ರಾಯಚೂರು

ನಾಳೆ ಅಡ್ಡಪಲ್ಲಕ್ಕಿ ಮಹೋತ್ಸವ: ತಾಲೂಕು ಆಡಳಿತಕ್ಕೆ ಎಚ್ಚರಿಕೆ

Published On :

ದೇವದುರ್ಗ: ಪಟ್ಟಣದಲ್ಲಿ ನ.24 ರಂದು ನಡೆಸಲುದ್ದೇಶಿಸಿರುವ ಅಡ್ಡಪಲ್ಲಕ್ಕಿ ಮಹೋತ್ಸವವನ್ನು ತಾಲೂಕು ಆಡಳಿತತಡೆಯದಿದ್ದರೆ ಪಟ್ಟಣದಲ್ಲಿ ನಡೆಯುವ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ತಾಲೂಕು ಮತ್ತು ಜಿಲ್ಲಾಡಳಿತ ಹೊಣೆಯಾಗಲಿದೆ ಎಂದು ಬಸವ ಕೇಂದ್ರದ ಅಧ್ಯಕ್ಷ ಎ. ಪ್ರಕಾಶ ಪಾಟೀಲ್ ಎಚ್ಚರಿಸಿದ್ದಾರೆ.
ಪಟ್ಟಣದಲ್ಲಿ ಅವರು ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿನ ಶಿಖರ ಮಠದಲ್ಲಿ ಅಡ್‌ಡಪಲ್ಲಕ್ಕಿ ಮಹೋತ್ಸವ ಆಯೋಜಿಸಿದ್ದು, ಬಸವ ಕೇಂದ್ರ ಮತ್ತು ಪ್ರಗತಿಪರ ಸಂಘಟನೆಗಳು ಇಂಥ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಅಮಾನವೀಯ: ನ.24ರಂದು ನಡೆಯಲಿರುವ ಅಡ್ಡಪಲ್ಲಕಿ ಮಹೋತ್ಸವವನ್ನು ತಡೆಹಿಡಿಯಲು ತಾಲೂಕು ಆಡಳಿತಕ್ಕೆ ಈಗಾಗಲೇ ಮನವಿ ಮಾಡಿದ್ದು, ಆಡಳಿತ ಅಥವಾ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ, ಮಾನವರು ಮತ್ತೊಬ್ಬ ಮನುಷ್ಯನನ್ನು ಹೊತ್ತು ಸಾಗುವುದು ಅಮಾನವೀಯ ಘಟನೆಯಾಗಿದೆ. ಇದರ ಬದಲಿಗೆ ವಾಹನಗಳಲ್ಲಿ ಅಡ್ಡಪಲ್ಲಕಿ ಕೊಂಡೊಯ್ಯುವಂತೆ ಅವರು ಸಲಹೆ ನೀಡಿದರು.
ಇಂತಹ ಮೌಢ್ಯದ ಆಚರಣೆಗೆ ಬಸವ ಕೇಂದ್ರ ಸೇರಿ ಮತ್ತಿತರೆ ಪ್ರಗತಿ ಪರ ಸಂಘಟನೆಗಳಿಂದ ತೀವ್ರ ವಿರೋಧವಿದೆ ಎಂದು ಹೇಳಿದರು.
ಈ ವೇಳೆ ಪ್ರಗತಿಪರ ವೇದಿಕೆಯ ಮರಿಲಿಂಗಪ್ಪ ಕೋಳೂರು, ಬಸವ ಕೇಂದ್ರದ ಮಾಜಿ ಅಧ್ಯಕ್ಷ ಪ್ರಭು ಗದ್ಗಿ, ಅಮರೇಶ ಪಾಟೀಲ್ ಪರತಪೂರ, ಪುರಸಭೆ ಮಾಜಿ ಉಪಾಧ್ಯಕ್ಷ ಲಕ್ಷ್ಮಣ ಗೋಸಲ, ಪುರಸಭೆ ಮಾಜಿ ಸದಸ್ಯ ರಮೇಶ ಚಲುವಾದಿ, ನರಸಪ್ಪ ವಕೀಲರು, ಬಸವರಾಜ ಹೂವಿನಹೆಡ್ಗಿ, ಶಿವರಾಜ ಅಕ್ಕರಕಿ, ಆಂಜನೇಯ ಬಡಿಗೇರ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.