ರಾಯಚೂರು

ವಾರ್ಡ್ ಸಭೆಗಳ ಮೂಲಕ ಖಾತ್ರಿ ಕಾಮಗಾರಿಗಳ ಆಯ್ಕೆ

Published On :

ಮುದಗಲ್: ಪಟ್ಟಣ ಸಮೀಪದ ನಾಗಲಾಪುರ ಗ್ರಾ.ಪಂ. ಕಾರ್ಯಲಯದಲ್ಲಿ ಶನಿವಾರ ಸಾಮಾನ್ಯ ಸಭೆ ಜರುಗಿತು.  ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚನ್ನಮಲ್ಲಯ್ಯ ಸ್ವಾಮಿ ಕನ್ನಾಳ ಮಾತನಾಡಿ, ರಾಜ್ಯ ಸರ್ಕಾರದ ಸೂಚನೆಯಂತೆ 2014-15ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳನ್ನು ಆಯ್ದುಕೊಳ್ಳಲು ಮೊದಲು ಚುನಾಯಿತ ಸದಸ್ಯರು ತಮ್ಮ ಕ್ಷೇತ್ರದಲ್ಲಿ ವಾರ್ಡ್ ಸಭೆಗಳನ್ನು ನಡೆಸುವ ಮೂಲಕ ಕಾಮಗಾರಿ ಗುರ್ತಿಸರಿಸಬೇಕಾಗಿದೆ ಎಂದರು.
ಇಲಾಖೆಯಿಂದ ಗ್ರಾಪಂ ಸದಸ್ಯರಿಗೆ ಕಾಮಗಾರಿ ನಮೂದಿಸುವ ಖಾಲಿ ಪುಸ್ತಕ ವಿತರಿಸಲಾಗಿದೆ. ನಿಗದಿತ ಸಮಯದಲ್ಲಿ ವಾರ್ಡ್ ಸಭೆ ನಡೆಸಿ ಭರ್ತಿ ಮಾಡಿದ ಪುಸ್ತಕಗಳನ್ನು ಗ್ರಾಪಂಗೆ ಮರಳಿಸುವ ಜವಾಬ್ದಾರಿ ಗ್ರಾ.ಪಂ. ಸದಸ್ಯರ ಮೇಲಿದೆ ಎಂದರು.
ಗ್ರಾಪಂ ಸದಸ್ಯ ಆದೇಶ ನಾಯಕ (ಆದಪ್ಪ) ಲಿಂಗಸ್ಗೂರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನಾಮನಿರ್ದೇಶನ ಸದಸ್ಯರಾಗಿ ನೇಮಕಗೊಂಡಿರುವ ಕಾರಣ ಗ್ರಾಪಂ ಆಡಳಿತ ವತಿಯಿಂದ ಸಭೆ ನಂತರ ಸನ್ಮಾನಿಸಲಾಯಿತು. ಗ್ರಾ.ಪಂ. ಸದಸ್ಯ ಹನಮಪ್ಪ ಭೋವಿ ಉಳಿಮೇಶ್ವರ ಅನಾರೋಗ್ಯದಿಂದಾಗಿ ಮೃತಪಟ್ಟಿರುವ ಕಾರಣ ಗ್ರಾಪಂ ಸಭೆಯಲ್ಲಿ 2 ನಿಮಿಷಗಳ ಕಾಲ ಮೌನಾಚಾರಣೆ ಮಾಡಿ ಸಂತಾಪ ಸೂಚಿಸಲಾಯಿತು. ಗ್ರಾಪಂ ಅಧ್ಯಕ್ಷೆ ಅನಸೂಯ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಸೋಮಶೇಖರ, ವಿಜಯ, ಅಮರಪ್ಪ ಗಡಾದ್, ಲಾಲಪ್ಪ ನಾಯ್ಕ, ಮಾಳಮ್ಮ, ಲಕ್ಷ್ಮವ್ವ, ಗ್ರಾಪಂ ಲೆಕ್ಕಿಗ ಮಲ್ಲಿಕಾರ್ಜುನ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.