೋಟಿಸ್ ನೀಡಿ ಎಚ್ಚರಿಸಲಾಗುತ್ತದೆ ಎಂದಿರುವ ಪುರಸಭೆ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ ಅವರು, ಮಾಲಿಕ ದನಗಳನ್ನು ರಸ್ತೆಯಿಂದ ಕೊಂಡೊಯ್ಯದಿದ್ದಲ್ಲಿ ಅಂಥವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

