ಸಾರ್ವಜನಿಕರಿಗೆ ಕಿರುಕುಳ: ಪುರಸಭೆ ಮುಖ್ಯಾಧಿಕಾರಿ ಅಮಾನತಿಗೆ ಆಗ್ರಹ
ಲಿಂಗಸ್ಗೂರು: ಸ್ಥಳೀಯ ಪುರಸಭೆ ಮುಖ್ಯಾಧಿಕಾರಿಗಳು ಸಾರ್ವಜನಿಕರಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದು, ಕೂಡಲೇ ಮುಖ್ಯಾಧಿಕಾರಿಯನ್ನು ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿ ಉಟಕನೂರು ಬಸವಲಿಂಗ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪುರದಪ್ಪ ವಕೀಲರ ನೇತೃತ್ವದಲ್ಲಿ ಸಾರ್ವಜನಿಕರು ಶನಿವಾರ ಪ್ರತಿಭಟನೆ ನಡೆಸುವ ಮೂಲಕ ಸಹಾಯಕ ಆಯುಕ್ತರ ಕಚೇರಿ ಶಿರಸ್ತೇದಾರ ಭಾನುಮತಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಗುರುಗುಂಟಾ ರಸ್ತೆಯ ಬಡಾವಣೆಯಲ್ಲಿ ವಾಸಿಸುತ್ತಿರುವ ನಾಗರಿಕರಿಗೆ ನಿವೇಶನ ನಿರ್ಮಿಸಲಾದ ಜಾಗೆಯ ಖರೀದಿ ಪತ್ರ, ವರ್ಗಾವಣೆ ಪತ್ರ, ಇನ್ನಿತರೆ ದಾಖಲೆ ಪರಿಶೀಲಿಸಲು ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿತ್ತು. ಅದರಂತೆ ರಸ್ತೆಗಾಗಿ ಜಾಗೆ ಕಾಯ್ದಿರಿಸುವಂತೆ ಪುರಸಭೆ ಕೌನ್ಸಿಲ್ನಲ್ಲಿ ನಿರ್ಣಯಿಸಲಾಗಿತ್ತು. ಸದರಿ ವಿಚಾರಣೆಯನ್ನು ಅಧ್ಯಕ್ಷರು ಹಾಗೂ ಸದಸ್ಯರು, ಮುಖ್ಯಾಧಿಕಾರಿಗಳು ಕೈಗೊಂಡಿದ್ದರು. ಮುಖ್ಯಾಧಿಕಾರಿಗಳು ನಾಗರಿಕರಿಗೆ ಕಾಗದ ಪತ್ರ ಹಾಜರು ಪಡಿಸುವಂತೆ ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದು, ಅಧಿಕಾರ ದುರುಪಯೋಗ ಮಾಡಿಕೊಂಡು ಸಾಕಷ್ಟು ಹಣ ದೋಚುತ್ತಿದ್ದಾರೆಂದು ಆರೋಪಿಸಿದರು.
ಪುರಸಭೆ ಮುಖ್ಯಾಧಿಕಾರಿಗಳು ಕಾನೂನು ಉಲ್ಲಂಘನೆ ಮಾಡಿ ನಕಾಶೆಯಲ್ಲಿ ನಾಗರಿಕ ಸೌಲಭ್ಯ ಮತ್ತು ಉದ್ಯಾನವನ ಜಾಗೆಗಳನ್ನು ಸ್ವತಃ ಪುರಸಭೆಯವರು ಲಂಚ ಪಡೆದು, ಖಾತೆಗಳನ್ನು ಕೊಟ್ಟು, ಖರೀದಿಗೆ ಅನುವು ಮಾಡಿಕೊಟ್ಟಿರುತ್ತಾರೆ. ನೋಂದಾಯಿಸಿದ ನಂತರ ಪುನಃ ವರ್ಗಾವಣೆ ಆದೇಶ ನೀಡಿ ಮನೆ ಕಟ್ಟಲು ಪರವಾನಗಿ ನೀಡಿರುತ್ತಾರೆ. ಈ ಎಲ್ಲ ಅಂಶಗಳ ಬಗ್ಗೆ ಗಮನ ಹರಿಸಿ ನಾಗರಿಕರಲ್ಲಿ ವಿವಾದ ಹುಟ್ಟಿಸುವ ಹಾಗೂ ಗೊಂದಲ ಸೃಷ್ಟಿಸುವ, ಜೀವ ಮತ್ತು ಆಸ್ತಿಗೆ ಧಕ್ಕೆ ತರುವ ಚಟುವಟಿಕೆಯುಳ್ಳ ಅಧಿಕಾರಿಯನ್ನು ಕೂಡಲೇ ಅಮಾನತ್ತುಗೊಳಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

